ಚೆನೈ: (ನ.17): Jai Bheem Controversy: ಕಳೆದ ಕೆಲವು ವಾರಗಳಿಂದ ನಟ ಸೂರ್ಯ ಅವರು ಮುಖ್ಯ ಪಾತ್ರವಹಿಸಿರುವ ಜೈ ಭೀಮ್ ಚಿತ್ರ ಹಲವಾರು ವಿಷಯಗಳಿಂದ ಪತ್ರಿಕೆಗಳ ಮುಖಪುಟದಲ್ಲಿ ಸುದ್ದಿಯಾಗಿದೆ. ಕೆಲವೊಂದು ಸಮುದಾಯವನ್ನು ಚಿತ್ರದಲ್ಲಿ ಗುರಿಯಾಗಿಟ್ಟು ಅವಹೇಳನ ಮಾಡಲಾಗಿದೆ ಎನ್ನುವ ಕಾರಣದಿಂದ ಸೂರ್ಯ ಅವರು ಈಗ ಅಪಾಯಕ್ಕೆ ಸಿಲುಕಿದ್ದು, ವಿವಾದ ಪೊಲೀಸ್ ಮೆಟ್ಟಿಲು ಹತ್ತಿದೆ.
ಪಿಎಂಕೆ ಜಿಲ್ಲಾ ಕಾರ್ಯದರ್ಶಿ ಪಳನಿಸ್ವಾಮಿ ಎನ್ನುವವರು ಸೂರ್ಯ ಅವರ ಮೇಲೆ ಹಲ್ಲೆ ಮಾಡುವವರಿಗೆ 1 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಘೋಷಣೆ ಮಾಡಿದ್ದು, ತಮಿಳುನಾಡಿನಲ್ಲಿ ಬಿಗು ಪರಿಸ್ಥಿತಿಯನ್ನು ತಂದು ಹಾಕಿದೆ. ಈಗಾಗಲೇ ಪೊಲೀಸರು ಹಿನ್ನಲೆಯಲ್ಲಿ ಚೆನ್ನೈಯ ಟಿ ನಗರದಲ್ಲಿರುವ ಸೂರ್ಯ ಅವರ ಮನೆಗೆ ಬಿಗಿ ಭದ್ರತೆಯನ್ನು ಒದಗಿಸಿದ್ದಾರೆ. ಪಳಲಿ ಸ್ವಾಮಿ ವಿರುದ್ಧ ಈಗಾಗಲೇ ಪೊಲೀಸರು ವಿವಿಧ ಸೆಕ್ಷನ್ ಗಳ ಅಡಿಯಲ್ಲಿ ಕೇಸು ದಾಖಲಿಸಿದ್ದಾರೆ.

ಚಿತ್ರತಂಡಕ್ಕೆ ಲೀಗಲ್ ನೋಟಿಸ್:
ವನ್ನಿಯಾರ್ ಸಮುದಾಯವನ್ನು ಅವಹೇಳನ ಮಾಡಲಾಗಿದೆ ಎಂದು ನ.15ರಂದು ಜೈ ಭೀಮ್ ಚಿತ್ರದ ನಾಯಕ ಸೂರ್ಯ, ಜ್ಯೋತಿಕಾ, ನಿರ್ದೇಶಕ ಟಿ ಜೆ ಜ್ಞಾನವೆಲ್, ಅಮೆಜಾನ್ ಪ್ರೈಮ್ ವಿಡಿಯೋ ಗೆ ವೇನಿಯರ್ ಸಂಗಮ್ ಎನ್ನುವವರು ಲೀಗಲ್ ನೋಟೀಸ್ ಕಳುಹಿಸಿದ್ದರು. ಬಳಿಕ ನಟ ಸೂರ್ಯ ಅವರಿಗೆ ಹಲವರಿಂದ ಬೆದರಿಕೆ ಬಂದಿದ್ದು, ಪೊಲೀಸರು, ಸೂರ್ಯ ಅವರ ಮನೆಯ ಮುಂದೆ ಬಿಗಿ ಭದ್ರತೆ ಕೈಗೊಂಡಿದ್ದಾರೆ.
ಜೈ ಭೀಮ್ ಚಿತ್ರತಂಡಕ್ಕೆ ನೀಡಲಾಗಿರುವ ಲೀಗಲ್ ನೋಟಿಸ್ ನಲ್ಲಿ , ಜೈ ಭೀಮ್ ಚಿತ್ರದಲ್ಲಿ ಕೆಲವೊಂದು ದೃಶ್ಯಗಳು ವನ್ನಿಯರ್ ಸಮುದಾಯವನ್ನು ಅವಹೇಳನಕಾರಿ ಮಾಡುವ ರೀತಿ ಇದೆ. ಚಿತ್ರತಂಡ ಸಾರ್ವಜನಿಕವಾಗಿ ಕ್ಷಮೆ ಕೇಳುವ ಜೊತೆಗೆ 5 ಕೋಟಿ ರೂಪಾಯಿಯನ್ನು ನೀಡಬೇಕು ಎಂದು ಹೇಳಲಾಗಿದೆ.
ಜೈ ಭೀಮ್ ಚಿತ್ರ ಸೂರ್ಯ ಹಾಗೂ ಜ್ಯೋತಿಕಾ ಅವರ 2ಡಿ ಪ್ರೊಡಕ್ಷನ್ ನಲ್ಲಿ ತಯಾರಾಗಿದೆ. ಇರುಳರ್ ಸಮುದಾಯಕ್ಕೆ ಸೇರಿದವರಿಗೆ ಪೊಲೀಸ್ ಕಸ್ಟಡಿಯಲ್ಲಿ ಆಗುವ ದೌರ್ಜನ್ಯಗಳು ಸಿನಿಮಾದಲ್ಲಿ ಇದೆ. 1993ರಲ್ಲಿ ನಡೆದ ನಿಜ ಘಟನೆಯನ್ನು ಆಧರಿಸಿ ಈ ಚಿತ್ರವನ್ನು ತಯಾರಿಸಲಾಗಿದೆ. ಈ ಚಿತ್ರದ ಮುಖ್ಯ ಪಾತ್ರದಲ್ಲಿ ಸೂರ್ಯ ಅಲ್ಲದೆ ಮಣಿಕಂದನ್, ಲಿಜೋಮೊಲ್ ಜೋಸ್ ನಟಿಸಿದ್ದಾರೆ. ಪ್ರಸ್ತುತ ವಿಚಿತ್ರ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಪ್ರಸಾರ ಆಗುತ್ತಿದೆ.