Pushpaka Vimana: (ನ.18): ಪುಷ್ಪಕ ವಿಮಾನದ ಬಗ್ಗೆ ಇಂದಿಗೂ ಸುದ್ದಿಯಾಗುತ್ತಿದೆ ಈ ದೇಶ! ಜಗತ್ತಿನ ಮೊದಲ ಪೈಲಟ್ ಎಂದು ಶ್ರೀಲಂಕ ಸರ್ಕಾರ ಪ್ರತಿಪಾದಿಸುತ್ತಿದೆ.ರಾಮಯಣದ ಕಾಲದಲ್ಲಿ ಲಂಕೆಯಲ್ಲಿ ವಿಮಾನ ನಿಲ್ದಾಣಗಳಿದ್ದವು ಎಂದು ಲಂಕಾ ನಾಗರಿಕರು ಇಂದಿಗೂ ನಂಬಿದ್ದಾರೆ.
ರಾವಣನ ವಾಸವಿದ್ಧ ಲಂಕೆ, ಈಗ ಶ್ರೀಲಂಕಾ ಎಂದು ಬದಲಾಗಿದೆ. ಆದರೆ ಈ ಚರಿತ್ರೆ ಖಚಿತಪಡಿಸಿಕೊಳ್ಳಲು, ಇತಿಹಾಸ ಕಾಲದಲ್ಲಿ ಹೊಂದಿದ್ದ ತಾಂತ್ರಿಕ ಶಕ್ತಿಯನ್ನು ಅರಿಯಲು ಪ್ರಯತ್ನ ಮುಂದುವರಿಸಲಿದ್ದಾರೆ. ಈ ಸಂಶೋಧನೆಯಲ್ಲಿ ಪಾಲ್ಗೊಳ್ಳಲು ಭಾರತಕ್ಕೂ ಆಹ್ವಾನ ನೀಡಲಾಗಿದೆ.
ರಾಮಯಣದಲ್ಲಿ ನೋಡಿರುವಹಾಗೆ, ಲಂಕೆಯ ಅಧಿಪತಿ ರಾವಣ ತನ್ನ ಪುಷ್ಪಕ ವಿಮಾನದಲ್ಲಿ ಸೀತೆಯನ್ನು ಅಪಹರಿಸಿ ಲಂಕೆಗೆ ಕರೆತಂದಿದ್ದ. ಆದರೆ, ಈದೀಗ ಶ್ರೀಲಂಕ ಜನರು, ರಾವಣ ಇದ್ದದ್ದು ನಿಜ ಹಾಗೂ ಅಪಹರಣಕ್ಕೆ ಬಳಸಿದ್ದ ಪುಷ್ಪಕ ವಿಮಾನ ಇದ್ದದ್ದು ನಿಜ ಎಂದು ಭಾವಿಸಿದ್ದಾರೆ.

ಶ್ರೀಲಂಕಾ ನಾಗರಿಕ ವಿಮಾನಯಾನ ಪ್ರಾಧಿಕಾರದ ಮಾಜಿ ಉಪಾಧ್ಯಕ್ಷ ಶಶಿ ಧನತುಂಗೆ ಲಂಕಾದಾದ್ಯಂತ ಸಾಕ್ಷ್ಯಗಳಿಗಾಗಿ ಹುಡುಕಾಡಿದ್ದಾರೆ! ಅವರಿಗೆ ರಾವಣ ಹಾಗೂ ವಿಮಾನ ಕಾಲ್ಪನಿಕ ಸಂಗತಿಗಳಲ್ಲ ಎಂದು ಖಚಿತವೂ ಆಗಿದೆಯಂತೆ. ಅವರು ಹೇಳುವ ಪ್ರಕಾರ, ಆಗಿನ ಕಾಲದ ವಿಮಾನಗಳು, ನಿಲ್ದಾಣಗಳು ಈಗಿನ ಕಾಲದಂತೆ ಇರದಿರಬಹುದು. ಆದರೆ ಶ್ರೀಲಂಕಾ ಮತ್ತು ಭಾರತೀಯರ ಬಳಿ ಆ ಕಾಲದಲ್ಲಿ ಅತ್ಯಾಧುನಿಕ ತಂತ್ರಜ್ಞಾನವಂತೂ ಇತ್ತು ಎನ್ನುತ್ತಾರೆ.
ಪುಷ್ಪಕ ವಿಮಾನ ಮೊದಲು ಇದ್ದಿದ್ದು,ಶ್ರೀಲಂಕನ್ನರು ಮೊದಲು ವಿಮಾನ ಓಡಿಸಿದ್ದು ರಾವಣ ಎಂದಿದ್ದರೂ ಭಾರತೀಯ ಪುರಾಣಗಳು ಅದನ್ನು ಸಮರ್ಥಿಸುವುದಿಲ್ಲ. ಪುಷ್ಪಕ ವಿಮಾನ ಮೊದಲು ಇದ್ದಿದ್ದು ಬ್ರಹ್ಮನ ಬಳಿ. ಅನಂತರ ಅದು ವಂಶಪರಂಪರೆಯಾಗಿ ಕುಬೇರನಿಗೆ ಹೋಯಿತು ಎಂದು ಇಂದಿಗೂ ನಂಬಿದ್ದಾರೆ.
ಈತ ಇದ್ದಿದ್ದು ಮೊದಲು ಲಂಕೆಯಲ್ಲೇ. ತನ್ನ ಮಲತಾಯಿಯ ಮಗನಾದ ಕುಬೇರನಿಂದ ರಾವಣ ಆ ವಿಮಾನವನ್ನು ಬಲಾತ್ಕಾರವಾಗಿ ಕಿತ್ತುಕೊಂಡ. ರಾವಣ ಮೂಲತಃ ಉತ್ತರ ಭಾರತೀಯ. ರಾವಣನ ನಿಧನದ ನಂತರ ವಿಮಾನ ವಿಭೀಷಣನ ಪಾಲಾಯಿತು ಎನ್ನುತ್ತದೆ ವಾಲ್ಮೀಕಿ ರಾಮಾಯಣ.