ಬೆಂಗಳೂರು: ನಮ್ಮ ಮೆಟ್ರೋದ ದೈನಂದಿನ ಪ್ರಯಾಣಿಕರ ಸಂಖ್ಯೆ ಸೋಮವಾರ 3 ಲಕ್ಷಕ್ಕೆ ತಲುಪಿದೆ, ಸೆಪ್ಟೆಂಬರ್ 7, 2020 ರಂದು ಕೊರೊನಾ-ಲಾಕ್ಡೌನ್ ನಂತರ ಸೇವೆಗಳು ಪುನರಾರಂಭಗೊಂಡಿತು. ಆಗಿನಿಂದ ಸೋಮವಾರವೇ ಅತ್ಯಧಿಕ ಪ್ರಯಾಣಿಕರು ಮೆಟ್ರೋದಲ್ಲಿ ಸಂಚರಿಸಿದ್ದಾರೆ.
ಪರ್ಪಲ್ ಲೈನ್ ನಲ್ಲಿ 1.5 ಲಕ್ಷ ಮತ್ತು ಗ್ರೀನ್ ಲೈನ್ ನಲ್ಲಿ 1.6 ಲಕ್ಷ ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಮೆಟ್ರೋ ಪ್ರಯಾಣಿಕರ ಅಂಕಿಅಂಶಗಳು ಗಮನಾರ್ಹವಾಗಿ ಹೆಚ್ಚಳವಾಗಿದ್ದರೂ, ಕಳೆದ ವರ್ಷ ಮಾರ್ಚ್ ನಲ್ಲಿ ಸಾಂಕ್ರಾಮಿಕ ರೋಗ ಬರುವ ಮೊದಲು ಮೆಟ್ರೋದಲ್ಲಿ ನಿತ್ಯ ಅಂದಾಜು 5 ಲಕ್ಷ ಜನ ಸಂಚರಿಸುತ್ತಿದ್ದರು.
ಇದನ್ನೂ ಓದಿ: ಸೆಲ್ಫಿ ಹುಚ್ಚಿಗೆ ಮತ್ತೊಂದು ಬಲಿ: ಟ್ರೈನ್ ನಿಂದ ಬಿದ್ದ ಯುವಕ
BMRCL ದಾಖಲೆಗಳ ಪ್ರಕಾರ ಅಕ್ಟೋಬರ್ 25, 2019 ರಂದು 6 ಲಕ್ಷಕ್ಕಿಂತ ಹೆಚ್ಚಿನ ಪ್ರಯಾಣಿಕರು ಸಂಚರಿಸಿದ್ದಾರೆ. (ಪರ್ಪಲ್ ಲೈನ್: 3.3 ಲಕ್ಷ, ಗ್ರೀನ್ ಲೈನ್: 2.7 ಲಕ್ಷ) 2021ರ ಅಕ್ಟೋಬರ್ನಲ್ಲಿ ಸರಾಸರಿ ದೈನಂದಿನ ಪ್ರಯಾಣಿಕರ ಆದಾಯವು 1.1 ಕೋಟಿ (ಜನವರಿ 2020) ರಿಂದ 59.4 ಲಕ್ಷಕ್ಕೆ ಕುಸಿದಿದೆ.

ಕೋವಿಡ್ ಬಳಿಕ ಸಾಮಾನ್ಯ ಜೀವನ ಪುನರಾರಂಭ, ಟೋಕನ್ ಗಳ ಮರು ಪರಿಚಯ, ಶಿಕ್ಷಣ ಸಂಸ್ಥೆಗಳ ಪುನರಾರಂಭ, ಸಮಯ ವಿಸ್ತರಣೆ ಮತ್ತು ನೆಟ್ವರ್ಕ್ ವಿಸ್ತರಣೆ (ಸಿಲ್ಕ್ ಇನ್ಸ್ಟಿಟ್ಯೂಟ್-ಯಲಚೇನಹಳ್ಳಿ ಮತ್ತು ಮೈಸೂರು ರಸ್ತೆ-ಕೆಂಗೇರಿ) ಸವಾರರ ಹೆಚ್ಚಳಕ್ಕೆ ಕಾರಣಗಳು ಎನ್ನಲಾಗುತ್ತಿದೆ.
ಇಂದಿನಿಂದ ಬೆಳಗ್ಗೆ 6 ಗಂಟೆಗೆ ರೈಲುಗಳು ಆರಂಭಗೊಂಡು ರಾತ್ರಿ 11 ಗಂಟೆಯವರೆಗೆ ಸಂಚರಿಸಲಿವೆ. ಮೆಜೆಸ್ಟಿಕ್ ನಿಂದ 11.30ಕ್ಕೆ ಕೊನೆಯ ರೈಲು ಹೊರಡಲಿದೆ. ಭಾನುವಾರ ಬೆಳಗ್ಗೆ 6ರ ಬದಲಾಗಿ 7 ಗಂಟೆಯಿಂದ ರೈಲು ಆರಂಭಗೊಳ್ಳಲಿವೆ.