ಇತ್ತೀಚೆಗೆ ತರಕಾರಿಗಳ ಬೆಲೆ ಗಗನಕ್ಕೇರಿದೆ ಇದರಿಂದ ವ್ಯಾಪಾರ ಆಗದೆ ಚಿಲ್ಲರೆ ವ್ಯಾಪಾರಗಾರರು ಚಿಂತೆಗೀಡಾಗಿದ್ದಾರೆ. ಬೀನ್ಸ್, ಬದನೆ, ಕ್ಯಾರೆಟ್, ಕ್ಯಾಪ್ಸಿಕಂ, ಈರುಳ್ಳಿ, ಟೊಮೇಟೊ ಮುಂತಾದ ತರಕಾರಿಗಳ ಬೆಲೆ ಗಗನಕ್ಕೇರಿದೆ ನಿರಂತರ ಮಳೆಯಿಂದ ರೈತರಿಗೆ ಬೆಳೆ ಸಿಗದಂತಾಗಿದೆ.
ಇದನ್ನೂ ಓದಿ: ದೆಹಲಿಯಲ್ಲಿ ಹೆಚ್ಚಾದ ವಾಯುಮಾಲಿನ್ಯ: ಅಗತ್ಯ ಸೇವೆ ಹೊರತುಪಡಿಸಿ ಉಳಿದ ಸೇವೆ ಸ್ಥಗಿತ
ರಾಮನಗರ, ಮೈಸೂರ್, ತುಮಕೂರು ಮುಂತಾದ ಜಿಲ್ಲೆಗಳಿಂದ ಮೊದಲು ಬರುತ್ತಿದ್ದಷ್ಟು ತರಕಾರಿಗಳು ಈಗ ಲಭ್ಯ ಇಲ್ಲ.ಕಾರ್ಯಕ್ರಮ ಮಾಡುವವರು ಮತ್ತು ಹೋಟಲ್ ಗಳಲ್ಲಿ ಅನಿವಾರ್ಯವಾಗಿ ತರಕಾರಿಗಳನ್ನ ಖರೀದಿಸಬೇಕಾಗಿದೆ.ಅಲ್ಲದೆ ಆಂಧ್ರ ತಮಿಳುನಾಡು ಗಳಿಂದ ಬರುರ್ತಿದ ತರಕಾರಿಗಳು ಅಷ್ಟಾಗಿ ಬರುತ್ತಿಲ್ಲ.ಎಂದು ಸಗಟು ವ್ಯಪಾರಿಗಳು ಹೇಳಿಕೊಂಡಿದ್ದಾರೆ.ಇದರಿಂದ ತರಕಾರಿಗಳ ಬೆಲೆ ಹೆಚ್ಚಾಗಿದೆ.ಹಸಿಮೆಣಸು 35ರೂ ಬಟಾಣಿ 210 ಬದನೆ 50, ಟೊಮೇಟೊ 50 ಹೀಗೆ ತರಕಾರಿಗಳ ಬೆಲೆ ಗಗನಕ್ಕೆರಿದೆ.

ಮಳೆ ನೀರಿಂದ ಬೆಳೆಗಳು ಹೊಲದಲ್ಲೇ ಕೊಳೆತು ಹೋಗುತ್ತಿದ್ದೂ ಫಲ ಕೈ ಬರದೇ ಇರುವ ಕಾರಣವೂ ಬೆಲೆ ಏರಿಕೆಗೆ ಮುಖ್ಯ ಕಾರಣ ಆಗಿದೆ. ಬೆಳೆ ಹೆಚ್ಚಾಗಿ ಬರದೇ ಇರುವ ಕಾರಣ ಅನಿವಾರ್ಯವಾಗಿ ಬೆಲೆ ಯನ್ನು ಹೆಚ್ಚಿಸಬೇಕಾಗಿದೆ.
ಸಗಟು ಬೆಲೆ ಏರಿಕೆಯ ನಂತರ ಬೆಲೆ ದುಪ್ಪಟ್ಟು ಆಗುತ್ತಿದ್ದು. ಮಳೆ ಕಡಿಮೆ ಆದರೂ ಸಹ ಬೆಲೆ ಕಡಿಮೆ ಆಗುವ ಸಾಧ್ಯತೆ ಇಲ್ಲ. ಇನ್ನು ಮಳೆ ಹೆಚ್ಚಾದರೆ ಬೆಲೆ ಮತ್ತಷ್ಟು ಏರಿಕೆ ಆಗುವ ಸಾಧ್ಯತೆ ಇದೇ ಎಂದು ಅಂದಾಜಿಸಲಾಗಿದೆ.