Hindu Vs Hindutva:(ನ.14): ರಾಜಕಾರಣದಿಂದ ದೂರವಿರುವ ನಟಿ ರಮ್ಯಾ(Hindu V/s Hindutva) ಹಿಂದೂ ಹಾಗೂ ಹಿಂದುತ್ವ ಬಗ್ಗೆ ಮಾತನಾಡಿ ಚರ್ಚೆಯಲ್ಲಿದ್ದಾರೆ. ಸ್ಯಾಂಡಲ್ ವುಡ್ ನಟಿ ರಮ್ಯಾ, ಹಿಂದೂಧರ್ಮ ಹಾಗೂ ಹಿಂದುತ್ವ ನಡುವೆ (Hindu Vs Hindutva)ವ್ಯತ್ಯಾಸ ಸೃಷ್ಟಿಸಿ ತಮ್ಮ Instagram ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಹಿಂದೂ ಮತ್ತು ಹಿಂದುತ್ವದ ಅರ್ಥ ಬೇರೆ:
“ಹಿಂದೂ ಧರ್ಮ ಮತ್ತು ಹಿಂದುತ್ವ ಒಂದೇ ಅಲ್ಲ ಎಂದು ಪ್ರತಿಪಾದಿಸಿ ಚರ್ಚೆಗೆ ಕಾರಣರಾಗಿದ್ದಾರೆ. ಹಿಂದೂ ಧರ್ಮ ಎಂದರೆ (Love) ಪ್ರೀತಿಸುವುದು ಹಾಗೂ ಒಳಗೊಳ್ಳುವಿಕೆ.
ಹಿಂದುತ್ವ ಎಂದರೇ, ಸಂಪೂರ್ಣ(Politics) ರಾಜಕೀಯ. ನಿಜವಾದ (Real Hindu)ಹಿಂದೂಗಳಿಗೆ ಈ ವ್ಯತ್ಯಾಸ ತಿಳಿಯುತ್ತದೆ” ಎಂದು ಅವರು ಬರೆದಿದ್ದಾರೆ.
ಹಿಂದೂ ಧರ್ಮ ಮತ್ತು ಹಿಂದುತ್ವ ಒಂದೇ ಅಲ್ಲ. ಹಿಂದೂ ಧರ್ಮ(Religion) ರಾಜಕೀಯವಲ್ಲ, ಆದರೆ ಹಿಂದುತ್ವ ಪೂರ್ತಿ ರಾಜಕೀಯ. ಹಿಂದೂ ಧರ್ಮ ಎಂದರೆ ಒಳಗೊಳ್ಳುವಿಕೆ ಮತ್ತು ಎಲ್ಲರನ್ನು ಪ್ರೀತಿಸುವುದು. ಹಿಂದುತ್ವ ಇದಕ್ಕೆ ವಿರುದ್ಧವಾಗಿದೆ(Opposite) ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿ ಹೇಳಿದ್ದೇನು?
ಮಹರಾಷ್ಟ್ರದ ವಾರ್ಧದಲ್ಲಿ ನಡೆದ ಪಕ್ಷದ ಕಾರ್ಯಕರ್ತರ ನಾಲ್ಕು ದಿನಗಳ (Workshop)ಕಾರ್ಯಾಗಾರದಲ್ಲಿ ಮಾತನಾಡಿದ ಇತಿಚಿಗಷ್ಟೆ ಕಾಂಗ್ರೆಸ್ ನಾಯಕ (Rahul Gandhi) ರಾಹುಲ್ ಗಾಂಧಿ ಸಹ ಇದೇ ರೀತಿಯ ಹೇಳಿಕೆ ನೀಡಿದ್ದರು.
“ಹಿಂದೂ ಧರ್ಮವು (Sikh or Musalman)ಸಿಖ್ಖರನ್ನು ಅಥವಾ ಮುಸಲ್ಮಾನರನ್ನು ಹೊಡೆಯಿರಿ ಎಂದು ಹೇಳುತ್ತದೆಯೇ? ಹಿಂದುತ್ವ ಮತ್ತು ಹಿಂದೂ ಧರ್ಮ ಎಂಬುದು ಎರಡು (Different)ವಿಭಿನ್ನ ಪರಿಕಲ್ಪನೆಗಳು ಎಂದು ಹೇಳಿದ್ದರು.
ಹಿಂದುತ್ವ ಮತ್ತು ಹಿಂದೂ ಧರ್ಮದ ನಡುವೆ ವ್ಯತ್ಯಾಸವಿದೆ ಎಂದು ನಾವು ಹೇಳುತ್ತೇವೆ. ಇದು ಸರಳವಾದ ತರ್ಕ. ನೀವು ಹಿಂದೂ ಆಗಿದ್ದರೆ ನಿಮಗೆ (Hindutva)ಹಿಂದುತ್ವ ಏಕೆ ಬೇಕು? ಎರಡು ಒಂದೇ ಎಂದು ಯಾವ ಪುಸ್ತಕದಲ್ಲಿ ಬರೆಯಲಾಗಿದೆ? ನಾನು(Upanishad) ಉಪನಿಷತ್ತುಗಳನ್ನು ಓದಿದ್ದೇನೆ, ಎಲ್ಲಿಯೂ ಹಾಗೆ ಹೇಳಿಲ್ಲ. ಆದರೆ ಹಿಂದುತ್ವವು ಸಹಜವಾಗಿಯೇ ಏಕೆ (Hate)ದ್ವೇಷಿಸಲು ಕರೆ ಕೊಡುತ್ತದೆ? ಹಿಂದುತ್ವ ಎನ್ನುವ ಹೊಸ ಹೆಸರು ಏಕೆ ಬೇಕು?” ಎಂದು ಹೇಳಿಕೆ ನೀಡಿದರು.
ಇದೀಗ ಮತ್ತೆ, ನಟಿ ರಮ್ಯಾ ಅವರು ರಾಹುಲ್ ಗಾಂಧಿ ಅವರ ಹೇಳಿಕೆಯಂತೆ ಹೇಳಿದ್ದಾರೆ. ನಟಿ ರಮ್ಯಅವರು ನೀಡಿರುವ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ( Social media) ಕೆಲವರು ಬೆಂಬಲಿಸಿದರೆ(Support) ಇನ್ನೂ ಕೆಲವರು ಕಿಡಿ ಕಾರಿದ್ದಾರೆ.