ಮಾಸ್ಕೋ: (ನ.16): Space Junk: ಬಾಹ್ಯಾಕಾಶ ನಿಲ್ದಾಣದಲ್ಲಿದ್ದ ಗಗನಯಾತ್ರಿಗಳಿಗೆ ತ್ಯಾಜ್ಯದ (Space Junk) ಆತಂಕ ಉಂಟಾಗಿದೆ. ನಿಲ್ದಾಣದಲ್ಲಿ ಅಮೆರಿಕದ ನಾಲ್ವರು, ಜರ್ಮನಿಯ ಒಬ್ಬರು ಹಾಗೂ ರಷ್ಯಾದ ಇಬ್ಬರು ಗಗನಯಾತ್ರಿಗಳು ಇದ್ದಾರೆ. ತ್ಯಾಜದ ತೊಂದರೆಯಿಂದ ತಮ್ಮ ವಾಹನಗಳಲ್ಲೇ ತಂಗುವಂತೆ ಬಾಹ್ಯಾಕಾಶ ನಿಯಂತ್ರಕರು ನಿರ್ದೇಶನ ನೀಡಿದ್ದಾರೆ.
ಅಮೆರಿಕ ಬಾಹ್ಯಾಕಾಶ ಕಮಾಂಡ್ ಹೇಳಿರುವ ಪ್ರಕಾರ ಐಎಸ್ಎಸ್ನಲ್ಲಿ ಸೃಷ್ಟಿಯಾಗಿರುವ ತ್ಯಾಜ್ಯದಿಂದ ತೊಂದರೆಯಾಗಿದ್ದು, ಗಗನಯಾತ್ರಿಗಳ (Science Experiment )ವಿಜ್ಞಾನ ಸಂಶೋಧನೆಗೆ ಹಾಗೂ ಸುಲಲಿತ ಕೆಲಸಗಳಿಗೆ ಅಡ್ಡಿ ಮಾಡಿದೆ. ಇನ್ನೂ ಒಂದೆರಡು ದಿನಗಳವರೆಗೆ ಇದೇ ರೀತಿಯ ತೊಂದರೆ ಆಗಬಹುದು ಎಂದು ಹೇಳಿದ್ದಾರೆ.

ಏನಿದು ಬಾಹ್ಯಾಕಾಶ ತ್ಯಾಜ್ಯ?
ಬಾಹ್ಯಾಕಾಶ ತ್ಯಾಜ್ಯವನ್ನು(Space Junk) ಬಾಹ್ಯಾಕಾಶ ಮಾಲಿನ್ಯ ಅಥವಾ ಬಾಹ್ಯಾಕಾಶ ಕಸ ಎಂದು ಹೇಳಬಹುದು. ಮಾನವರು ಉಡಾವಣೆ ಮಾಡಿದ(satellite) ಉಪಗ್ರಹಗಳು ನೌಕೆ, ರಾಕೆಟ್ ಹಾಗೂ ಇತರ ಸಂಶೋಧನಾ ಸಾಧನಗಳು (failed)ವಿಫಲವಾಗಿ ಅಲ್ಲೇ ಚೂರು ಚೂರುಗಳಾಗಿ ಕಸವಾಗಿ ಮಾರ್ಪಾಡಾಗುತ್ತದೆ. ಪ್ರಸ್ತುತ ಸುಮಾರ 6 ಸಾವಿರಕ್ಕೂ ಅಧಿಕ ಟನ್ ತ್ಯಾಜ್ಯ ಬಾಹ್ಯಾಕಾಶದಲ್ಲಿದೆ.
ತ್ಯಾಜ್ಯ ಸೃಷ್ಟಿಯಾಗಿದ್ದು ಹೇಗೆ?
ಕಕ್ಷೆಯಲ್ಲಿದ್ದ ತನ್ನದೇ ಸ್ವಂತ ಉಪಗ್ರಹವೊಂದನ್ನು(Satellite Blasted) ನೆನ್ನೆ ಸ್ಫೋಟಿಸಿದ ಕಾರಣ ಅವಶೇಷಗಳು/ತ್ಯಾಜ್ಯಗಳು ಸೃಷ್ಟಿಯಾಗಿತ್ತು.ಇದರಿಂದ 1500ಕ್ಕೂ ಹೆಚ್ಚು ತ್ಯಾಜ್ಯದ ಚೂರುಗಳಾಗಿತ್ತು. ಬಾಹ್ಯಾಕಾಶ ತ್ಯಾಜ್ಯಗಳಿಂದ ,ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿದ್ದ ಗಗನಯಾತ್ರಿಗಳ ಕಾರ್ಯಕ್ಕೆ ಅಡೆತಡೆಯುಂಟಾಗಿದೆ.
ಬಾಹ್ಯಾಕಾಶ ನಿಲ್ದಾಣಕ್ಕೆ ಅಡಚಣೆ:
ಸೃಷ್ಟಿಯಾಗಿರುವ ತ್ಯಾಜ್ಯದಿಂದ ಸದ್ಯ(Earth) ಭೂಮಿಗೆ ಯಾವುದೇ ರೀತಿಯ ಹಾನಿ ಆಗುವುದಿಲ್ಲ. ಆದರೆ ಕಕ್ಷೆಯಲ್ಲಿ ಅನಾಥವಾಗಿ ಸುತ್ತುತ್ತಿರುವ ತ್ಯಾಜ್ಯಗಳು, ಸಮೀಪ ಸುತ್ತುತ್ತಿರುವ ಕೃತಕ ಉಪಗ್ರಹಗಳು,(International Space Station) ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಕಾರ್ಯನಿರ್ವಹಣೆಗೆ ಅಡ್ಡಿ ಮಾಡಬಹುದು ಎಂದು ಆತಂಕ ಎದುರಾಗಿದೆ.

ತ್ಯಾಜ್ಯವನ್ನು ತಡೆಯುವುದು ಹೇಗೆ?
ಸುತ್ತುತ್ತಿರುವ ತ್ಯಾಜ್ಯಗಳನ್ನು ಬಲೆ ಬಳಸಿ ಕಸದ ಚೂರುಗಳನ್ನು(Captured Junk) ಹಿಡಿದು ಯಾವುದೇ ರೀತಿಯಲ್ಲಿ ಹಾನಿಯಾಗದಂತೆ (burn)ಉರಿಸುವುದು. ಅಥವಾ ಇದೇ ರೀತಿಯಲ್ಲೆ ಬಲೂನುಗಳನ್ನು ಬಳಸಿ ಅವಶೇಷಗಳನ್ನು ಭೂವಾತಾವರಣಕ್ಕೆ ತಂದು ಹಾನಿಯಾಗದಂತೆ ಉರಿಸುವುದು. ಭೂಮಿಯಿಂದ(laser Burn) ಲೇಸರ ಕಿರಣಗಳನ್ನು ಬಿಟ್ಟು ಅವಶೇಷಗಳನ್ನು ಸುರಕ್ಷಿತ ಕಕ್ಷೆಗೆ ಅಥವಾ ಭೂವಾತಾವರಣಕ್ಕೆ ಎಳೆದು ತರುವುದು ಎಂದು ಉಪಾಯ ಮಾಡಲಾಗಿದೆ.