ಕೊಪ್ಪಳ (ನ.13)Skill Development : ಮಹಿಳೆಯರು ತಮ್ಮ ಮನೆಯಲ್ಲಿ ಸಣ್ಣ ಸಣ್ಣ ಉದ್ಯಮಗಳನ್ನು (Business)ಮಾಡಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಪ್ರಶಾಂತ್ ಬಾರಿಗಿಡದ ಅವರು ಹೇಳಿದರು.
ಕೊಪ್ಪಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ(Skill Development) ಕೌಶಲ್ಯ ಅಭಿವೃದ್ಧಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಬೆಂಗಳೂರು, ಉದ್ಯಮಶೀಲ ಅಭಿವೃದ್ಧಿ ಕೇಂದ್ರ ಸಿಡಾಕ್, ಧಾರವಾಡ, ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಯೋಗದಲ್ಲಿ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ನಡೆದ ಮೂರು ದಿನದ ಉದ್ಯಮಶೀಲತಾ(Workshop) ತರಬೇತಿ ಕಾರ್ಯಕ್ರವು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಿತು.
ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕು:
ಉದ್ಘಾಟನೆಯನ್ನು ಮಾಡಿದ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಪ್ರಶಾಂತ್ ಅವರು ಮಾತನಾಡಿ, ಮಹಿಳೆಯರು(Economic) ಆರ್ಥಿಕ ಕ್ಷೇತ್ರದಲ್ಲಿ ಸಫಲರಾಗಬೇಕಾದರೆ ಉದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬೇಕು. (women Empowerment) ಮಹಿಳೆಯರು ಉದ್ಯಮದಲ್ಲಿ ಕಡಿಮೆ ಸಂಖ್ಯೆಯಲ್ಲಿದ್ದಾರೆ.ಹೆಣ್ಣುಮಕ್ಕಳು ಉದ್ಯಮಶೀಲತೆಯ ಗುಣಲಕ್ಷಣಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಹೆಣ್ಣುಮಕ್ಕಳು ಸ್ವಂತ ಉದ್ಯೋಗ ಮಾಡಬೇಕು:
ಸಿಡಾಕ್ ನ ಜಂಟಿ ನಿರ್ದೇಶಕ ಜೆ ಯು ಹುಡೆದ ಮಾತನಾಡಿ, ಮಹಿಳೆಯರು (Own Business) ಸ್ವಂತ ಉದ್ಯೋಗ ಪ್ರಾರಂಭ ಮಾಡಬೇಕು ಮಹಿಳೆಯರು (Economically Strong) ಆರ್ಥಿಕವಾಗಿ ಪ್ರಬಲರಾಗಬೇಕು.ಹೆಣ್ಣು ಮಕ್ಕಳು ಹೆಚ್ಚಿನ ಪ್ರಮಾಣದಲ್ಲಿ ಉದ್ಯಮದಲ್ಲಿ ತೊಡಗಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಾಚಾರ್ಯ ಡಾ ಗಣಪತಿ ಕೆ ಲಮಾಣಿ, ಜಿಲ್ಲಾ ಪಂಚಾಯತ್ ಉಪ ನಿರ್ದೇಶಕ ಮನ್ಸೂರ, ಖಾದಿ ಗ್ರಾಮೋದ್ಯೋಗ ಮಂಡಳಿ ಜಿಲ್ಲಾ ಅಧಿಕಾರಿ ವೀರೇಶ್, ಹಣಕಾಸು ಸಾಕ್ಷರತೆ ಕಾರ್ಯನಿರ್ವಾಹಕ ರೇವಣ್ಣ, ತರಬೇತುದಾರ ಅಕ್ಷತಾ, ನಾಗರಾಜ್ ಡಿ, ಹಿರಿಯ ಸಂಪನ್ಮೂಲ ವ್ಯಕ್ತಿಯಾದ ಜಗದೀಶ್ ಎಲಿಗಾರ, ಮಹಾಂತೇಶ್ ಮುಧೋಳ, ನರಸಿಂಹ ಹಾಗೂ ಕಾಲೇಜಿನ ಶಿಕ್ಷಕ ವೃಂದದವರು ಭಾಗಿಯಾಗಿದ್ದರು.