ಮುಂಬೈ: (ನ.17): Nurse Died: ಆಸ್ಪತ್ರೆಯಲ್ಲಿ ಬರೋಬ್ಬರಿ 5000 ಗರ್ಭಿಣಿಯರಿಗೆ ಹೆರಿಗೆ ಮಾಡಿಸಿದ್ದ(nurse) ನರ್ಸ್ ತಮ್ಮ ಶಿಶುವಿಗೆ ಜನ್ಮ ನೀಡಿ ಕೊನೆಯುಸಿರೆಳೆದ ದಾರುಣ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಜ್ಯೋತಿ ಗಾವ್ಲಿ (38) ಎಂಬ ನರ್ಸ್ ತಮ್ಮ ಕೆಲಸದ ದಿನಗಳಲ್ಲಿ ಸುಮಾರು 5000 (delivery)ಹೆರಿಗೆಗಳನ್ನು ಮಾಡಿಸಿದ್ದರು. ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಳೆದ ಎರಡು ವರ್ಷಗಳಿಂದ ನರ್ಸ್ ಆಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದರು
ತಮ್ಮ ಗರ್ಭದಲ್ಲಿ ಎರಡನೇ ಮಗುವನ್ನು (pregnant Nurse )ಹೊತ್ತಿದ್ದ ಜ್ಯೋತಿ ಗಾವ್ಲಿ ,ನವೆಂಬರ್ 1ರವರೆಗೂ ಆಸ್ಪತ್ರೆಯಲ್ಲಿ ಕೆಲಸ ಮಾಡಿದ್ದಾರೆ. ನಂತರ ನ.2ರಂದು ಜ್ಯೋತಿ ಗಾಫಿ ಅವರಿಗೆ ಅದೇ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಲಾಗಿದೆ. ಆದರೆ ಹೆರಿಗೆ ನಂತರ ಜ್ಯೋತಿ ಬೈಲ್ಯಾಟರಲ್ ನ್ಯುಮೋನಿಯಾದಿಂದ ಬಳಲಿದ್ದು, ಕಳೆದ ಭಾನುವಾರ ಕೊನೆಯುಸಿರೆಳೆದಿದ್ದಾರೆ.
ಹಿಂಗೋಲಿ ಆಸ್ಪತ್ರೆಗೆ ಸೇರುವ ಮುನ್ನ ಎರಡು ಆಸ್ಪತ್ರೆಗಳಲ್ಲಿ ಆರು ವರ್ಷ ಕೆಲಸ ಮಾಡಿದ್ದ ಜ್ಯೋತಿ ಗಾಫಿ, ಇದುವರೆಗೆ ಸುಮಾರು 5 ಸಾವಿರದಷ್ಟು ಗರ್ಭಿಣಿಯರಿಗೆ ಹೆರಿಗೆ ಮಾಡಿಸಿದ್ದರು. ಆದರೆ ಅವರನ್ನು ನಾವಿಂದು ಬದುಕಿಸಿಕೊಳ್ಳಲು ಆಗಲಿಲ್ಲವೆಂದು ಹಿಂಗೋಲಿ ಜಿಲ್ಲೆಯ ಸಾರ್ವಜನಿಕ ಆಸ್ಪತ್ರೆಯ ಅಧಿಕಾರಿಗಳು ನೋವಿನಿಂದ ಹೇಳಿಕೊಂಡಿದ್ದಾರೆ.

ಅಚ್ಚುಮೆಚ್ಚಿನ ಜ್ಯೋತಿ ನರ್ಸ್
ಹಿಂಗೋಲಿ ಜಿಲ್ಲೆಯ ಸಿವಿಲ್ ಆಸ್ಪತ್ರೆಯಲ್ಲಿ ಜ್ಯೋತಿ ಕಳೆದ ಎರಡು ವರ್ಷಗಳಿಂದ(laber room nurse) ಲೇಬರ್ ರೂಂ ನರ್ಸ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಲ್ಲಿ ಕೆಲಸ ಮಾಡುವುದಕ್ಕೂ ಮೊದಲು ಎರಡು ಆರೋಗ್ಯ ಕೇಂದ್ರದಲ್ಲಿ ಕೆಲಸ ಮಾಡಿದವರು. ತುಂಬ ಅನುಭವಿ ನರ್ಸ್. ದಿನಕ್ಕೆ ಏನಿಲ್ಲವೆಂದರೂ ನಮ್ಮ ಆಸ್ಪತ್ರೆಯಲ್ಲಿ 15 ಹೆರಿಗೆ ಮಾಡಿಸುತ್ತಿದ್ದರು.
ಗರ್ಭಿಣಿಯಾಗಿದ್ದರೂ 9 ತಿಂಗಳು ತುಂಬುವವರೆಗೂ ಕೆಲಸ ಮಾಡಿದ್ದಾರೆ. ಹೆರಿಗೆ ನಂತರವೇ ರಜೆ ತೆಗೆದುಕೊಳ್ಳಲು ನಿರ್ಧಾರ ಮಾಡಿದ್ದರು ಎಂದು (civil Hospital) ಸಿವಿಲ್ ಆಸ್ಪತ್ರೆಯ ರೆಸಿಡೆಂಟ್ ವೈದ್ಯಕೀಯ ಅಧಿಕಾರಿ ಡಾ. ಗೋಪಾಲ್ ಕದಮ್ ಹೇಳಿದ್ದಾರೆ. ಜ್ಯೋತಿ ಗಾವ್ಲಿ ಸಾವಿಗೆ ತೀವ್ರ ಸಂತಾಪ ಸೂಚಿಸಿದ್ದಾರೆ.
ಜ್ಯೋತಿ ಆಸ್ಪತ್ರೆಯಲ್ಲಿ ಉಳಿದ ಸಿಬ್ಬಂದಿಗೂ ಅಚ್ಚುಮೆಚ್ಚಿನ ನರ್ಸ್ ಆಗಿದ್ದರು. ಅವರ ಆರೈಕೆಯನ್ನು ತುಂಬ ಪ್ರೀತಿಯಿಂದ ಮಾಡುತ್ತಿದ್ದರು. ಇವರು ಎರಡನೇ ಬಾರಿಗೆ ಗರ್ಭ ಧರಿಸಿ, ಇತ್ತೀಚೆಗಷ್ಟೇ ಹೆರಿಗೆಯ ದಿನ ಹತ್ತಿರ ಬಂದಿತ್ತು. ಹಾಗಾಗಿ ತಾವು ಕೆಲಸ ಮಾಡುತ್ತಿದ್ದ(admitted) ಸರ್ಕಾರಿ ಆಸ್ಪತ್ರೆಯಲ್ಲೇ ದಾಖಲಾಗಿದ್ದರು. ಜ್ಯೋತಿಗೆ ಸಹಜ ಹೆರಿಗೆ (nomal Delivery)ಆಗುವ ಸಾಧ್ಯತೆ ಕಡಿಮೆ ಇದ್ದ ಕಾರಣ ಸಿಸೇರಿಯನ್ ಮೂಲಕ ಮಗುವನ್ನು ತೆಗೆಯಲಾಯಿತು.
ಆ ಮಗು ತುಂಬ ಆರೋಗ್ಯವಾಗಿಯೂ ಇತ್ತು. ಆದರೆ ಹೆರಿಗೆಯಾಗುತ್ತಿದ್ದಂತೆ ನರ್ಸ್ ಆರೋಗ್ಯ ಒಮ್ಮೆಲೇ ಹದಗೆಡಲು ಶುರುವಾಯಿತು. ರಕ್ತಸ್ರಾವವನ್ನು(Bleeding) ನಿಲ್ಲಿಸಲು ಸಾಧ್ಯವಾಗಲೇ ಇಲ್ಲ. ಕೂಡಲೇ ಹೆಚ್ಚಿನ ಚಿಕಿತ್ಸೆಗಾಗಿ ಆಕೆಯನ್ನು ನಂದೇಡ್ನ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಯಿತು.
ನಂದೇಡ್ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುವ ಹೊತ್ತಿಗೆ ಜ್ಯೋತಿ ಅವರಿಗೆ ಉಸಿರಾಡಲೂ ಸಾಧ್ಯವಾಗುತ್ತಿರಲಿಲ್ಲ. ಅಲ್ಲಿನ ವೈದ್ಯರೂ ಏನೂ ಮಾಡಲಾಗದೆ ಔರಂಗಾಬಾದ್ಗೆ ಕಳಿಸೋಣ ಎಂದು ಯೋಜನೆ ಹಾಕುತ್ತಿದ್ದಾಗಲೇ ಇತ್ತ ಜ್ಯೋತಿ ಪ್ರಾಣ ಹೋಗಿದೆ.