Mugil Pete Movie Release: (ನ.18): ರವಿಚಂದ್ರನ್ ಪುತ್ರ ಮನು ಅಭಿನಯದ “ಮುಗಿಲ್ ಪೇಟೆ” (mugil Pete)ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯು/ಎ ಪ್ರಮಾಣಪತ್ರ(certificate) ನೀಡಿದೆ. ಚಿತ್ರ ನವೆಂಬರ್ 19 ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಸಂಬಂಧಗಳಿಗೆ ಬೆಲೆ ಕೊಡುವ ಕುಟುಂಬ ಒಂದು ಕಡೆ ಆದರೆ, ಸಂಬಂಧಗಳನ್ನು ಕಡೆಗಾಣಿಸುವ ಕುಟುಂಬ ಮತ್ತೊಂದು ಕಡೆ. ಈ ಎರಡು ಕುಟುಂಬದ ಎರಡು ಜೀವಗಳ ನಡುವೆ ಪ್ರೀತಿ ಆದಾಗ ಏನಾಗುತ್ತದೆ ಎನ್ನುವ ಕಥೆಯನ್ನು “ಮುಗಿಲ್ ಪೇಟೆ” ಹೊಂದಿದೆ.
ಚಿತ್ರವನ್ನು ಬೆಂಗಳೂರು, ಚಿಕ್ಕಮಗಳೂರು, ಹಾಸನ, ಸಕಲೇಶಪುರ, ಕುಂದಾಪುರ, ತೀರ್ಥಹಳ್ಳಿ ಮುಂತಾದ(Shooting) ಕಡೆ ಶೂಟಿಂಗ್ ಮಾಡಲಾಗಿದೆ. ಚಿತ್ರ ಕೌಟುಂಬಿಕ ಸನ್ನಿವೇಶ, ಪ್ರೀತಿ, ಸಾಹಸ, ಹಾಸ್ಯ ಎಲ್ಲವನ್ನೂ ಒಳಗೊಂಡಿದೆ.
17 ಅವತಾರಗಳಲ್ಲಿ ಸಾಧುಕೋಕಿಲ:
ಸಿನಿಮಾದಲ್ಲಿ ಸಾಧುಕೋಕಿಲ, ರಂಗಾಯಣ ರಘು, ತಾರಾ, ಅವಿನಾಶ್ ಅಭಿನಯಿಸಿದ್ದಾರೆ. ಇದೇ ಮೊದಲ(sadhu kokila) ಬಾರಿಗೆ ಸಾಧುಕೋಕಿಲ ಅವರು ಒಂದೇ ಚಿತ್ರದಲ್ಲಿ 17 ಅವತಾರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇಂದೊಂದು ದಾಖಲೆ ಆಗಿದೆ.
ಮುಗಿಲ್‌ಪೇಟೆಗೆ ಎಸ್. ಭರತ್ ನಿರ್ದೇಶನ ಇದೆ. ಚಿತ್ರಕ್ಕೆ ನಿರ್ಮಾಪಕಿ ರಕ್ಷ ವಿಜಯಕುಮಾರ್ ಬಂಡವಾಳ ಹೂಡಿದ್ದಾರೆ. ಶ್ರೀಧರ್ ವಿ ಸಂಭ್ರಮ್ ಸಂಗೀತ ಚಿತ್ರಕ್ಕಿದೆ.
ಚಿತ್ರದ ಟ್ರೇಲರ್ ಹಾಗೂ ಹಾಡುಗಳಿಗೆ ಜನರಿಂದ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಕ್ರೇಜಿಸ್ಟಾರ್ ರವಿಚಂದ್ರನ್ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ರವಿಚಂದ್ರನ್ ಪುತ್ರ ಈಗ ಯಾವ ಮ್ಯಾಜಿಕ್ ಮಾಡುತ್ತಾರೆ ಎನ್ನುವುದು ಚಿತ್ರ ಬಿಡುಗಡೆ ನಂತರ ತಿಳಿಯಲಿದೆ.

ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ (Instagram), ‘ಅಂದು ಪ್ರೇಮಲೋಕ (Premaloka), ಇಂದು ಮುಗಿಲ್‌ಪೇಟೆ. ನಾಳೆ ಮಧ್ಯಾಹ್ನ 12 ಗಂಟೆಗೆ ಅಚ್ಚರಿಯ ಅನಾವರಣ ಎಂದು ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಇನ್ನು ಶೇರ್ ಮಾಡಿರುವ ವಿಡಿಯೋದಲ್ಲಿ ‘1987 ರಲ್ಲಿ ಪ್ರೇಮಲೋಕ. ಮುತ್ತನ್ನ ಹುಡಿಗಿರ್ಗೆ ಹೇಗ್ ಕೇಳ್ಬೇಕು. ಮುದ್ದಾಗಿ ಹೇಗ್ ಕೋಡ್ಬೇಕು ಅಂತ ಹೇಳ್ಕೊಟ್ಟೋರು ಕ್ರೇಜಿಸ್ಟಾರ್ ರವಿಚಂದ್ರನ್.
2021 ಇವತ್ತಿಗೂ ಫಾಲೋ ಮಾಡ್ತಿರೋ ಹುಡುಗರಿಗೆ ಮುತ್ತನ್ನ ಹೀಗೂ ಕೇಳಬಹುದು ಹಾಗೂ ಕೊಡಬಹುದು ಅಂತ ಹೇಳ್ತಿರೋದು ಅದೇ ಕ್ರೇಜಿಸ್ಟಾರ್ ಎಂಬ ಡೈಲಾಗ್‌ಗಳು ಹಾಸ್ಯ ನಟ ರಂಗಾಯಣ ರಘು (Rangayana Raghu) ಹಿನ್ನಲೆ ಧ್ವನಿಯಿಂದ ಕೇಳಿ ಬರುತ್ತದೆ. ನಂತರ ಚಿತ್ರದ ನಾಯಕ ಮನು, ಇವತ್ತಲ್ಲ ನಾಳೆ ನೋಡಿ ಎಂದು ಹೇಳುತ್ತಾರೆ. ಒಟ್ಟಿನಲ್ಲಿ ‘ಮುಗಿಲ್‌ಪೇಟೆ’ ಚಿತ್ರದ ಬಗ್ಗೆ ಯಾವ ಮಾಹಿತಿ ಬರಬಹುದು ಎಂದು ನಾಳೆ ಮಧ್ಯಾಹ್ನ 12 ಗಂಟೆಗೆ ತಿಳಿಯುತ್ತದೆ.
ಚಿತ್ರದ ಟ್ರೇಲರ್ ನೋಡಿ ಬನ್ನಿ..