ದಿಯು:(ನ.17) Parasailing: ಪ್ಯಾರಾಸೈಲಿಂಗ್ ಮಾಡುವ ವೇಳೆ ಪ್ಯಾರಾಚೂಟ್ನ ಹಗ್ಗ ತುಂಡಾಗಿ ದಂಪತಿ ಸಮುದ್ರಕ್ಕೆ ಬಿದ್ದ ಘಟನೆ ದಿಯುನ ನಾಗೋವಾ ಬೀಚ್‌ನಲ್ಲಿಇಂದು ನಡೆದಿದೆ. ಪ್ಯಾರಾಚೂಟ್ ಆಕಾಶದಲ್ಲಿ ಹಾರಾಡುತ್ತಿದ್ದಂತೆಯೇ ಹಗ್ಗ ತುಂಡಾಗಿ ಅಜಿತ್ ಕಥಾಡ್ ದಂಪತಿ ಸಮುದ್ರಕ್ಕೆ ಬೀಳುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಂತೋಷದಿಂದ ಆಕಾಶದಲ್ಲಿ ಹಾರಾಡುತ್ತಿದ್ದಂತೆಯೇ ಕೂಗುತ್ತಿದ್ದರು. ಇನ್ನೂ ಮೇಲಕ್ಕೆ ಹಾರುತ್ತಿದ್ದಂತೆಯೇ ಹಗ್ಗ ತುಂಡಾಗಿರುವುದು ವೀಡಿಯೋನಲ್ಲಿ ಕಾಣಿಸುತ್ತಿದೆ. ದಂಪತಿ ಹೆದರಿ ಕಿರುಚಾಡುತ್ತಿರುವುದು ಕೇಳಿಸುತ್ತದೆ. ಬೋಟ್ನಲ್ಲಿದ್ದವರೂ
ಸಹ ಕೂಗಾಡುತ್ತಿರುವುದನ್ನು ದೃಶ್ಯದಲ್ಲಿ ನೋಡಬಹುದು.
ಅಷ್ಟು ಎತ್ತರದಿಂದ ಬಿದ್ದ ದೃಶ್ಯ ನೋಡಿದರೆ ಎಂಥವರಿಗೂ ಎದೆ ಝಲ್ ಎನಿಸುತ್ತದೆ. ದಂಪತಿ ಬೀಳುತ್ತಿದ್ದಂತೆಯೇ, ಜೀವರಕ್ಷಕ ದಳದ ಸಿಬ್ಬಂದಿ ದಂಪತಿಯನ್ನು ರಕ್ಷಿಸಿದ್ದಾರೆ. ದಂಪತಿಗಳು ಜೀವರಕ್ಷಕ ಧರಿಸಿದ್ದರಿಂದ ಪ್ರಾಣಾಪಯಾದಿಂದ ಪಾರಾಗಿದ್ದಾರೆ.
ಸಾಹಸಮಯ ದೃಶ್ಯಗಳಲ್ಲಿ ಹೀಗೆ ಆಗುವುದು ಸಾಮಾನ್ಯವಾದರೂ,ನಿಜವಾಗಿಯಿಗೂ ಅನುಭವಕ್ಕೆ ಬಂದಾಗ ಒಂದು ಕ್ಷಣ ಎದೆ ಧಗ್ ಎನ್ನುವಂತೆ ಮಾಡುತ್ತದೆ.ಗುಜರಾತಿ ಮೂಲದ ದಂಪತಿ ಇಂದು ಇಂತಹ ಸನ್ನಿವೇಶ ಎದುರಿಸಿದ್ದಾರೆ.
ಅಜಿತ್ ಕಥಾಡ್ ಮತ್ತು ಅವರ ಪತ್ನಿ ಸರಳಾ ಮೋಟಾರ್ ಬೋಟ್‌ನಿಂದ ಪ್ಯಾರಾಚೂಟ್ ಮೂಲಕ ಮೇಲಕ್ಕೆ ಹಾರಿದ್ದರು. ಹೀಗೆ ಪ್ಯಾರಾಚೂಟ್ ಮೇಲಕ್ಕೆ ಸಾಗುತ್ತಿದ್ದಂತೆಯೇ ಹಗ್ಗ ತುಂಡಾಗಿದೆ. ಇವರು ಧರಿಸಿದ್ದ ಲೈಫ್ ಜಾಕೆಟ್ ಜೀವ ಉಳಿಸಿದೆ
ಹಗ್ಗ ತುಂಡಾಗಿರುವುದು ತಕ್ಷಣ ತಿಳಿದಿರಲಿಲ್ಲ. ಬೋಟಿನಲ್ಲಿ ಇದ್ದ ಅಜಿತ್ ಸಹೋದರ ಈ ಸನ್ನಿವೇಶವನ್ನು ಕಂಡು ಕಿರುಚಿದರು. ಸಮುದ್ರಕ್ಕೆ ಬಿದ್ದ ದಂಪತಿಗಳನ್ನು ಪಾಮ್ಸ್ ಅಡ್ವೆಂಚರ್ ಮತ್ತು ಮೋಟಾರ್ ಸ್ಪೋರ್ಟ್ಸ್‌ನ ಜೀವರಕ್ಷಕರು ತಕ್ಷಣ ರಕ್ಷಣೆ ಮಾಡಿ ದಡಕ್ಕೆ ಕರೆತಂದಿದ್ದರು. ಸದ್ಯ ಈ ವಿಡಿಯೋ ಟ್ವಿಟ್ಟರ್ ಸೇರಿದಂತೆ ವಿವಿಧ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹರಿದಾಡುತ್ತಿದೆ.

ಸಂಸ್ಥೆಯ ನಿರ್ಲಕ್ಷ್ಯ ಕಾರಣ:
ಈ ಸಾಹಸಯಾನ ನಡೆಸುತ್ತಿರುವ ಖಾಸಗಿ ಸಂಸ್ಥೆಯ ನಿರ್ಲಕ್ಷ್ಯದಿಂದಲೇ ಇಂತಹ ಘಟನೆ ನಡೆದಿದೆ ಎಂದು ಆರೋಪಿಸಲಾಗಿದೆ.ಸಮುದ್ರದಲ್ಲಿ ಉಂಟಾದ ಗಾಳಿಯ ಒತ್ತಡಕ್ಕೆ ಹಗ್ಗ ತುಂಡಾಗಿದೆ ಎಂದು ಎಂದು ಪಾಮ್ಸ್ ಅಡ್ವೆಂಚರ್ ಮತ್ತು ಮೋಟಾರ್ಸ್ಪೋರ್ಟ್ಸ್ ಮಾಲೀಕರು ಹೇಳಿದ್ದಾರೆ.
ಕಳೆದ ಮೂರು ವರ್ಷಗಳಲ್ಲಿ ಈ ರೀತಿಯ ಘಟನೆ ಸಂಭವಿಸಿದ್ದು ಇದೇ ಮೊದಲು. ಏಕೆಂದರೆ ಆ ದಿನ ಗಾಳಿ ತುಂಬಾ ಬೀಸುತ್ತಿತ್ತು ಎಂದು ಮೋಹನ್ ಲಕ್ಷ್ಮಣ್ ತಿಳಿಸಿದ್ದಾರೆ. ಸಂಸ್ಥೆಯ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Must be taken action against such service provider. This is clear case of negligence! https://t.co/zSCBtzlCXZ
— Vishal Bagale (@VishalBagale1) November 16, 2021
ಪ್ಯಾರಾಚೂಟ್ ಹಗ್ಗ ಸವೆದಿತ್ತು:
ಈ ವೇಳೆ ಮಾತನಾಡಿದ ದಂಪತಿ ಸಹೋದರ ರಾಕೇಶ್ , ನಾನು ವಿಡಿಯೊ ರೆಕಾರ್ಡ್ ಮಾಡುತ್ತಿದ್ದೆ. ಹಗ್ಗ ತುಂಡಾದ ತಕ್ಷಣ ಏನು ಮಾಡಬೇಕು ಎಂದು ತೋಚುತ್ತಿರಲಿಲ್ಲ. ನನ್ನ ಅತ್ತಿಗೆ ಮತ್ತು ಅಣ್ಣ ಬಹಳ ಎತ್ತರದಿಂದ ಕೆಳಕ್ಕೆ ಬೀಳುವುದನ್ನು ನೋಡಿ ತುಂಬಾ ಗಾಬರಿಯಾಯಿತು ಎಂದು ಹೇಳಿದ್ದಾರೆ. ಪ್ಯಾರಾಚೂಟ್ ಹಗ್ಗವು ಸವೆದಿದೆ ಎಂದು ನಿರ್ವಾಹಕರೊಂದಿಗೆ ಮಾತನಾಡಿದ್ದೆ, ಆದರೆ ಏನೂ ಆಗುವುದಿಲ್ಲ ಎಂದು ಅವರು ನನಗೆ ಭರವಸೆ ನೀಡಿದ್ದರು.
ನಾವು ಎತ್ತರಕ್ಕೆ ಹಾರಾಡುತ್ತಿದ್ದಂತೆಯೇ ಹಗ್ಗ ತುಂಡಾಗಿ, ಪ್ಯಾರಾಚೂಟ್ ಹೇಗೆ ನಿಯಂತ್ರಿಸಬೇಕು ಎಂದು ತಿಳಿಯದೇ ಒಂದು ಕಡೆಯಿಂದ ಇನ್ನುಂದು ಕಡೆಗೆ ತೂಗಾಡಲು ಪ್ರಾರಂಭಿಸಿದೆವು. ತಕ್ಷಣವೇ ಹಗ್ಗ ತುಂಡಾಗಿ ನಾವು ಸಮುದ್ರಕ್ಕೆ ಬಿದ್ದೆವು.
ಲೈಫ್ ಜಾಕೆಟ್ ಧರಿಸಿದ್ದರಿಂದ ನೀರಿನಲ್ಲಿ ತೇಲುತ್ತಿದ್ದೆವು.
ನನ್ನ ಹೆಂಡತಿ ತುಂಬಾ ಹೆದರಿದ್ದಳು ಹಾಗಾಗಿ ಕೆಲಹೊತ್ತು ಮಾತನಾಡಲು ಸಾಧ್ಯವಾಗಲಿಲ್ಲ. ರಕ್ಷಕ ತಂಡದವರು ಬಂದು ನಮ್ಮನ್ನು ರಕ್ಷಿಸಿದರು ಎಂದು ಅಜಿತ್ ಕಥಾಡ್ ಘಟನೆಯನ್ನು ವಿವರಿಸಿದ್ದಾರೆ. ಒಟ್ಟಾರೇ, ಇಂತಹ ಸಾಹಸಮಯ ಆಟೋಟಗಳಲ್ಲಿ ಭಾಗವಹಿಸುವ ಮುನ್ನ ಯೋಚಿಸಬೇಕಾಗುತ್ತದೆ.