Lunar Eclipse : (ನ.18): ನಾಳೆ ಎರಡನೇ ಕೊನೆಯ ಸುದೀರ್ಘ ಅಂಶಿಕ (Longest Partial Lunar Eclipse)ಚಂದ್ರಗ್ರಹಣ ಗೋಚರಿಸಲಿದೆ. ಚಂದ್ರಗ್ರಹಣ ಉತ್ತರ ಮತ್ತು ದಕ್ಷಿಣ ಅಮೆರಿಕ, ಆಸ್ಟ್ರೇಲಿಯಾ, ಯುರೋಪ್ ಮತ್ತು ಏಷ್ಯಾದ ಕೆಲವು ಭಾಗಗಳಲ್ಲಿ ಮಾತ್ರ ಗೋಚರಿಸಲಿದೆ. ಭಾರತದ ಈಶಾನ್ಯ ಭಾಗಗಳ ಕೆಲವೊಂದು ಪ್ರದೇಶಗಳಲ್ಲಿ ಈ ಗ್ರಹಣವು ಚಂದ್ರನ ಮೇಲೆ ಅರೆ ನೆರಳಿನ ರೀತಿ ಗೋಚರಿಸುವ ಸಾಧ್ಯತೆಗಳು ಇವೆ.
ಜಗತ್ತಿನಾದ್ಯಂತ ವೀಕ್ಷಣಾಲಯಗಳು,(Virtual) ಪ್ರಯೋಗ ಶಾಲೆಗಳ ಖಗೋಳ ವಿಜ್ಞಾನಿಗಳು ವರ್ಚುವಲ್ ಟೆಲಿ ಸ್ಕೋಪ್ ಯೋಜನೆಗಳ ಮೂಲಕ ವರ್ಚುವಲ್ ಆಗಿ ಚಂದ್ರಗ್ರಹಣವನ್ನು ಕಾಣಲಿದ್ದಾರೆ.
581 ವರ್ಷಗಳ ಅನಂತರದ ವಿಶ್ವಾದ್ಯಂತದ ಜನರು, ಖಗೋಳ ವಿಜ್ಞಾನಿಗಳು, ಪ್ರಾಯಶಃ ನಸುಗೆಂಪು(copper color) ಬಣ್ಣದಿಂದ ಕಾಣಲಿರುವ ಚಂದ್ರನನ್ನು ಬರಿಗಣ್ಣಿ ನಿಂದ ಅಥವಾ ದೂರದರ್ಶಕದ ಮೂಲಕ ನೋಡಲು ಕಾತುರರಾಗಿದ್ದಾರೆ.
ವಿಜ್ಞಾನಿಗಳ ಪಾಲಿಗೆ ಸೂರ್ಯ, ಚಂದ್ರ ಗ್ರಹಣ ಬಹಳ ವಿಶೇಷವಾಗಿರುತ್ತದೆ. ಸದಾ ಪ್ರಯೋಗಾತ್ಮಕ ಜೀವನದಲ್ಲಿ ಬದುಕುವ ವಿಜ್ಞಾನಿಗಳಿಗೆ ನಾಳೆ ಒಂದು ಕುತೂಹಲಕಾರಿ ದತ್ತಾಂಶಗಳನ್ನು ಪಡೆಯಲು ಸಹಾಯಕವಾಗಿದೆ.

ಅಮೇರಿಕಾದಲ್ಲಿ ಬೀವರ್ ಚಂದ್ರಗ್ರಹಣ:
ಅಮೆರಿಕದಲ್ಲಿ ನಾಳೆ ಸಂಭವಿಸುತ್ತಿರುವ ಚಂದ್ರಗ್ರಹಣವನ್ನು (Bivar) ಬೀವರ್ ಎಂದು ಕರೆಯುತ್ತಾರೆ
ಈ ಋತುವಿನಲ್ಲಿ ಬೀವರ್‌ಗಳು (ಪ್ರಕೃತಿಯ ಎಂಜಿನಿಯರ್ ಎಂದು ಕರೆಯಲ್ಪಡುವ ನೀರುನಾಯಿಯ ಜಾತಿ) ತಮ್ಮ ವಾಸಕ್ಕಾಗಿ ನದಿಯ ಹತ್ತಿರವಿರುವ ಜಾಗದಲ್ಲಿ ಸೂಕ್ತ ಸ್ಥಳಗಳನ್ನು ಹುಡುಕಿಕೊಳ್ಳುತ್ತವೆ. ಇದೇ ಸಂದರ್ಭದಲ್ಲಿ ಈ ಗ್ರಹಣ ಸಂಭವಿಸುತ್ತಿದೆ
ನಾಳೆ ಗೋಚರಿಸ ಲಿರುವ ಚಂದ್ರಗ್ರಹಣದ ಬಣ್ಣವು ತಾಮ್ರದ ಹೊಳಪಂತೆ ಕಾಣುತ್ತದೆ. ವಾತಾವರಣದಲ್ಲಿ ತಾಮ್ರದಂತಹ ಬಣ್ಣ ನೋಡುವುದೇ ಆನಂದವಾಗಿರುತ್ತದೆ
ಚಂದ್ರಗ್ರಹಣ ಸುದೀರ್ಘವಾಗಿ ಇರುವುದರಿಂದ ಸಾರ್ವಜನಿಕರು ಆತುರವಾಗಿ ನೋಡಬೇಕೆಂದು ಇಲ್ಲ.
ಚಂದ್ರಗ್ರಹಣದ ವೀಕ್ಷಣೆಗೆ ಸಾಕಷ್ಟು ಸಮಯ ಲಭ್ಯವಾಗಲಿದೆ.
ಆದರೆ ಈ ಅಂಶಿಕ ಚಂದ್ರಗ್ರಹಣಗಳು ಹೆಚ್ಚು ಸಂಭವಿಸಿದರೂ ಪೂರ್ಣ ಚಂದ್ರಗ್ರಹಣದಷ್ಟು ಆಕರ್ಷ ಣೀಯವಾಗಿರುವುದಿಲ್ಲ. ನಾಸಾದ ಪ್ರಕಾರ 228 ಚಂದ್ರಗ್ರಹಣಗಳು 21ನೇ ಶತಮಾನದಲ್ಲಿ ಸಂಭವಿಸಿ ದರೂ ವೀಕ್ಷಣೆಯ ಭಾಗ್ಯ ಕೆಲವು ಪ್ರದೇಶಗಳಲ್ಲಿ ಮಾತ್ರ ಇರುವುದು ವಿಷಾದನೀಯ.
ಸುದೀರ್ಘ ಚಂದ್ರಗ್ರಹಣ
581 ವರ್ಷಗಳ ಹಿಂದೆ ಚಂದ್ರಗ್ರಹಣ ಗೋಚರಿಸಿತ್ತು. ಅಂದರೆ 1440ರ ಫೆಬ್ರವರಿ 18ರಂದು ಸುದೀರ್ಘ ಅವಧಿಯ ಚಂದ್ರಗ್ರಹಣ ಗೋಚರಿಸಿತ್ತು.
ಭಾರತೀಯ ಕಾಲಮಾನದ ಪ್ರಕಾರ ನ. 19ರ ಮಧ್ಯಾಹ್ನ ಗಂಟೆ 12.48ಕ್ಕೆ ಗ್ರಹಣ ಆರಂಭಗೊಳ್ಳಲಿದ್ದು ಸಂಜೆ ಗಂಟೆ 4.17ಕ್ಕೆ ಮುಕ್ತಾಯಗೊಳ್ಳಲಿದೆ. ಚಂದ್ರನ ಸುಮಾರು ಶೇ.97ರಷ್ಟು ಭಾಗವನ್ನು ದಟ್ಟ ನೆರಳು ಆವರಿಸಿದರೂ ಇದನ್ನು ಆಂಶಿಕ ಎಂದು ಪರಿಗಣಿಸಲಾಗಿದೆ.
ಸುಮಾರು 3.30 ಗಂಟೆ ಅವಧಿಯ ಈ ಗ್ರಹಣದಲ್ಲಿ ಚಂದ್ರನ ಬಿಂಬ ಭೂಮಿಯ ವಾತಾವರಣವನ್ನು ಹೊಂದಿ ಕೊಂಡು ತಾಮ್ರ ಬಣ್ಣ ಬದಲಾಗುವುದನ್ನು ವೀಕ್ಷಕರು ಕಾಣಬಹುದು.
ಇತ್ತೀಚೆಗೆ ಭಾರಿ ಮಳೆಯಾಗುತ್ತಿರುವ ಹಿನ್ನೆಲೆ ಮೋಡವಿದ್ದರೆ ಚಂದ್ರಗ್ರಹಣದ ಅಂತಿಮ ಹಂತವನ್ನೂ ಕಾಣಲು ಸಾಧ್ಯವಾಗುವುದಿಲ್ಲ.
ಚಂದ್ರಗ್ರಹಣ ಹೇಗೆ ಸಂಭವಿಸುತ್ತದೆ?
ಸೂರ್ಯ, ಭೂಮಿ ಮತ್ತು ಚಂದ್ರ ಒಂದೇ ಸರಳ ರೇಖೆಯಲ್ಲಿರುವಾಗ ಸೂರ್ಯ ಅಥವಾ ಚಂದ್ರಗ್ರಹಣಗಳು ಸಂಭವಿಸುತ್ತವೆ.
ಭೂಮಿಯು ಸೂರ್ಯ ಮತ್ತು ಚಂದ್ರನ ನಡುವೆ ಬರಬೇಕು. ಭೂಮಿಯ ಪೂರ್ಣ ನೆರಳಿನ ಭಾಗಕ್ಕೆ ಚಂದ್ರ ಬಂದಾಗ ಪೂರ್ಣ ಚಂದ್ರಗ್ರಹಣ.
ಭೂಮಿಯ ಪೂರ್ಣ ನೆರಳಿನ ಭಾಗಕ್ಕೆ ಚಂದ್ರ ಬಂದರೆ ಆಂಶಿಕ ಚಂದ್ರಗ್ರಹಣ.
ಈ ವರ್ಷದ ಚಂದ್ರಗ್ರಹಣವನ್ನು ವೀಕ್ಷಿಸಲು ಸಾಧ್ಯವಾಗುವುದಿಲ್ಲ ಎಂದು ನಿರಾಶರಾಗಬೇಡಿ. ಹಲವು ಮಾಧ್ಯಮಗಳು ವೀಕ್ಷಣಾಲಯಗಳು ಚಂದ್ರಗ್ರಹಣ ಗೋಚರಿಸುವುದು ತೋರಿಸುತ್ತದೆ. ಹಾಗೂ ಅಂತರ್ಜಾಲದಿಂದ ನೇರಪ್ರಸಾರ ಲಭ್ಯವಾಗಲಿದೆ ಎಂದು ಮಂಗಳೂರಿನ ವಿಜ್ಞಾನಿ ಡಾ. ಕೆ ವಿರಾಮ ಅವರು ತಿಳಿಸಿದ್ದಾರೆ.