World Diabetes Day: (ನ.14) ಇಂದು ವಿಶ್ವ ಮಧುಮೇಹ ದಿನ. ಭಾರತ ದೇಶದಲ್ಲಿ ಸುಮಾರು 63 ಮಿಲಿಯನ್ ಜನರು ಮಧುಮೇಹ ಕಾಯಿಲೆಯಿಂದ ಬಳಲುತ್ತಿದ್ದಾರೆ ಹಾಗೂ ಸಂಖ್ಯೆಯೂ ಹೆಚ್ಚುತ್ತಿದೆ ಎಂದು ಅಂತರಾಷ್ಟ್ರೀಯ ಮಧುಮೇಹ ಒಕ್ಕೂಟ (international diabetes federation) ವರದಿ ನೀಡಿದೆ.

ದೇಶದಲ್ಲಿ ಸುಮಾರು 77 ಮಿಲಿಯನ್ ಜನರಿಗೆ ಮಧುಮೇಹ ಪೂರ್ವ (Pre Diabetes) ಕಾಯಿಲೆ ಇದೆ ಇದರಲ್ಲಿ ರಕ್ತದಲ್ಲಿನ ಸಕ್ಕರೆಯ ಪ್ರಮಾಣವು ಸಾಮಾನ್ಯಕ್ಕಿಂತ ಹೆಚ್ಚಿರುತ್ತದೆ. ಈ ಹಂತದಲ್ಲಿ ಸರಿಯಾದ ಆರೋಗ್ಯ ಕ್ರಮಗಳನ್ನು ರೂಡಿಸಿಕೊಂಡರೆ ಮುಂದಕ್ಕೆ ಸಕ್ಕರೆ ಕಾಯಿಲೆ ಬರುವ ಕಷ್ಟಗಳನ್ನು ತಡೆಯಬಹುದು.
ಮಧುಮೇಹಿಗಳ ಸಂಖ್ಯೆಯ ಹೆಚ್ಚಾಗುತ್ತಿರುವುದರಿಂದ ನಮ್ಮ ದೇಶವನ್ನು (Diabetes Capital of the World )ಡಯಾಬಿಟಿಕ್ಸ್ ಕ್ಯಾಪಿಟಲ್ ಆಫ್ ದಿ ವರ್ಲ್ಡ್ ಎಂದು ಕರೆಯಲಾಗುತ್ತದೆ.
ಸರಿಯಾದ ಸಮಯಕ್ಕೆ ಪತ್ತೆಹಚ್ಚದಿದ್ದರೆ ಅಥವಾ ಸಕ್ಕರೆ ಕಾಯಿಲೆಯಿರುವವರು ನಿಯಂತ್ರಣದಲ್ಲಿಟ್ಟುಕೊಳ್ಳಲು ಇದ್ದಲ್ಲಿ ಅನೇಕ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ.
ಮೂತ್ರಪಿಂಡದ ವೈಫಲ್ಯ,(Heart Attack) ಹೃದಯಾಘಾತ ,ಪಾರ್ಶ್ವವಾಯು ನರಗಳ ತೊಂದರೆ ಕಣ್ಣಿನಲ್ಲಿ ರೆಟಿನಾಗೆ ತೊಂದರೆಯಾಗಿ ಕುರುಡುತನ ಸಾಧ್ಯತೆಯಿರುತ್ತದೆ.
ಸಕ್ಕರೆ ಕಾಯಿಲೆ ಇರುವವರಲ್ಲಿ ಅವರ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಅಗತ್ಯಕಿಂತ ಹೆಚ್ಚಾಗಿರುತ್ತದೆ. ಇನ್ಸುಲಿನ್ ಕೊರತೆಯಿಂದಾಗಿ ಅಥವಾ ಇನ್ಸುಲಿನ್ ಸರಿಯಾಗಿ ಕೆಲಸ ಮಾಡದೆ ಇರುವುದರಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾಗಬಹುದು.
ಸಕ್ಕರೆ ಕಾಯಿಲೆ ಬರುವುದಕ್ಕೆ ಪ್ರಮುಖ ಕಾರಣಗಳು:
- ದೇಹದ ತೂಕ ಹೆಚ್ಚಾಗಿರುವುದು.
- ಅಧಿಕ ಕ್ಯಾಲೋರಿ ಸಕ್ಕರೆ ಕೊಬ್ಬಿನಂಶ ಇರುವ ಆಹಾರ ಸೇವನೆ ಮಾಡುವುದು.
- ವ್ಯಾಯಾಮವಿಲ್ಲದೆ ಇರುವುದು.
- ಅಧಿಕ ಮಾನಸಿಕ ಒತ್ತಡ
- ವಂಶಪಾರಂಪರ್ಯವಾಗಿ ಬಂದಿರಬಹುದು.
- ನಿದ್ದೆಯ ಕೊರತೆ ಇತ್ಯಾದಿ ಪ್ರಮುಖ ಕಾರಣಗಳಿಂದ ಸಕ್ಕರೆ ಕಾಯಿಲೆ ಬರುವ ಸಾಧ್ಯತೆಗಳು ಇರುತ್ತದೆ.
ಮಧುಮೇಹ ಇರುವವರು ಏನು ಮಾಡಬೇಕು?
- ನಿಯಮಿತವಾದ ವಾಕಿಂಗ್ ಮಾಡಬೇಕು.
- ವೈದ್ಯರು ನೀಡಿರುವ ಮಾತ್ರೆಗಳು ಮತ್ತು ಆಹಾರ ಕ್ರಮವನ್ನು ಸರಿಯಾದ ಸಮಯದಲ್ಲಿ ತೆಗೆದುಕೊಳ್ಳಬೇಕು.
ಇನ್ಸುಲಿನ್ ತೆಗೆದುಕೊಳ್ಳುವ ಸರಿಯಾದ ವಿಧಾನವನ್ನು ಕಲಿತುಕೊಳ್ಳಬೇಕು. - ವೈದ್ಯರ ಸಲಹೆ ಮೇರೆಗೆ ಹೃದಯ ಕಣ್ಣು ಪಾದ ಕೊಲೆಸ್ಟ್ರಾಲ್ ಪ್ರಮಾಣ ಕಿಡ್ನಿ ರಕ್ತದಲ್ಲಿರುವ ಸಕ್ಕರೆ ಪ್ರಮಾಣದ ಪರೀಕ್ಷೆಗಳನ್ನು ಮಾಡಿಸಬೇಕು.
- ಗ್ಲುಕೋಮೀಟರ್ ಯಂತ್ರವನ್ನು ಬಳಸಿ ಮನೆಯಲ್ಲೇ ಸಕ್ಕರೆಯಂಶ ಪರೀಕ್ಷೆ ಮಾಡಿಕೊಳ್ಳಿ.
- ವಾಂತಿ ಹೊಟ್ಟೆನೋವು ಜ್ವರ ಉಸಿರಾಟ ತೊಂದರೆ ಅಥವಾ ಎದೆನೋವು ಲಕ್ಷಣಗಳು ಕಂಡುಬಂದಲ್ಲಿ ತಕ್ಷಣವೇ ಭೇಟಿಯಾಗಿ.
- ಸಕ್ಕರೆ ಕಾಯಿಲೆ ಇರುವವರು ಯಾವ ಆಹಾರವನ್ನು ಸೇವಿಸಬೇಕು?
ಕ್ಯಾಲರಿಗಳು ನಿಯಮಿತ ಹಾಗೂ ನಿಗದಿತ ಪ್ರಮಾಣದಲ್ಲಿ ಸೇವಿಸಿ. - ವೈದ್ಯರು ಮಧುಮೇಹಿಗಳಿಗೆ ಆಹಾರ ಕ್ರಮಗಳನ್ನು ನೀಡುತ್ತಾರೆ ಆ ರೀತಿಯ ಆಹಾರವನ್ನು ತೆಗೆದುಕೊಳ್ಳಿ.
- ಕೊಬ್ಬಿನಂಶವಿರುವ ಸಕ್ಕರೆ ಇರುವ ಪದಾರ್ಥಗಳನ್ನು ತ್ಯಜಿಸಿ.
- ಸರಿಯಾದ ಸಮಯಕ್ಕೆ ಆಹಾರಗಳನ್ನು ಸೇವಿಸಿ. ಸೊಪ್ಪು ತರಕಾರಿಯನ್ನು ಸೇವಿಸಿ.
- ಧೂಮಪಾನ ಮದ್ಯಪಾನದಿಂದ ದೂರವಿರಿ
- ನಾರಿನಾಂಶ ಪ್ರಮಾಣ ಹೆಚ್ಚಿರುವ ಆಹಾರಗಳನ್ನು ಅಧಿಕ ಪ್ರಮಾಣದಲ್ಲಿ ಸೇವಿಸಿ. ಇದರಿಂದ ಸಕ್ಕರೆ ಕಾಯಿಲೆಯನ್ನು ನಿಯಂತ್ರಿಸಬಹುದು ಹಾಗೂ ತೂಕ ಇಳಿಸಲು ಸಹಕಾರಿಯಾಗುತ್ತದೆ.
- ಕೆಲವರಿಗೆ ಎಲ್ಲಾ ತರಕಾರಿಗಳು ಸೂಕ್ತವಾಗುವುದಿಲ್ಲ. ಹಾಗಾಗಿ ವೈದ್ಯರ ಬಳಿ ಯಾವ ತರಕಾರಿ ತಿಂದರೆ ಒಳ್ಳೆಯದು ಎಂದು ತಿಳಿದುಕೊಳ್ಳಿ
- ಹಾಗಲಕಾಯಿ ರಸದಿಂದ ಸಕ್ಕರೆ ಕಾಯಿಲೆಯನ್ನು ನಿಯಂತ್ರಿಸಬಹುದು.
- ಜಂಕ್ ಫುಡ್, ಕರಿದ ಪದಾರ್ಥಗಳಿಂದ ದೂರವಿರಿ.
ಸಕ್ಕರೆ ಕಾಯಿಲೆ ಇರುವವರು ತಮ್ಮ ಆರೋಗ್ಯವನ್ನು ಯಾವಾಗಲೂ ನಿಯಂತ್ರಣದಲ್ಲಿಟ್ಟುಕೊಳ್ಳಬೇಕು ಇಲ್ಲದಿದ್ದಲ್ಲಿ ಅಪಾಯಕ್ಕೆ ಕಟ್ಟಿಟ್ಟಬುತ್ತಿಯಾಗುತ್ತದೆ.