ಬೆಂಗಳೂರು: (ನ16) Puneeth Namana : ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ನಡೆಯುತ್ತಿರುವ ‘Puneeth Namana’ ಪುನೀತ್ ನಮನ ಕಾರ್ಯಕ್ರಮದಲ್ಲಿ. ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ‘Basavaraj Bommai’ ಅವರು ಪುನೀತ್ ರಾಜಕುಮಾರ್ ಅವರಿಗೆ ಮರಣೋತ್ತರವಾಗಿ( Karnataka Ratna)‘ಕರ್ನಾಟಕ ರತ್ನ’ ಪ್ರಶಸ್ತಿ ಘೋಷಣೆ ಮಾಡಿದರು.
ಈ ವೇಳೆ ಮುಖ್ಯಮಂತ್ರಿ ಬಸವರಾಜು ಮಾತನಾಡಿ, ರಾಜಕುಮಾರ್ ಅವರ ಡಾ. ರಾಜಕುಮಾರ್ ಅವರ ಸ್ಮಾರಕದಂತೆ ಪುನೀತ್ ರಾಜಕುಮಾರ್ ಅವರ (memorial) ಸ್ಮಾರಕವನ್ನು ನಿರ್ಮಾಣ ಮಾಡುವುದಾಗಿ ಹೇಳಿದರು.
ಪುನೀತ್ ರಾಜಕುಮಾರ್ ಅವರು ನಿಧನರಾದ ದಿನದಂದು ಆ ಸುದ್ದಿ ಕೇಳಿ ನಾನು ಶಾಕ್ ಆಗಿದ್ದೆ. ಅವರ ಸಾವು ಅಕಾಲಿಕವಾಗಿದೆ. ಮುತ್ತಾರಾಜನ ಮುತ್ತು ದೈಹಿಕವಾಗಿ ನಮ್ಮ ಜೊತೆಗೆ ಇಲ್ಲ. ಅವರ ಸಾಧನೆಯ ಮೂಲಕ ನಮ್ಮ ಜೊತೆಗೆ ಇದ್ದಾರೆ. ಮುಖ್ಯಮಂತ್ರಿಯವರು ಘೋಷಣೆ ಮಾಡುತ್ತಿದ್ದಂತೆ, ಕಾರ್ಯಕ್ರಮದಲ್ಲಿ ನೆರೆದಿದ್ದ ಗಣ್ಯರು ಎದ್ದುನಿಂತು ಚಪ್ಪಾಳೆಯ ಸುರಿಮಳೆಗೈದರು.

ಅಪ್ಪುವಿನ ಜೀವನ ಸಾಧನೆಯ ಸಾಕ್ಷ್ಯಚಿತ್ರವನ್ನು ಬಿಡುಗಡೆ ಮಾಡಲಾಯಿತು ನಟ ಸುದೀಪ್ ( Actor Sudeep ) ಧ್ವನಿಯಲ್ಲಿ ಮೂಡಿಬಂದ ಸಾಕ್ಷ್ಯಚಿತ್ರದ ( Documentary) ನಂತರ ಕ್ಯಾಂಡಲ್ ಹಚ್ಚಿ ಅಗಲಿದ ರಾಜಕುಮಾರನಿಗೆ ಗೀತ ನಮನವನ್ನು ಸಲ್ಲಿಸಲಾಯಿತು. ಪುನೀತ್ ಅವರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಪತ್ನಿ ಅಶ್ವಿನಿ ಹಾಗೂ ಪುನೀತ್ ರಾಜ್‌ಕುಮಾರ್ ಅವರನ್ನು ನೆನೆದು ಕಣ್ಣೀರಿಟ್ಟರು.
ಹೃದಯಾಘಾತದಿಂದ ನಿಧನರಾಗಿದ್ದ ಪುನೀತ್ ರಾಜಕುಮಾರ್ ಅವರಿಗೆ (Film Industry)ಚಿತ್ರರಂಗದ ವತಿಯಿಂದ ಪುನೀತ್ ನಮನ ಕಾರ್ಯಕ್ರಮದ ಮೂಲಕ ಗೌರವ ಸಲ್ಲಿಸಲಾಯಿತು. ಅಭಿಮಾನಿಗಳ ಪ್ರೀತಿಯ ಅಪ್ಪುವಿಗೆ ಚಿತ್ರರಂಗದ ವತಿಯಿಂದ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.

ಸಾಹಿತಿ ನಾಗೇಂದ್ರ ಪ್ರಸಾದ್ ಅವರು ರಚನೆ ಮಾಡಿದ ಗೀತೆಯ ಮೂಲಕ (Candle Light)ಮೇಣದ ಬತ್ತಿ ಹಚ್ಚಿ ಪುನೀತ್ ರಾಜಕುಮಾರ್ ಅವರಿಗೆ ದೀಪ ನಮನ ಸಲ್ಲಿಸಿ, ಒಂದು ನಿಮಿಷಗಳ ಮೌನಾಚರಣೆ ಮಾಡಿ, ಪುನೀತ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ನಡೆಯುತ್ತಿರುವ ಪುನೀತ್ ನಮನ ಕಾರ್ಯಕ್ರಮದಲ್ಲಿ, ಪುನೀತ್ ರಾಜಕುಮಾರ್ ಪತ್ನಿ ಅಶ್ವಿನಿ, ಮಗಳು ವಂದಿತ, ಶಿವರಾಜ್ ಕುಮಾರ್, ಗೀತಾ ಶಿವರಾಜ್ ಕುಮಾರ್, ರಾಘವೇಂದ್ರ ರಾಜಕುಮಾರ್ , ವಿನಯ ರಾಜಕುಮಾರ್ ಸೇರಿದಂತೆ (Family members} ಡಾ ರಾಜ್. ಕುಟುಂಬ ಸದಸ್ಯರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಸಚಿವ ಆರ್ ಅಶೋಕ್, ಪಕ್ಷ ನಾಯಕ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸೇರಿದಂತೆ (politicians)ರಾಜಕೀಯ ನಾಯಕರು ಹಾಗೂ ಕನ್ನಡ ಹಾಗೂ ತೆಲುಗು (Tollywood)ಚಿತ್ರರಂಗದವರು ಭಾಗವಹಿಸಿದ್ದಾರೆ.