ಬೆಂಗಳೂರು: ಮೇಲುಜಾತಿ ಹಾಗೂ ಕೀಳುಜಾತಿ, ಜಾತಿತಾರತಮ್ಯ, ಜಾತಿ ಪಿಡುಗು ಕುರಿತು ಮಾತನಾಡಿ ವಿವಾದಕ್ಕೀಡಾದ ನಾದಬ್ರಹ್ಮ ಹಂಸಲೇಖ (Hamsalekha) ಅವರು ವಿಡಿಯೋ (Video) ಮೂಖಾಂತರ ಕ್ಷಮೆ ಕೇಳಿದ್ದಾರೆ.
ಇತ್ತಿಚಿಗೆ ಮೈಸೂರಿನಲ್ಲಿ ನಡೆದಿದ್ದ ಪ್ರಶಸ್ತಿ ಪುರಸ್ಕಾರದ ಸಭೆಯಲ್ಲಿ ಹಂಸಲೇಖ (Hamsalekha) ಅವರು, ದಲಿತರ ಮನೆಗೆ ಬಲಿತರು ಹೋಗುವುದು ಅದೇನು ದೊಡ್ಡ ವಿಷಯವೇ..? ದಲಿತರನ್ನು ಬಲಿತರು ತಮ್ಮ ಮನೆಗಳಿಗೆ ಕರೆದುಕೊಂಡು ಹೋಗಬೇಕು. ಅವರ ಮನೆಯಲ್ಲಿ ಊಟ ಹಾಕಬೇಕು, ದಲಿತರ ಮುಟ್ಟಿದ ಲೋಟಗಳನ್ನು ನಾವು ತೊಳೆಯುತ್ತೀವಿ ಎಂದು ಬಲಿತರು ಹೇಳುಬೇಕು ಎಂಬ ಹೇಳಿಕೆಯನ್ನು ನೀಡುವಾಗ ಪೇಜಾವರ ಶ್ರೀಗಳ (Pejawar Swamiji )ಬಗ್ಗೆ ಪ್ರಸ್ತಾಪ ಮಾಡಿದ್ದರು. ಇದನ್ನೂ ಓದಿ:kavya Gowda Marriage; ಹಸೆಮಣೆ ಏರಲು ಸಜ್ಜಾಗಿದ್ದಾರೆ ರಾಧಾ ಮಿಸ್ ಖ್ಯಾತಿಯ ನಟಿ ಕಾವ್ಯ ಗೌಡ

ದಲಿತರ ಮನೆಯಲ್ಲಿ ಪೇಜಾವರ ಶ್ರೀಗಳು (Pejawar Swamiji ) ಕೋಳಿ ತಿನ್ನುತ್ತಾರಾ? ಲಿವರ್ ಕೊಟ್ಟರೆ ತಿನ್ನುತ್ತಾರಾ ಎಂದು ಕೇಳಿದ್ದರು. ಅಲ್ಲದೆ, ಕುಮಾರಸ್ವಾಮಿ ಅವರ ಗ್ರಾಮ ವಾಸ್ತವ್ಯ ಕುರಿತು ಕೂಡ ಪ್ರಸ್ತಾಪಿಸಿದ್ದರು. ‘ಬಿಳಿಗಿರಿ ರಂಗಯ್ಯ ಸೋಲಿಗರ ಮನೆಯ ಹೆಣ್ಣಿನೊಂದಿಗೆ ರಮಿಸಿದರೆ, ಅದರಲ್ಲಿ ಏನ್ ದೊಡ್ಡ ವಿಷ್ಯ ಇದೆ? ಅದೇ ಸೋಲಿಗರ ಹೆಣ್ಣು ಮಗಳನ್ನು ಕರೆದುಕೊಂಡು ಹೋಗಿ ತನ್ನ ದೇವಾಲಯದಲ್ಲಿ ಇಟ್ಟು ಗೌರವಿಸಿದ್ದರೆ, ಅದು ಬಿಳಿಗಿರಿ ರಂಗಯ್ಯನ ತಾಕತ್ತು. ಸೂರ್ಯ ಉದಯಿಸುವುದಕ್ಕಿಂತ ಮುಂಚೆ ಸೋಲಿಗರ ಮನೆಗೆ ಬಂದು ಆ ಹೆಣ್ಣು ಮಗಳೊಂದಿಗೆ ಬಿಳಿಗಿರಿ ರಂಗಯ್ಯ ಸಂಸಾರ ನಡೆಸಿ ಬೆಳಕು ಹರಿಯುವುದರೊಳಗೆ ಹೋಗಿ ಕಲ್ಲಾಗುತ್ತಾನಂತೆ! ಅದೇನು ದೊಡ್ಡ ವಿಷಯ, ಅದೊಂದು ನಾಟಕ, ಬೂಟಾಟಿಕೆ ಎಂದಿದ್ದರು.
ದಲಿತರ ಬಗೆಗಿನ ಅಸ್ಪೃಶ್ಯತೆ ಮತ್ತು ಆಹಾರ ಪದ್ಧತಿ ಬಗೆಗಿನ ಈ ಹೇಳಿಕೆ ವಿವಾದಕ್ಕೆ ಕಾರಣವಾಗುತ್ತಲೇ ಹಂಸಲೇಖ (Hamsalekha) ಅವರು ವಿಡಿಯೊ ಮೂಲಕ ಜನತೆಯ ಕ್ಷಮೆಕೋರಿದ್ದಾರೆ.
ಮೊದಲಿಗೆ ಕ್ಷಮೆ ಇರಲಿ, ಎರಡನೆಯದಾಗಿಯೂ ಕ್ಷಮೆ ಇರಲಿ ಎಂದು ಮಾತು ಆರಂಭಿಸಿದ ಹಂಸಲೇಖ (Hamsalekha) , ನನ್ನ ಮಾತು ಪತ್ನಿಗೇ ಹಿಡಿಸಲಿಲ್ಲ, ಆಕೆಯ ಬಳಿಯೂ ಕ್ಷಮೆ ಕೋರಿದ್ದೇನೆ ಎಂದು ಹೇಳಿದ್ದಾರೆ. ಹಂಸಲೇಖ ಅವರ ಹೇಳಿಕೆಗೆ ಸಾಮಾಜಿಕ ತಾಣದಲ್ಲಿ ಟ್ರೋಲ್‌ಗೆ ಗುರಿಯಾಗಿತ್ತು. ಅಲ್ಲದೆ, ಗೂಗಲ್‌ನಲ್ಲಿ ಹಂಸಲೇಖ (Hamsalekha) ಅವರ ಜಾತಿ ಯಾವುದು ಎಂದು ಅತಿಹೆಚ್ಚು ಸರ್ಚ್ ಆಗಿದ್ದು, ನೆಟ್ಟಿಗರು ಪರ-ವಿರೋಧದ ಚರ್ಚೆಯಲ್ಲಿ ತೊಡಗಿದ್ದಾರೆ.