ದೇಶದ ಜನತೆ ಬಹಳ ದಿನದಿಂದ ಕಾಯುತ್ತಿದ್ದ ಕೊರೋನಾ ಮಾತ್ರೆ ವೈರಸ್ ಟ್ಯಾಬ್ಲೆಟ್ ಬಿಡುಗಡೆಮಾಡುವ ಸಾಧ್ಯತೆಗಳಿದ್ದು ಇದರ ಸಂಪೂರ್ಣ ಚಿಕಿತ್ಸೆಯ ವೆಚ್ಚ ಸುಮಾರು 500ರಿಂದ ಸಾವಿರ ರೂಪಾಯಿಗಳು ತಗುಲಲಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: Exercise: ಉತ್ತಮ ಆರೋಗ್ಯಕ್ಕೆ ಬೇಕು ನಿತ್ಯ ವ್ಯಾಯಾಮ
ಭಾರತದಲ್ಲಿ ಕೊರೊನಾ ಮಾತ್ರೆ ʼವೈರಸ್ಟ್ಯಾಬ್ಲೆಟ್ʼಗಳನ್ನ ಶೀಘ್ರ ಬಿಡುಗಡೆ ಮಾಡುವ ಸಾಧ್ಯತೆಯಿದ್ದು, ಸಂಪೂರ್ಣ ಚಿಕಿತ್ಸೆಯ ವೆಚ್ಚ 500-1000 ರೂ. ತಗುಲಿದೆ ಎನ್ನಲಾಗ್ತಿದೆ. ಇದನ್ನ ಅಮೇರಿಕನ್ ಫಾರ್ಮಾಸ್ಯುಟಿಕಲ್ ಕಂಪನಿ ಮೆರ್ಕ್ ಮತ್ತು ರಿಡ್ಜ್ಬ್ಯಾಕ್ ಬಯೋಥೆರಪಿಟಿಕ್ಸ್ ಅಭಿವೃದ್ಧಿಪಡಿಸಿದ್ದು, ಕೊರೊನಾದ ಮೊದಲ ಮೌಖಿಕ ಮಾತ್ರೆಯಾಗಿದೆ.
ಈ ಮಾತ್ರೆಯ ಹೆಸರು ಮೊಲ್ನುಪಿರವಿರ್. ಇದು ಆಂಟಿವೈರಸ್ ಔಷಧವಾಗಿದ್ದು ಅರ್ಧದಷ್ಟು ಆಸ್ಪತ್ರೆಗೆ ದಾಖಲಾಗುವ ಪ್ರಮಾಣವನ್ನು ಕಡಿಮೆ ಮಾಡುತ್ತದೆ ಎನ್ನಲಾಗಿದೆ. ಬ್ರಿಟನ್ ಕೊರೋನಾಗೆ ವಿಶ್ವದಲ್ಲಿಯೇ ಮೊದಲು ಔಷಧಿಯನ್ನು ಕಂಡು ಹಿಡಿದ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಕೋವಿಡ್ ಲಕ್ಷಣಗಳು ಕಾಣಿಸಿಕೊಂಡ ದಿನದಲ್ಲಿಯೇ ಬ್ರಿಟನ್ ಔಷಧಿಯನ್ನು ತೆಗೆದುಕೊಳ್ಳುವಂಥ ಶಿಫಾರಸು ಮಾಡಲಾಗಿತ್ತು.

ದೇಶದಲ್ಲಿ ಸುಮಾರು ಏಳುನೂರು ರೋಗಿಗಳ ದತ್ತಾಂಶವನ್ನು ಕಲೆಹಾಕಿದ್ದು ನಿಯಂತ್ರಕ ಮಂಡಳಿ ಈ ವಾರದ ಆರಂಭದಲ್ಲಿ ಔಷಧಿಗಳನ್ನು ತುರ್ತು ಬಳಕೆಗೆ ತೆಗೆದುಕೊಳ್ಳಬಹುದು ಎಂಬ ನಿರೀಕ್ಷೆ ಇದೆ. ಅಲ್ಲದೆ ಮೊದಲ ಮೌಖಿಕ ಮಾತ್ರೆ ಯನ್ನು ಮುಂಬರುವ ದಿನಗಳಲ್ಲಿ ಬಿಡುಗಡೆ ಮಾಡಬಹುದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದು ಸಾಮಾನ್ಯ ಜನರಿಗೂ ಕೈಗೆಟುಕುವ ದರದಲ್ಲಿ, ಪ್ರತಿ ಟ್ಯಾಬ್ಲೆಟ್ಸ್ಗೆ 25ರಿಂದ ₹50 ಆಗಬಹುದು ಎಂದು ತಂತ್ರಜ್ಞಾನ ಇಲಾಖೆ ತಿಳಿಸಿದೆ. ಅಧ್ಯಯನದ ಪ್ರಕಾರ ರೋಗಿಯು ಐದು ದಿನಗಳ ಚಿಕಿತ್ಸೆಯ ಅವಧಿಯಲ್ಲಿ 15ರಿಂದ 20 ಮಾತ್ರೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಆದ್ದರಿಂದ ಒಂದು ಕೋರ್ಸ್ ಮಾತ್ರೆಯ ಬೆಲೆ ಐನೂರರಿಂದ ಸಾವಿರ ರೂಪಾಯಿ ಆಗಬಹುದು ಎಂದು ಅಭಿಪ್ರಾಯಪಡುತ್ತಾರೆ. ಸಾಮಾನ್ಯ ಜನರಿಗೆ ಕೈಗೆಟುಕುವ ದರದಲ್ಲಿ ಮಹತ್ವ ನೀಡಲಾಗುತ್ತದೆ ಎಂದು ಹೇಳಿದ್ದಾರೆ.