ದುಬೈ (ನ.17)Sourav Ganguly: ಬಿಸಿಸಿಐ ಸೌರವ್ ಗಂಗೂಲಿ ಅವರನ್ನು ಐಸಿಸಿ ಪುರುಷರ ಕ್ರಿಕೆಟ್ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎಂದು ಐಸಿಸಿ ಆಡಳಿತ ಮಂಡಳಿ ಘೋಷಣೆ ಮಾಡಿದೆ.
ಅನಿಲ್ ಕುಂಬ್ಳೆ ಅವರು ಮೂರು ವರ್ಷಗಳ ಕಾಲ ಐಸಿಸಿ ಪುರುಷರ ಕ್ರಿಕೆಟ್ ಸಮಿತಿಯ ಅಧ್ಯಕ್ಷ ಸ್ಥಾನದಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಈದೀಗ ಸೌರವ್ ಗಂಗೂಲಿ ಅವರು ಸ್ಥಾನ ತುಂಬಲಿದ್ದಾರೆ. ಸೌರವ್ ಅವರನ್ನು ಸ್ವಾಗತಿಸಲು ನಾನು ಸಂತೋಷಪಡುತ್ತೇನೆ” ಎಂದು ಐಸಿಸಿ ಅಧ್ಯಕ್ಷ ಗ್ರೆಗ್ ಬಾರ್ಕ್ಲೇ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅನಿಲ್ ಕುಂಬ್ಳೆ ಅವರು ಗರಿಷ್ಠ ಮೂರು ವರ್ಷಗಳ ಅವಧಿಗೆ ಸೇವೆ ಸಲ್ಲಿಸಿದ್ದರು. ವಿಶ್ವದ ಅತ್ಯುತ್ತಮ ಆಟಗಾರರಲ್ಲಿ ಒಬ್ಬರಾಗಿ ಮತ್ತು ನಂತರದ ಆಡಳಿತಗಾರರಾಗಿದ್ದರು. ಅವರ ಅನುಭವಗಳು ,ಕ್ರಿಕೆಟ್ ನಿರ್ಧಾರಗಳನ್ನು ಕೈಗೊಳ್ಳಲು ನಮಗೆ ಸಹಾಯ ಮಾಡುತ್ತದೆ.

ತೆರಿಗೆ ಹೊರೆ ಜವಬ್ದಾರಿ ವಹಿಸಿದ ಬಿಸಿಸಿಐ:
ಬಿಸಿಸಿಐನ ತೆರಿಗೆ ಹೊರೆಯನ್ನು ತನ್ನ ಪಾಲಿನಿಂದಲೇ ತುಂಬಲು ಐಸಿಸಿ ನಿರ್ಧರಿಸಿದೆ ಈ ಮೂಲಕ ಭಾರತೀಯ ಕ್ರಿಕೆಟ್ ಮಂಡಳಿಗ ರಿಲೀಫ್ ಸಿಕ್ಕಿದೆ. ಇದರಿಂದ ಭಾರತೀಯ ಮಂಡಳಿಗೆ ಸುಮಾರು 1500 ಕೋಟಿ ಉಳಿತಾಯವಾಗಲಿದೆ.
2024 ಮತ್ತು 2031 ರ ನಡುವೆ ಭಾರತದಲ್ಲಿ ನಡೆಯಲಿರುವ ICC ಈವೆಂಟ್‌ಗಳ ಸಮಯದಲ್ಲಿ BCCI ಆದಾಯದ ಮೇಲಿನ ಯಾವುದೇ ತೆರಿಗೆಯನ್ನು ICC ಪಾವತಿಸುತ್ತದೆ. BCCI ಭಾರತ ಸರ್ಕಾರದಿಂದ ತೆರಿಗೆ ವಿನಾಯಿತಿ ಪಡೆಯಲು ಸಾಧ್ಯವಿಲ್ಲ ಆದ್ದರಿಂದ ತೆರಿಗೆ ಪಾವತಿಸುವ ಜವಬ್ದಾರಿ ಹೊತ್ತುಕೊಂಡಿದೆ.
- 2024 ರಿಂದ 2031 ರವರಗೆ 3 ಈವೆಂಟ್‌ಗಳನ್ನು ಆಯೋಜಿಸುತ್ತದೆ.ಇದರಲ್ಲಿ, 2026 T20 ವಿಶ್ವಕಪ್, 2029 ಚಾಂಪಿಯನ್ಸ್ ಟ್ರೋಫಿ ಹಾಗೂ 2031 ವಿಶ್ವಕಪ್ ಒಳಗೊಂಡಿದೆ.
- ICC 2024 ರಿಂದ 2031 ರವರೆಗಿನ ತನ್ನ ಈವೆಂಟ್‌ಗಳನ್ನು ನೆನ್ನೆ,ಘೋಷಿಸಿತು.
- ಅಡಿಯಲ್ಲಿ ಭಾರತವು ಮೂರು ಪಂದ್ಯಾವಳಿಗಳ ಗರಿಷ್ಠ ಆತಿಥ್ಯವನ್ನು ಪಡೆದುಕೊಂಡಿತು.
- 2025 ರಲ್ಲಿ ಚಾಂಪಿಯನ್ಸ್ ಟ್ರೋಫಿಯ ಆತಿಥ್ಯವನ್ನು ನೀಡಲಾಗಿದೆ.
- 1996 ರ ವಿಶ್ವಕಪ್‌ನ ಸಹ-ಆತಿಥೇಯ ಪಾಕಿಸ್ತಾನವು ಲಾಹೋರ್‌ನಲ್ಲಿ ಶ್ರೀಲಂಕಾ ತಂಡ ಪ್ರಯಾಣಿಸುತ್ತಿದ್ದ ಬಸ್ ಮೇಲೆ ಭಯೋತ್ಪಾದಕ ದಾಳಿಯ ಹಿನ್ನಲೆ, ಅನೇಕ ಅಂತರರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸಲು ಸಾಧ್ಯವಾಗಲಿಲ್ಲ.
- ಚಾಂಪಿಯನ್ಸ್ ಟ್ರೋಫಿಯನ್ನು 2017 ರಲ್ಲಿ UK ನಲ್ಲಿ ಕೊನೆಯದಾಗಿ ನಡೆಸಲಾಯಿತು ಮತ್ತು ಪಂದ್ಯಾವಳಿಯು 8 ವರ್ಷಗಳ ನಂತರ ICC ಕ್ಯಾಲೆಂಡರ್‌ಗೆ ಹಿಂತಿರುಗಲಿದೆ.
ವಿನಾಯಿತಿ ನೀಡುವಂತೆ ಆಗ್ರಹ:
‘ಬಿಸಿಸಿಐ ದೊಡ್ಡ ಮೊತ್ತವನ್ನು ಕಳೆದುಕೊಂಡಿರುವುದು ಅನ್ಯಾಯವಾಗಿದೆ. ಈ ಬಗ್ಗೆ, ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಕಾರ್ಯದರ್ಶಿ ಜಯ್ ಶಾ ಅವರು ತೆರಿಗೆ ವಿನಾಯಿತಿ ವಿಷಯದ ಕುರಿತು ಐಸಿಸಿ ಜೊತೆ ಮಾತುಕಥೆ ನೆಡೆಸಿದ್ದು, ಮಂಡಳಿಯ ತಪ್ಪು ಎಂದು ಹೇಳಲು ಆಗುವುದಿಲ್ಲ.
ಆದರೆ, ಉಳಿದ ಕ್ರಿಕೆಟ್ ಮಂಡಳಿಗಳು ತಮ್ಮ ಸರ್ಕಾರದಿಂದ ತೆರಿಗೆ ವಿನಾಯಿತಿಯನ್ನು ಪಡೆಯುತ್ತವೆ. ವಿನಾಯಿತಿ ವಿಷಯಕ್ಕೆ ನೋಡಿದರೆ, ಭಾರತದಲ್ಲಿ ಸಾಧ್ಯವಾಗುವುದಿಲ್ಲ. ಈ ಕಾರಣದಿಂದಾಗಿ, ಮುಂಬರುವ ಪಂದ್ಯಾವಳಿಯನ್ನು ಆಯೋಜಿಸಲು ಭಾರತಕ್ಕೆ ಪರಿಹಾರ ನೀಡಲು ಐಸಿಸಿ ನಿರ್ಧರಿಸಿದೆ.