ಕೊಡಗು: Cauvery River (ನ.18) : ಜೀವನದಿ ಕಾವೇರಿ (Kaveri River)ತಲಕಾವೇರಿಯಲ್ಲಿ (Tala Kaveri) ಹುಟ್ಟಿ ತಮಿಳುನಾಡಿನ (Tamil Nadu) ಮೂಲಕ ಹಾದು ಬಂಗಾಳಕೊಲ್ಲಿಯಲ್ಲಿ ಸಮುದ್ರ ಸೇರುತ್ತದೆ.
ಉತ್ತರದಲ್ಲಿ ಗಂಗಾ ನದಿಯಂತೆ (Ganga river) ದಕ್ಷಿಣದಲ್ಲಿ ಕಾವೇರಿ ನದಿ ಪಾವಿತ್ರ್ಯತೆ ಹೊಂದಿದೆ. ಆದರೇ ಕಾವೇರಿ ನದಿ ಕಲುಶಿತಗೊಂಡಿರುವುದು ವಿಷಾದನೀಯ.
ಕಾಫಿ ಹಣ್ಣನ್ನು ಫಲ್ಪಿಂಗ್ ವಿ಼ಷಕಾರಿ:
ಕೊಡಗಿನಲ್ಲಿನವೆಂಬರ್ ತಿಂಗಳಿಂದ ಮಾರ್ಚ್ ವರೆಗೆ ಕೊಯ್ಲು ಮಾಡಿದ ಕಾಫಿ ಹಣ್ಣನ್ನು ಫಲ್ಪಿಂಗ್ ಮಾಡಲಾಗುತ್ತದೆ. ಕಾಫಿ ಹಣ್ಣನ್ನು ಫಲ್ಪಿಂಗ್ ಮಾಡುವುದು ವಿಷಪೂರಿತವಾಗಿದೆ. ನದಿಗಳಿಗೆ ನೇರವಾಗಿ ಬಿಡುವುದರಿಂದ ವಿಷಪೂರಿತವಾಗಿದೆ.
ನದಿಗೆ ಸೇರುತ್ತಿದೆ ಕೊಳಚೆ ನೀರು:
ಕಾಫಿ ಹಣ್ಣನ್ನು ಫಲ್ಪಿಂಗ್ ಮಾಡಿ ಹೇಮಾವತಿ ನದಿಗೆ ಒಂದೆಡೆ ಬಿಡುತ್ತಿದ್ದರೇ, ಇನ್ನೋಂದೆಡೆ ಕೊಳಚೆ ನೀರು ಕಾವೇರಿನದಿಗೆ ಸೇರುತ್ತಿದೆ. ಸೋಮವಾರಪೇಟೆ ತಾಲ್ಲೂಕಿನ ದೊಡ್ಡಮಳ್ತೆ ಗ್ರಾ.ಪಂ ವ್ಯಾಪ್ತಿಯ ಹೊನವಳ್ಳಿಯಲ್ಲಿ ಕಾಫಿ ತೋಟದಲ್ಲಿ ಪಲ್ಪಿಂಗ್ ಮಾಡಿದ ಬಾರೀ ಪ್ರಮಾಣ ಕಲುಷಿತ ನೀರನ್ನು ಹೊಳೆಗೆ ನೇರವಾಗಿ ಬಿಡಲಾಗುತ್ತಿದೆ.
ಇದೇ ಹೊಳೆ ಮುಂದೆ ಅಜ್ಜಳ್ಳಿ ಶನಿವಾರಸಂತೆ ಮೂಲಕ ಹರಿದು ಹಾಸನ ಜಿಲ್ಲೆಯ ಗೊರೂರು ಜಲಾಶಯ ಸೇರುತ್ತದೆ. ಅಲ್ಲಿಂದ ಮುಂದೆ ಹರಿಯುವ ಹೇಮಾವತಿ ನದಿ ಮೈಸೂರು ಜಿಲ್ಲೆಯಲ್ಲಿ ಕಾವೇರಿ ನದಿಯಲ್ಲಿ ಸಂಗಮವಾಗುತ್ತದೆ.

ಜಲಚರಗಳ ಜೀವಹಾನಿ:
ತವರು ಜಿಲ್ಲೆ ಕೊಡಗಿನಲ್ಲೇ ಕಲುಷಿತಗೊಳ್ಳುತ್ತಿರುವುದರಿಂದ, ಕಾಫಿ ಪಲ್ಪಿಂಗ್ ನಿಂದ ಸಾವಿರಾರು ಮೀನು ಹಾಗೂ ಇತರ ಜಲಚರಗಳು ಸಾಯುತ್ತಿದೆ. ನವೆಂಬರ್ ವರೆಗೆ ಹೊಳೆಯಲ್ಲಿ ಅಪಾರ ಪ್ರಮಾಣದಲ್ಲಿ ಇರುವ ಜಲಚರಗಳ ಕಾಫಿ ಪಲ್ಪಿಂಗ್ ನೀರನ್ನು ಹೊಳೆಗೆ ಬಿಟ್ಟ ಎರಡು ದಿನಗಳಲ್ಲಿ ಸಾವನ್ನಪ್ಪುತ್ತವೆ.
ಪರಿಸರ ಪ್ರೇಮಿ ಅಯ್ಯಪ್ಪ ಮಾತನಾಡಿ, ಕರ್ನಾಟಕದಲ್ಲಿ ಕಾವೇರಿ ನೀರನ್ನು ಮೈಸೂರು, ಬೆಂಗಳೂರು ಸೇರಿದಂತೆ ನಾಡಿನ ಕೋಟ್ಯಂತರ ಜನರು ಕುಡಿಯುತ್ತಾರೆ. ಅಡುಗೆಗೆ ಬಳಸುತ್ತಾರೆ. ನೀರು ಮಲಿನವಾಗುತ್ತಿರುವ ಬಗ್ಗೆ ಸಂಬಂಧಿಸಿದ ಇಲಾಖೆಗಳು ಕಟ್ಟುನಿಟ್ಟಿನ ಕ್ರಮ ವಹಿಸಬೇಕು.
ನದಿಯಲ್ಲಿ ಪ್ಲಾಸ್ಟಿಕ್ ಸಂತೆ:
ಕಾವೇರಿ ನದಿಗೆ ಪೂಜೆ ಮಾಡುವ ಜನರು, ಪೂಜೆಗೆಂದು ತರುವ ಗಂಧದ ಕಡ್ಡಿ,ಹೂವು, ಪ್ಲಾಸ್ಟಿಕ್ ಕವರ್‌ಅನ್ನು ನದಿಗೆ ಬಿಸಾಡಿಹೋಗುತ್ತಾರೆ. ಇನ್ನು ಕೆಲವರು ನದಿ ದಂಡೆಗಳಲ್ಲಿ ಕುಳಿತು ಬಟ್ಟೆ ಒಗೆಯುವುದು, ಸೋಪಿನ ಅಂಶ ನದಿಗೆ ಸೇರಿ ಇನ್ನಷ್ಟು ಮಲೀನವಾಗಿದೆ.
ಕಾಫಿ ಪಲ್ಪಿಂಗ್ ಅಷ್ಟೇ ಅಲ್ಲದೆ ಯಾವುದೇ ರೀತಿಯ ಕಲುಷಿತ ನೀರು ಕಾವೇರಿ ನದಿಗೆ ಸೇರದಂತೆ ಎಚ್ಚರ ವಹಿಸಬೇಕಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಲುಷಿತ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದು ತಿಳಿಯುತ್ತಿದ್ದಂತೆ ರಕ್ಷಣಾ ವೇದಿಕೆ ಸೋಮವಾರಪೇಟೆ ತಾಲ್ಲೂಕು ಮುಖಂಡ ಫ್ರಾನ್ಸಿಸ್ ಡಿಸೋಜಾ ಮತ್ತಿತರರು ಗ್ರಾಮಸ್ಥರಿಗೆ ತಿಳಿ ಹೇಳಿದ್ದಾರೆ. ಜೊತೆಗೆ ಪಲ್ಪಿಂಗ್ ನೀರನ್ನು ಹೊಳೆಗೆ ಹರಿಸುತ್ತಿದ್ದರಿಂದ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.
ಇದನ್ನು ಪಲ್ಪಿಂಗ್ ನೀರನ್ನು ಹೊಳೆಗೆ ಬಿಡುವವರು ಅರ್ಥ ಮಾಡಿಕೊಳ್ಳಬೇಕು ಎಂದು ಗೌಡಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ನವೀನ್ ಎಂಬುವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಕಲುಷಿತ ನೀರು ಹೊಳೆಗೆ ಸೇರದಂತೆ ಎಚ್ಚರ ವಹಿಸಬೇಕು. ಇಲ್ಲದಿದ್ದರೆ ಶಿಸ್ತುಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.