Children’s Day Special(ನ.14): ದೇಶದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು (Jawaharlal Neharu)ಅವರ ಜನ್ಮದಿನವಾಗಿ ಇಂದು (Baal Diwas)ಬಾಲ ದಿವಸ್ ಅಥವಾ (Children’s Day)ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತದೆ.
ಶಾಲೆಯಲ್ಲಿ ಮಕ್ಕಳ ದಿನಾಚರಣೆ ಬಂದರೆ ಸಾಕು ಹಬ್ಬ! ಶಾಲೆಯಲ್ಲಿ ಮಕ್ಕಳ ದಿನಾಚರಣೆ ಕುರಿತು ಮಾಡುವ ಭಾಷಣ, ನೃತ್ಯ ಹಾಡು, ಆಟೋಟಗಳನ್ನು ಆಡುತ್ತಿದ್ದ ನೆನಪು ಎಂದಿಗೂ ಕಾಡುತ್ತದೆ.
1951 ರಲ್ಲಿ ವಿಶ್ವಸಂಸ್ಥೆಯ ಒಂದು ಯೋಜನೆ ಅಡಿಯಲ್ಲಿ(England) ಇಂಗ್ಲೆಂಡ್ನ ಮಕ್ಕಳ ಕಲ್ಯಾಣಕ್ಕಾಗಿ ವಿ.ಎಂ ಕುಲಕರ್ಣಿ ಎನ್ನುವವರು ಶ್ರಮಿಸುತ್ತಿದ್ದರು. ಆ ದಿನಗಳಲ್ಲಿ ಬಡ ಮಕ್ಕಳ (Development)ಅಭಿವೃದ್ಧಿಗಾಗಿ ನಿಧಿ ಸಂಗ್ರಹಕ್ಕಾಗಿ ರಾಣಿ ಎಲಿಜಬೆತ್ 2 ಅವರ ಜನ್ಮದಿನವನ್ನು ತ್ವಚ ದಿನಾಚರಣೆಯನ್ನಾಗಿ ಆಚರಿಸುತ್ತಾ ಹಣ ಸಂಗ್ರಹ ಲಾಗುತ್ತಿತ್ತು.

ಇದೇ ಸಂದರ್ಭದಲ್ಲಿ ಕುಲಕರ್ಣಿ ಅವರ ಮನಸ್ಸು ಭಾರತೀಯರ ಮಕ್ಕಳ ಸ್ಥಿತಿ ಕಡೆಗೆ ವಾಲಿತು. ಭಾರತದಲ್ಲಿಯೂ ಮಕ್ಕಳಿಗಾಗಿ ಧನ ಸಂಗ್ರಹಿಸಿ(Special Program) ವಿಶೇಷ ಕಾರ್ಯಕ್ರಮಗಳನ್ನು ನಡೆಸಬೇಕು ಎಂದು ವಿಶ್ವಸಂಸ್ಥೆಯಲ್ಲಿ ಮನವಿ ಸಲ್ಲಿಸಿದರು.
ಭಾರತದ ಮೊದಲ ಪ್ರಧಾನ ಮಂತ್ರಿಯಾಗಿದ್ದ ನೆಹರು ಅವರ(birthday) ಜನ್ಮದಿನದ ಶುಭಾಶಯ ದಿನ ಬೇರೊಂದಿಲ್ಲ ಎಂದು ಅಭಿಪ್ರಾಯವನ್ನು ಮುಂದಿಟ್ಟರು.

Tomorrow is Yours
ಮಕ್ಕಳೊಂದಿಗೆ ಮಗುವಾಗುತ್ತಿದ್ದ ನೆಹರು ಅವರು ಅತ್ಯಂತ ಸಂತೋಷದಿಂದ ತನ್ನ ಜನ್ಮದಿನವನ್ನು ಮಕ್ಕಳ ದಿನಾಚರಣೆಯನ್ನು ಆಚರಿಸಲು ಒಪ್ಪಿಕೊಂಡರು. ಇದೇ ರೀತಿ 1951ರಲ್ಲಿ ನವಂಬರ್ 14 ರಂದು ಭಾರತದಲ್ಲಿ(Children’s Day) ಮಕ್ಕಳ ದಿನಾಚರಣೆ ಆರಂಭವಾಯಿತು
1889 ರಲ್ಲಿ ಜನಿಸಿದ ಜವಾಹರಲಾಲ್ ನೆಹರು ಅವರನ್ನು ಮಕ್ಕಳು ಪ್ರೀತಿಯಿಂದ (Chacha) ಚಾಚಾ ಎಂದು ಕರೆಯುತ್ತಿದ್ದರು.
ಮಕ್ಕಳ ಮೇಲಿರುವ ಅಪಾರ ಪ್ರೀತಿಯಿಂದ ನೆಹರು ಅವರು 1955 ರಲ್ಲಿ (Children’s Film Society of India )ಚಿಲ್ಡ್ರನ್ಸ್ ಫಿಲಂ ಸೊಸೈಟಿ ಆಫ್ ಇಂಡಿಯಾವನ್ನು ಮಕ್ಕಳಿಗಾಗಿಯೇ ಸ್ಥಾಪಿಸಿದರು. ಜವಾಹರಲಾಲ್ ನೆಹರು ಯಾವಾಗಲೂ ಮಕ್ಕಳಿಗೆ “ನಾಳೆ ನಿಮ್ಮದು” ಎಂದು ಹೇಳುತ್ತಿದ್ದರು.
ಪ್ರತಿ ದಿನ ಮಕ್ಕಳ ದಿನಾಚರಣೆಯಾಗಬೇಕು
ಮಕ್ಕಳ ಹಕ್ಕುಗಳು(Children’s Rights) ಹಾಗೂ ಆರೈಕೆ ಮತ್ತು (Education)ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸುವುದು ಮಕ್ಕಳ ದಿನಾಚರಣೆಯ ಉದ್ದೇಶವಾಗಿದೆ. ವಿಶ್ವಸಂಸ್ಥೆಯು ಸಾರ್ವತ್ರಿಕ ಮಕ್ಕಳ ದಿನ ಎಂದು ಘೋಷಿಸಿತ್ತು ಹಾಗಾಗಿ ಭಾರತದಲ್ಲಿ ಮೊದಲು ನವೆಂಬರ್ 20ರಂದು ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತಿತ್ತು.
ಪೋಷಕರು, ಶಿಕ್ಷಕರು ಮಕ್ಕಳ ಪಾಲನೆ ಹಾಗೂ ರಕ್ಷಣೆ ಮಾಡಬೇಕು. ಅಲ್ಲದೆ ಶಿಕ್ಷಣ ಮಕ್ಕಳಿಗೆ ಹೊರೆಯಾಗದೆ, ಭವಿಷ್ಯಕ್ಕೆ ಆಸರೆಯಾಗಬೇಕು. ಮಕ್ಕಳಿಗೆ ಶಿಕ್ಷೆ ಕೊಡದೆ, ಮಕ್ಕಳಲ್ಲಿ ಮಕ್ಕಳಾಗಿ ಅವರ ಕನಸು, ಅಸೆಗಳಿಗೆ ಬೆಲೆ ಕೊಟ್ಟು ಪ್ರೀತಿಯಿಂದ ನೋಡಿಕೊಳ್ಳೋಣ.
ಎಲ್ಲ ಮುದ್ದು ಮಕ್ಕಳಿಗೂ ಮಕ್ಕಳ ದಿನಾಚರಣೆಯ ಶುಭಾಶಯಗಳು.