Exercise: (ನ.17): ಮನುಷ್ಯ ಆರೋಗ್ಯದಿಂದ ಇರಲು ನಿತ್ಯವೂ (Daily workout) ವ್ಯಾಯಾಮ ಮಾಡುವುದು ಮುಖ್ಯ. ಇದರಿಂದ ಮಾನಸಿಕ ಹಾಗೂ ದೈಹಿಕವಾಗಿ ಸದೃಡವಾಗಿರಲು(Strong) ಸಾಧ್ಯವಾಗುತ್ತದೆ.
ವ್ಯಾಯಾಮದಿಂದ ಸ್ನಾಯುಗಳು ಚಟುವಟಿಕೆಯಿಂದ ಕೂಡಿರುತ್ತವೆ ಹಾಗಾಗಿ ವ್ಯಾಯಾಮ ಅಥವಾ ವಾಕಿಂಗ್ ಅಗತ್ಯ.
ದೇಹದಿಂದ ಕಶ್ಮಲ ಹೊರಹಾಕುತ್ತದೆ:
ದಿನನಿತ್ಯ ವ್ಯಾಯಾಮ ಮಾಡಿದರೆನಮ್ಮ ದೇಹದಲ್ಲಿನ ರೋಗನಿರೋಧಕ(Immunity) ಶಕ್ತಿಯನ್ನು ವೃದ್ಧಿಸುತ್ತದೆ ಹಾಗೂ ವ್ಯಾಯಾಮದಿಂದ ದೇಹ(Sweat) ಬೆವರಿ ಕಲ್ಮಶ ವಸ್ತುಗಳು ದೇಹದಿಂದ ಹೊರೆಗೆ ಹೋಗಲು ಸಹಾಯ ಆಗುತ್ತದೆ.

ಹೆಚ್ಚುತ್ತದೆ ಜೀರ್ಣಶಕ್ತಿ:
ನಿತ್ಯ 20 ನಿಮಿಷದಷ್ಟು ಹೊತ್ತು ವ್ಯಾಯಾಮ ಅಥವಾ ವಾಕಿಂಗ್ ಮಾಡುವುದು ಆರೋಗ್ಯವಂತ ಆಗಿರಲು ಮುಖ್ಯ ಎಂದು ವೈದ್ಯರು ಹೇಳುತ್ತಾರೆ.(Digestion) ನಾವು ತಿನ್ನುವ ಆಹಾರ ಜೀರ್ಣವಾಗಲು ವ್ಯಾಯಾಮ ಬೇಕೇ ಬೇಕು.
ಜಿಮ್ ಬೇಕಿಲ್ಲ:
ಈಗಿನ ಕಾಲದಲ್ಲಿ ವ್ಯಾಯಾಮ ಎಂದರೇ ಜಿಮ್ ಎಂಬ ಕಲ್ಪನೆ ಮೂಡುತ್ತದೆ. ವ್ಯಾಯಾಮ(gym) ಜಿಮ್ ಕಸರತ್ತಿನ ರೀತಿ ಕಠಿಣ ಆಗಿರುವ ಅಗತ್ಯ ಇಲ್ಲ. ವೇಗದ ನಡಿಗೆ, ಸೈಕ್ಲಿಂಗ್, ಓಟದಲ್ಲೂ(Running)ತೊಡಗಿಸಿಕೊಳ್ಳಬಹುದು. ಜಿಮ್ ನಲ್ಲಿ ವರ್ಕೌಟ್ ಮಾಡುವುದು ಬೇಡ ಎಂದಲ್ಲ.. ಅಗತ್ಯಕ್ಕೆ ತಕ್ಕಂತೆ ಮಾಡುವುದೂ ಸೂಕ್ತ.
ವಿವಿಧ ರೀತಿಯ ವ್ಯಾಯಾಮಗಳು:
ಮೊದಲೆಲ್ಲ ವ್ಯಾಯಾಮ ಎಂದರೇ ಸ್ಕೂಲ್ ನಲ್ಲಿ ಮಾಡುತ್ತಿದ್ದ ಡ್ರಿಲ್, (Kusthi)ಕುಸ್ತಿಯ ಗರದಿಮನೆ ಅಥವಾ ಜಿಮ್ ನಲ್ಲಿ(gym) ಮಾಡಿಸುತ್ತಿದ್ದರು. ಹಾಗೇಯೇ ವಾಯ್ಯಮದಲ್ಲಿ ವಿವಿಧ ರೀತಿಯ ಆಯಾಮಗಳು ಸೃಷ್ಟಿಯಾಗಿದೆ. (aerobic)ಏರೋಬಿಕ್, ಡಾನ್ಸ್,ಎಂದು ಕರೆಯುತ್ತಾರೆ.

YouTube ಗುರು:
ಕೆಲವರಿಗೆ, ವ್ಯಾಯಾಮ ಕಲಿಯಲು ಜಿಮ್ ಗೆ ಹೋಗಬೇಕು ಎಂದೇನಿಲ್ಲ, ಮನೆಯಲ್ಲೇ(ಜಿಮ್ Workout) ಜಿಮ್ ವರ್ಕೌಟ್ ಮಾಡಬಹುದು. ಈಗೆಲ್ಲಾ youtube nodi ಕಲಿಯುವವರ ಸಂಖ್ಯೆ ಹೆಚ್ಚಾಗಿದೆ. ಎಲ್ಲಾ ರೀತಿಯ ವ್ಯಾಯಾಮಗಳು ಯೂಟ್ಯೂಬ್ ನಿಂದಾ ಕಲಿಯಬಹುದು.
ವ್ಯಾಯಾಮ ಜೀವನದ ಒಂದು ಭಾಗ ಎಂದು ಪರಿಗಣಿಸಿ, ಕೇವಲ ಕಚೇರಿ ಕೆಲಸಗಳಲ್ಲಿ ತೊಡಗಿಸಿಕೊಳ್ಳದೆ ಒಂದಷ್ಟು ಹೊತ್ತು ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರತಿಯೊಬ್ಬರೂ ಯತ್ನಿಸಬೇಕು.