ಬೆಂಗಳೂರು (ನ.14): Bit Coin Scam:ರಾಜ್ಯಾದ್ಯಂತ ಸದ್ದು ಮಾಡುತ್ತಿರುವ ಬಿಟ್ ಕಾಯಿನ್ ಪ್ರಕರಣದ ಕುರಿತು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಪ್ರಕಟಣೆ ಹೊರಡಿಸಿದ್ದಾರೆ.
ಅಂತರ್ರಾಷ್ಟ್ರೀಯ ಹಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಬಿಟ್ಕೊಯಿನ್ ಹಗರಣಕ್ಕೆ ಇತಿಶ್ರೀ ಹಾಡುವ ನಿಟ್ಟಿನಲ್ಲಿ ಒಂದು ವರ್ಷದಿಂದ ನಡೆದಿರುವ ತನಕ ವಿವರ ಒಳಗೊಂಡ 4 ಪುಟಗಳ ಪ್ರಕಟನೆಯನ್ನು ಬಿಡುಗಡೆ ಮಾಡಿದ್ದಾರೆ.
ಪ್ರಕಟಣೆಯಲ್ಲಿ ಏನಿದೆ?
ಶ್ರೀಕಿ ಖಾತೆಯಿಂದ ಯಾವುದೇ ಬಿಟ್-ಕಾಯಿನ್ ವರ್ಗಾವಣೆ ಆಗಿಲ್ಲ. ಯಾವುದೇ ಬಿಟ್-ಕಾಯಿನ್ ಕಳವು ಕೂಡ ಆಗಿಲ್ಲ. ಪ್ರಕರಣ ಬಹಿರಂಗವಾಗಿ ಒಂದು ವರ್ಷ ಕಳೆದ ನಂತರ ಈಗ ನಿರಾಧಾರ ಹಾಗೂ ಸತ್ಯಕ್ಕೆ ದೂರವಾದ ಅಪವಾದ ಮಾಡಲಾಗುತ್ತಿದೆ ಎಂದು ಪ್ರಕರಣದಲ್ಲಿ ಸ್ಪಷ್ಟಪಡಿಸಿದ್ದಾರೆ.
2020ರ ನವೆಂಬರ್ 4ರಂದು ಖಚಿತ ಮಾಹಿತಿ ಮೇರೆಗೆ ಡಾರ್ಕ್ ನೆಟ್ ನಲ್ಲಿ ಡ್ರಗ್ಸ್ ಖರೀದಿಸಿದ್ದ ಪ್ರಕರಣದಲ್ಲಿ ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ. 500 ಗ್ರಾಂ ಹೈಡ್ರೋ ಗಾಂಜಾ ಜಪ್ತಿ ಮಾಡಲಾಯಿತು. ಕೆಜಿ ನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದು, ಶ್ರೀಕಿ ಅನ್ನು ಸೇರಿ 10 ಮಂದಿ ಆರೋಪಿಗಳನ್ನು ಬಂಧಿಸ ಲಾಯಿತು.
ವಿಚಾರಣೆ ಸಂದರ್ಭದಲ್ಲಿ ಶ್ರೀಕಿ ತನಿಖಾಧಿಕಾರಿ ಮುಂದೆ ತನ್ನ ಕಥೆಯನ್ನು ಬಿಚ್ಚಿಟ್ಟಿದ್ದಾನೆ. ತಾನು ಕ್ರಿಪ್ತೋಕರೆನ್ಸಿ ವೆಬ್ಸೈಟ್ಗಳ ಹ್ಯಾಕಿಂಗ್ ನಲ್ಲಿ ಪಾತ್ರವಿರುವ ಬಗ್ಗೆ ಒಪ್ಪಿಕೊಂಡಿದ್ದ ಹಿನ್ನೆಲೆಯಲ್ಲಿ ಕಾಟನ್ ಪೇಟೆ ಥಾಣೆಯಲ್ಲಿ ಪ್ರತ್ಯೇಕ ಎಫ್ಐಆರ್ ದಾಖಲಿಸಲಾಗಿತ್ತು.

ಬಿಟ್ ಕಾಯಿನ್ ಖಾತೆ ತೆರೆಯಲು ಅನುಮತಿ ನೀಡಲಾಗಿತ್ತು
ವಾಸ್ತವದ ಸಂಗತಿಯೆಂದರೆ ಕ್ರಿಪ್ಟೋಕರೆನ್ಸಿ ಪ್ರಕರಣದ ತನಿಖೆಗಾಗಿ ಬಿಟ್ ಕಾಯಿನ್ ಖಾತೆ ತರಬೇಕಾದ ಅವಶ್ಯಕತೆ ಇತ್ತು. ಈ ಬಗ್ಗೆ ಸರ್ಕಾರದ ಜೊತೆ ಮಾಹಿತಿ ಹಂಚಿಕೊಂಡಾಗ 2020 ರ ಡಿಸೆಂಬರ್ ಎಂಟರಂದು ಬಿಟ್ ಕಾಯಿನ್ ಖಾತೆ ತೆರೆಯಲು ಸರ್ಕಾರ ಅನುಮತಿ ನೀಡಿತ್ತು. ಬಿಟ್ಕೊಯಿನ್ ಪತ್ತೆ ಹಾಗೂ ಜಪ್ತಿ ಪ್ರಕ್ರಿಯೆಯಲ್ಲಿ ಶ್ರೀಕಿ ಬಿಟ್ ಕಾಯಿನ್ ಬ್ಯಾಲೆಟ್ ತೋರಿಸಿದ್ದ. ಅದರಲ್ಲಿ 31.8 ಪತ್ತೆಯಾಗಿದೆ.
ಬಿಟ್ ಕಾಯಿನ್ ಗಳನ್ನು ಪೋಲಿಸ್ ವ್ಯಾಲೆಟ್ ವರ್ಗಾಯಿಸಲು ಕೋಟ್ಯಾಧಿಪತಿ ಪಡೆಯಲಾಯಿತು. ಶ್ರೀಕಿ ತೋರಿಸಿದ ವ್ಯಾಲೆಟ್ ತೆರೆದಾಗ ಬಿಟ್ ಕಾಯಿನ್ ಗಳು ಪತ್ತೆಯಾಗಿದ್ದವು. ಸೈಬರ್ ತಜ್ಞರನ್ನು ಕೇಳಿದಾಗ ರೀತಿಯ ವೈಯಕ್ತಿಕ ವ್ಯಾಲೆಟ್ ಅಲ್ಲ. ಬಿಟ್ಕೊಯಿನ್ ವಿನಿಮಯ ಕೇಂದ್ರಕ್ಕೆ ಸೇರಿದ್ದು ಎಂಬುದು ಸ್ಪಷ್ಟವಾಯಿತು. ಆದ್ದರಿಂದ ಖಾತೆಯಲ್ಲಿದ್ದ ಬಿಟ್ಕೊಯಿನ್ ವರ್ಗಾವಣೆ ಆಗಿಲ್ಲ ಈ ಮಾಹಿತಿ ದಾಖಲೆಗಳನ್ನು ಕೋರ್ಟಿಗೆ ಸಲ್ಲಿಸಲಾಗಿತ್ತು.
ವಕೀಲರಿಗೆ ಬಿತ್ತು ೫ ಸಾವಿರ ರೂ ದಂಡ:
ಜನವರಿ 11ರಂದು ಕೋರ್ಟ್ ಮುಂದೆ ಆರೋಪಿ ಶ್ರೀಕಿ ಹಾಜರುಪಡಿಸಿದಾಗ ನೀಡಿಲ್ಲ ಎಂದು ಹೇಳಿಕೆ ನೀಡಿದ್ದ. ವಕೀಲರು ಪೊಲೀಸ್ ಕಸ್ಟಡಿಯಲ್ಲಿ ಕಕ್ಷಿದಾರನಿಗೆ ಡ್ರೆಸ್ ನೀಡಲಾಗಿದೆ ಎಂದಿದ್ದರು. ವೈದ್ಯಕೀಯ ಪರೀಕ್ಷೆ ನಡೆಸುವಂತೆ ಸೂಚನೆ ನಡೆಯುತ್ತು ಕೋರ್ಟ್ ಸೂಚನೆ ಮೇರೆಗೆ ಬೌರಿಂಗ್ ಆಸ್ಪತ್ರೆಯಲ್ಲಿ ಶ್ರೀಕಿ ರಕ್ತ ಹಾಗೂ ಮೂತ್ರ ಪರೀಕ್ಷೆ ನಡೆಸಲಾಗಿತ್ತು. ವರದಿಯಲ್ಲಿ ಡ್ರಗ್ ಸೇವನೆ ಮಾಡಿಲ್ಲ ಎಂದು ಹೇಳಲಾಗಿತ್ತು. ಹಾಗಾಗಿ ಶ್ರೀಕಿ ವಕೀಲರಿಗೆ 5000 ರೂ ದಂಡ ವಿಧಿಸಲಾಗಿತ್ತು.
ಬಿಟ್ ಫಿನಿಕ್ಸ್ 14682 ಬಿಟ್ ಕಾಯಿನ್ ಗಳು ವರ್ಗಾಯಿಸಲಾಗಿದೆ ಎಂಬುದು ಸತ್ಯಕ್ಕೆ ದೂರವಾದ ಮಾತು. ಆ ಬಿಟ್ಕೊಯಿನ್ ಸಂಸ್ಥೆಯು ಬೆಂಗಳೂರಿನ ವ್ಯಾಪ್ತಿಯಲ್ಲೇ ಇಲ್ಲ ವಿದೇಶ ತನಿಖಾ ಸಂಸ್ಥೆ ಅಥವಾ ಕಂಪನಿಗಳು ಬೆಂಗಳೂರು ನಗರ ಪೊಲೀಸರನ್ನು ಸಂಪರ್ಕಿಸಿಲ್ಲ. ಬಿಟ್ ಫಿನಿಕ್ಸ್ ಸಹ ಕೂಡ ಮಾಹಿತಿ ಕೇಳಿಲ್ಲ. ಶ್ರೀಕಿ ವಿದೇಶಿ ವೆಬ್ಸೈಟ್ಗಳನ್ನು ಹ್ಯಾಕ್ ಮಾಡುವುದಾಗಿ ಹೇಳಿದ್ದ.
ಇದನ್ನು ಆಧರಿಸಿ ಇಂಟರ್ಪೋಲ್ ಮತ್ತು ಸಿಬಿಐಗೆ 2021 ಏಪ್ರಿಲ್ 28ರಂದು ಪತ್ರ ಬರೆಯಲಾಯಿತು ಇದೇ ಮಾಹಿತಿಯನ್ನು ಜಾರಿ ನಿರ್ದೇಶನಾಲಯಕ್ಕೆ ಮಾರ್ಚ್ ಮೂರರಂದು ಪತ್ರ ಬರೆಯಲಾಯಿತು. ಆನ್ಲೈನ್ ಗೇಮಿಂಗ್ ಹಾಗೂ ಬಿಟ್ ಕಾಯಿನ್ ವಂಚಿಸಿದ ಸಂಬಂಧ ಅಶೋಕನಗರ ಸೈಬರ್ ಠಾಣೆಯಲ್ಲಿ ಎರಡು ಪ್ರತ್ಯೇಕ ಯಾರು ಗಳು ದಾಖಲಾಗಿವೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.