ಎಲ್ಲರಿಗೂ ಮುಂಜಾನೆಯ ಶುಭಾಶಯಗಳು..
Good Habits:(ನ.16):ಪ್ರತಿದಿನ ಮುಂಜಾನೆ ಏಳುವಾಗ ಕೆಲವೊಂದು ತಪ್ಪು ಕೆಲಸಗಳು ಗೊತ್ತಿಲ್ಲದೆ ಅಥವಾ ಗೊತ್ತೋ ಮಾಡುವುದು ಸಹಜ. ಅಂತಹ ತಪ್ಪು ಕೆಲಸಗಳು ಯಾವುದು? ಹಾಗಾದರೆ, ಯಾವ ಕೆಲಸಗಳನ್ನು ಮಾಡಬೇಕು?ಎನ್ನುವುದಾದರೆ, ಈ ಲೇಖನವನ್ನು ಪೂರ್ತಿ ಓದಿ..
ಬೇಗ ಏಳುವುದು:
ಈಗಂತೂ,ಕೆಲವರು ಆಫೀಸಿನ ಕೆಲಸವನ್ನು ಬಿಟ್ಟು ಬಿಡದೇ ಮನೆಯಲ್ಲೂ ಮಾಡುತ್ತಾರೆ. ರಾತ್ರಿಯಿಡಿ ಕೆಲಸ ಮಾಡಿ ಬೆಳಗ್ಗೆ ಏಳುವುದು ತುಂಬಾ ಕಷ್ಟ.
ಹಾಗಂತ ಕೆಲಸ ಮಾಡಬೇಡಿ ಅಂತ ಅಲ್ಲ.. ಮಿತಿಯಲ್ಲಿ ಕೆಲಸ ಮಾಡಿ, ಬೇಗ ಮಲಗುವುದು ರೂಢಿ ಮಾಡಿಕೊಳ್ಳಿ.ಹಾಗೆಯೇ ಬೇಗ ಏಳಲು ಅಭ್ಯಾಸ ಆಗುತ್ತದೆ.

ಸೂರ್ಯನ ಕಿರಣಗಳಿಗೆ ಮೈಯೊಡ್ಡಿ:
ಎಲ್ಲರಿಗೂ ಗೊತ್ತಿರುವ ಹಾಗೇ,ಸೂರ್ಯನ ಕಿರಣಗಳಿಂದ ವಿಟಮಿನ್ ಡಿ ಸಿಗುತ್ತದೆ ಎನ್ನುತ್ತಾರೆ. ಹೌದು, ಬೆಳಗೆದ್ದು ಸೂರ್ಯನ ಕಿರಣಗಳ ಮುಂದೆ ನಿಂತರೆ ಅಥವಾ ಆ ಸಮಯದಲ್ಲಿ ವ್ಯಾಯಾಮ ಮಾಡಿದರೆ ಖಂಡಿತ ವಿಟಮಿನ್ ಡಿ ಅಂಶ ನಿಮ್ಮ ಚರ್ಮದಿಂದ ಒಳ ಸೇರುತ್ತದೆ.

ಒಂದು ಲೋಟ ಬಿಸಿನೀರು:
ಪ್ರತಿದಿನ, ನಿತ್ಯಕರ್ಮಗಳನ್ನು ಮುಗಿಸಿ, ಖಾಲಿ ಹೊಟ್ಟೆಗೆ ಬಿಸಿ ನೀರಿನ ಸೇವನೆ ಮಾಡಿ. ಖಾಲಿ ಹೊಟ್ಟೆಗೆ, ತಿಂಡಿ ಕಾಫಿ ಸೇವನೆಯಿಂದ ಗ್ಯಾಸ್ಟ್ರಿಕ್ ಸಮಸ್ಯೆ ಉಲ್ಬಣಗೊಳ್ಳುತ್ತದೆ.
ಹಾಗಾಗಿ ಒಂದು ಲೋಟ ಬಿಸಿ ನೀರಿನಿಂದ ನಿಮ್ಮ ಬೆಳಗ್ಗೆಯನ್ನು ಪ್ರಾರಂಭ ಮಾಡಿ.

10 ರಿಂದ 20 ನಿಮಿಷ ವ್ಯಾಯಾಮ:
ಪ್ರತಿದಿನ ಸಾಧ್ಯವಾದರೆ ಅಥವಾ ವಾರಕ್ಕೆ ಮೂರು ದಿನವಾದರೂ ವ್ಯಾಯಾಮ, ವಾಕಿಂಗ್ ಮಾಡಿ.
ದೇಹ ಹಗುರವಾಗಿ, ನವ ಚೈತನ್ಯ ಮೂಡುತ್ತದೆ.

ಸರಿಯಾದ ಸಮಯಕ್ಕೆ ಆಹಾರ:
ಆಹಾರ ಸೇವಿಸುವುದು ಮೊದಲು ಸ್ವಲ್ಪ ನೀರನ್ನು ಕುಡಿದು, ನಂತರ ತಿಂಡಿ ತಿನ್ನುವುದು ಒಳ್ಳೆಯದು. ಬೆಳಗ್ಗಿನ ಆಹಾರ ದೇಹಕ್ಕೆ ಅವಶ್ಯಕ. ಹಾಗೆಯೇ ಪ್ರತಿದಿನ ಸರಿಯಾದ ಸಮಯಕ್ಕೆ ಸರಿಯಾಗಿ ತಿಂಡಿ ತಿನ್ನುವುದು ಒಳ್ಳೆಯದು.
ಆಗಾಗ ಮಲಗುವ ಅಭ್ಯಾಸ ಬೇಡ:
ತಿಂಡಿ ತಿಂದು ಮಲಗುವುದು, ಊಟಾ ಮಾಡಿ ಮಲಗುವುದು, ಸಂಜೆ ಮಲಗುವ ಅಭ್ಯಾಸ ಅಷ್ಟು ಒಳ್ಳೆಯದಲ್ಲ.ಸೋಮಾರಿ ತನದ ಜೊತೆ, ಬೊಜ್ಜು ಉಚಿತವಾಗಿ ಬರುತ್ತದೆ.

ದಿನಕ್ಕೆ ಒಂದು ಬಾರಿ ಚಹಾ ಅಥವಾ ಕಾಫಿ
ದಿನಕ್ಕೆ ಒಂದು ಬಾರಿ ಮಾತ್ರ ಚಹಾ ಅಥವಾ ಕಾಫಿ ಸೇವನೆ ಮಾಡಿ. ಸಂಜೆಯೂ ಕುಡಿಯಬೇಕು ಎನ್ನುವವರು ಕಷಾಯ, ಹಾಲು, ಗ್ರೀನ್ ಟೀ ಕುಡಿಯುವುದು ಉತ್ತಮ.
ಇಷ್ಟೆಲ್ಲಾ ಅಭ್ಯಾಸಗಳು ಮಾಡುವುದು ಆರೋಗ್ಯಕ್ಕಾಗಿ, ಆರೋಗ್ಯವೇ ಭಾಗ್ಯ ಅಲ್ಲವೇ…