ಬಿಹಾರ:(ನ.16): Sushant Singh Rajput: ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಕುಟುಂಬ ವರ್ಗದವರು ಅಪಘಾತದಲ್ಲಿ(Road Accident) ಸಾವನ್ನಪ್ಪಿದ ಘಟನೆ ಇಂದು ಬಿಹಾರದ ಲಖಿಸರಾಯಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 333 ರಲ್ಲಿ ಇಂದು ಬೆಳಗ್ಗೆ ನಡೆದಿದೆ.
ಸುಶಾಂತ್ ಸಿಂಗ್ ರಜಪೂತ್ ಅವರ ಕುಟುಂಬದ ಐದು ಮಂದಿ ಪ್ರಯಾಣಿಸುತ್ತಿದ್ದ ವಾಹನವು ಟ್ರಕ್ ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಕುಟುಂಬದ ಐವರು ಮೃತಪಟ್ಟಿದ್ದಾರೆ.
ಅಂತ್ಯಸಂಸ್ಕಾರಕ್ಕೆ ತೆರಳಿದ್ದ ಕುಟುಂಬ:
ಹರಿಯಾಣದ ಹಿರಿಯ ಪೊಲೀಸ್ ಅಧಿಕಾರಿ ಒಪಿ ಸಿಂಗ್ ಅವರ ಸಹೋದರಿ ಗೀತಾ ದೇವಿ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಕುಟುಂಬ ಸದಸ್ಯರು ಪಾಟ್ನಾದಿಂದ ಹಿಂದಿರುಗುತ್ತಿದ್ದರು. ಓ ಪಿ ಸಿಂಗ್ ಅವರು ಸುಶಾಂತ್ ಸಿಂಗ್ ರಜಪೂತ್ ಅವರಿಗೆ ಸೋದರಮಾವ ಆಗಿದ್ದರು.
ಒಟ್ಟು ಹತ್ತು ಜನರು ಪಾಟ್ನಾದಿಂದ ಹಿಂದಿರುಗುತ್ತಿದ್ದರು. ಹಲ್ಸಿ ಪೊಲೀಸ್ ಠಾಣೆ ವ್ಯಾಪ್ತಿಯ ಮೇಲ್ದರ್ಜೆಗೇರಿಸಿದ ಸ್ಕೂಲ್ ಬಳಿ ಅಪಘಾತ ಸಂಭವಿಸಿದ್ದು
ಲಖಿಸರಾಯಿ ಪೊಲೀಸ್ ವರಿಷ್ಠಾಧಿಕಾರಿ ಸುನಿಲ್ ಕುಮಾರ್ ಅವರು ದೃಢಪಡಿಸಿದ್ದಾರೆ. ಸುಮೋ (Driver) ಚಾಲಕ ಸೇರಿದಂತೆ ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು ಉಳಿದ 4 ಮಂದಿಯನ್ನು ಆಸ್ಪತ್ರೆಗೆ ರವಾನಿಸಲಾಗಿದೆ, ಗಾಯಾಳುಗಳ ಸ್ಥಿತಿ ಚಿಂತಾಜನಕವಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.
ಗಾಯಗೊಂಡಿರುವ ಬಲಮುಕುಂದ ಸಿಂಗ್ ದಿಲ್ಕುಷ್ ಸಿಂಗ್ ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಪಾಟ್ನಾಗೆ ಕಳುಹಿಸಲಾಗಿದೆ. ಇಬ್ಬರಾದ ಬಾಲ್ಮೀಕಿ ಸಿಂಗ್ ಮತ್ತು ತೋನು ಸಿಂಗ್ ಅವರನ್ನು ಲಖಿಸರಾಯ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಲಾಲ್ಜಿತ್ ಸಿಂಗ್, ಇಬ್ಬರು ಮಕ್ಕಳಾದ ಅಮಿತ ಶೇಖರ್ ಅಲಿಯಾಸ್ ನೆಮಾನಿ ಸಿಂಗ್ ಹಾಗೂ ರಾಮಚಂದ್ರ ಸಿಂಗ್, ಬೇಬಿ ದೇವಿ, ಅನಿತಾ ದೇವಿ ಮತ್ತು ಚಾಲಕ ಪ್ರೀತಮ್ ಕುಮಾರ್ ಅಪಘಾತದಲ್ಲಿ ಮೃತಪಟ್ಟವರು. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಲಖಿಸರಾಯ್ ಆಸ್ಪತ್ರಗೆ ಕಳಿಸಲಾಗಿದೆ.
ಸುಶಾಂತ್ ಸಾವು ;ನಿಲ್ಲದ ಅನುಮಾನ
ಬಾಲಿವುಡ್ ಖ್ಯಾತ ನಟರಾಗಿದ್ದ ಸುಶಾಂತ್ ಸಿಂಗ್ ರಜಪೂತ್ (Rajput Singh Purohit) ಅವರು 2020, ಜೂ 14 ರಂದು ಮುಂಬೈನ ಅಪಾರ್ಟ್ಮೆಂಟ್ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ರಜಪೂತ್ ಸಿಂಗ್ ಅವರ ನಿಧನದ ಹಿನ್ನೆಲೆ ಅನುಮಾನವಾಗಿತ್ತು. ಸದ್ಯ ಇನ್ನು ಅವರದ್ದು ಕೊಲೆಯೋ ಅಥವಾ ಆತ್ಮಹತ್ಯೆಯೋ ಪ್ರಶ್ನೆಗೆ ಸರಿಯಾದ ಉತ್ತರ ಸಿಕ್ಕಿಲ್ಲ.
ಸೋಶಿಯಲ್ ಮೀಡಿಯಾದಲ್ಲಿ ಸುಶಾಂತ್ ಸಿಂಗ್ ಸಾವಿಗೆ ನ್ಯಾಯ ಸಿಗಬೇಕು ಎಂದು ಅಭಿಮಾನಿಗಳು ಅಭಿಯಾನ ನಡೆಸುತ್ತಿದ್ದಾರೆ. ಇಂದು ಸುಶಾಂತ್ ಅವರ ಕುಟುಂಬವು ಅಪಘಾತದಲ್ಲಿ ಸಾವನ್ನಪ್ಪಿದ್ದು, ಅಭಿಮಾನಿಗಳಿಗೆ ಇನ್ನಷ್ಟು ಆಘಾತ ತಂದಿದೆ