ಬೆಂಗಳೂರು (ನ೧೫): ರಾಧಾ ಮಿಸ್ ಖ್ಯಾತಿಯ ಕಿರುತೆರೆ ನಟಿ ಕಾವ್ಯ ಗೌಡ (kavya Gowda) ಹಸೆಮಣೆ ಏರಲು ಸಜ್ಜಾಗಿದ್ದಾರೆ. ಕಾವ್ಯ ಗೌಡ (kavya Gowda) ಅವರ ಎಂಗೇಜ್ಮೆಂಟ್ (engagement) ಫೋಟೋಗಳು ಸಖತ್ ಸುದ್ದಿಯಾಗಿದ್ವು. ಇದೀಗ ಮದುವೆ ದಿನಾಂಕ ನಿಗದಿಯಾಗಿದ್ದು, ಕಾವ್ಯ ಗೌಡ (kavya Gowda) ತಮ್ಮ ಸ್ನೇಹಿತರ ಜೊತೆ ಬ್ಯಾಚುಲರ್ ಪಾರ್ಟಿ ಮಾಡಿಕೊಂಡಿರುವ ಫೋಟೋಗಳು ವೈರಲ್ ಆಗುತ್ತಿವೆ.
ಕಾವ್ಯ ಕನ್ನಡದ ರಾಧಾರಮಣ, ಗಾಂಧಾರಿ ಧಾರಾವಾಹಿಯಲ್ಲಿ ನಟಿಸಿ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ.

ಕಾವ್ಯ ಅವರು ಸೋಮಶೇಖರ್ (Somasheskar) ಎಂಬ ಬೆಂಗಳೂರಿನ ಉದ್ಯಮಿಯನ್ನು ವರಿಸುತ್ತಿದ್ದಾರೆ. ನಿಶ್ಚಿತಾರ್ಥ ಆದ ಕೂಡಲೇ ಈ ಜೋಡಿಯು ದುಬೈಗೆ ಹಾರಿದ್ದರು.
ಕಾವ್ಯ ಗೌಡ (kavya Gowda) ಹಾಗೂ ಸೋಮಶೇಖರ್ (Somasheskar) ಮದುವೆ ಹಿಂದೆಯೇ ನಿಗದಿಯಾಗಿತ್ತು. ಆದರೆ ಕೊರೋನಾ (Corona )ಕಾರಣದಿಂದಾಗಿ ಕಾವ್ಯ ಗೌಡ ಅವರ ಮದುವೆ ಮುಂದೂಡಲಾಗಿತ್ತು. ಈಗ ಮತ್ತೆ ಇವರ ಮದುವೆ ದಿನಾಂಕ ಫಿಕ್ಸ್ ಆಗಿದೆ. ನವೆಂಬರ್ 29ರಂದು ಬೆಂಗಳೂರಿನ ಜೆ ಡಬ್ಲ್ಯು ಮ್ಯಾರಿಯೇಟ್‌ನಲ್ಲಿ (j w marriott ) ಸಂಗೀತ್, (Sangeet) ಮೆಹೆಂದಿ (mehendi) ನಡೆಯಲಿದೆ. ಡಿಸೆಂಬರ್ 1ರಂದು ಆರತಕ್ಷತೆ (reception), ಡಿಸೆಂಬರ್ 2ರಂದು ತಾಜ್ ವೆಸ್ಟೆಂಡ್‌ನಲ್ಲಿ(taj west end, bengaluru) ಮದುವೆ ನಡೆಯಲಿದೆ.
Kavya Gowda Kavya Gowda
ಬ್ಯಾಚುಲರ್ ಪಾರ್ಟಿಯನ್ನು ಸೋಮಶೇಖರ್ (Somasheskar) ಹಾಗೂ ಕಾವ್ಯ ಅವರ ಅಕ್ಕ ಭವ್ಯ ಆಯೋಜಿಸಿದ್ದರಂತೆ. ಇನ್ನು ಮದುವೆಗೆ ಬಂದ ಅತಿಥಿಗಳಿಗೆ ಗಿಡ ಕೊಡುವ ಪ್ಲ್ಯಾನ್ ಇದೆಯಂತೆ. ಕಾವ್ಯ ಅಕ್ಕ ಭವ್ಯಾ ಗೌಡ ಅವರ ಸ್ಟುಡಿಯೋ ಇದ್ದು, ಅವರ ಡ್ರೆಸ್, ಸೀರೆ ಜೊತೆಗೆ ಡಿಸೈನರ್ ಡ್ರೆಸ್‌ಗಳನ್ನು ಹಾಕಲಿದ್ದಾರೆ ಕಾವ್ಯ.
ಇನ್ನು, ಕಾವ್ಯ (kavya Gowda) ಕಳೆದ 2 ವರ್ಷಗಳಿಂದ ಧಾರಾವಾಹಿ, ಸಿನಿಮಾ ಬಂದರೂ ನಟಿಸಿಲ್ಲ. ನಟನೆ ಬಿಟ್ಟು, ಆಭರಣ ಡಿಸೈನ್ ಕಲಿಯುತ್ತಿದ್ದಾರೆ ನಟಿ ಕಾವ್ಯ ಗೌಡ.