ಬೆಂಗಳೂರು: (ನ.13): Ramesh Jarakiholi ಚುನಾವಣೆಯ (Election) ದಿನಾಂಕ ಘೋಷಣೆಯಾದ ಬೆನ್ನಲ್ಲೇ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿದೆ. ವಿಧಾನಪರಿಷತ್ ಚುನಾವಣೆಯಲ್ಲಿ ಯಾವ ಪಕ್ಷದಲ್ಲಿ ಯಾರಿಗೆ(Ticket) ಟಿಕೆಟ್ ಸಿಗುತ್ತದೆ ಎನ್ನುವ ಕುತೂಹಲ ಸೃಷ್ಟಿಯಾಗಿದೆ.
ಸಿಡಿ ಪ್ರಕರಣದಿಂದಾಗಿ( CD Case) ಸಚಿವ ಸ್ಥಾನ ಕಳೆದು ಕೊಂಡಿರುವ ಬೆಳಗಾವಿಯ ರಮೇಶ್ ಜಾರಕಿಹೊಳಿ ಇಂದು ಮುಖ್ಯಮಂತ್ರಿಯವರ ನಿವಾಸಕ್ಕೆ ಆಗಮಿಸಿ ಹೊಸ ಬೇಡಿಕೆಯನ್ನು ಇಟ್ಟಿದ್ದಾರೆ. ಸಂಪುಟದಲ್ಲಿ ಹೈಕಮಾಂಡ್ ಮೂಲಕ ಮರಳಿ ಸ್ಥಾನ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ.
ಮುಖ್ಯಮಂತ್ರಿ (CM Basavraj Bommai)ಬಸವರಾಜ್ ಬೊಮ್ಮಾಯಿ ಅವರ ಮನೆಗೆ ಟಿಕೆಟ್ ಆಕಾಂಕ್ಷಿಗಳು ಆಗಮಿಸಿ ಲಾಬಿ ಮಾಡುತ್ತಿದ್ದರೇ ಇತ್ತ ಜಾರಕಿಹೊಳಿಯವರು ಮನವಿಯನ್ನು ಸಲ್ಲಿಸಿದ್ದಾರೆ.

ಡಿಸೆಂಬರ್ 10ರಂದು ಚುನಾವಣೆ:
2022 ರ ಜನವರಿ 5 ರಂದು 25 (Legislative Council )ವಿಧಾನಪರಿಷತ್ ಸದಸ್ಯರ ಅಧಿಕಾರವಧಿ ಮುಗಿಯಲಿದೆ. 25 ವಿಧಾನಪರಿಷತ್ ಸ್ಥಾನಗಳಿಗೆ ಡಿಸೆಂಬರ್ 10 ರಂದು(Election) ಮತದಾನ ನಡೆಯಲಿದೆ ಎಂದು(Election Commission) ಚುನಾವಣಾ ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ.
ಡಿಸೆಂಬರ್ 10ರಂದು ಬೆಳಗ್ಗೆ 8ರಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದೆ.ಡಿಸೆಂಬರ್ 14ಕ್ಕೆ ಮತಎಣಿಕೆ ನಡೆದು (Result)ಫಲಿತಾಂಶ ಹೊರಬೀಳಲಿದೆ. ಇನ್ನು ನವೆಂಬರ್ 16ರಂದು ಅಧಿಸೂಚನೆ ಹೊರಡಿಸಲಾಗುವುದು. ನವೆಂಬರ್ 23ಕ್ಕೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ ಎಂದು ಆಯೋಗ ಆದೇಶಿಸಿದೆ.
ಮನವಿಯಲ್ಲಿ ಏನಿದೆ?
ರಮೇಶ್ ಜಾರಕಿಹೊಳಿಯವರು ಸಿಎಂ ಮನೆಗೆ ಭೇಟಿ ನೀಡಿ, ನಾನು ಮಂತ್ರಿಸ್ಥಾನದಿಂದ (Minister)ವಂಚಿತನಾಗಿದ್ದೇನೆ. ಹಾಗಾಗಿ ನನ್ನ ಸಹೋದರ(Lakhan Jarakiholi) ಲಖನ್ ಜಾರಕಿಹೊಳಿಗೆ ಅವಕಾಶ ಕೊಡಿ.
ನನಗೆ ಸಿಡಿ ಪ್ರಕರಣದಲ್ಲಿ ಇನ್ನೂ(Clean chit ಕ್ಲೀನ್ ಚಿಟ್ ಸಿಕ್ಕಿಲ್ಲ ಹಾಗಾಗಿ ನನ್ನ ಸಹೋದರನಿಗೆ ಬೆಳಗಾವಿಯಿಂದ ಎಂಎಲ್ಸಿ (MLC)ಟಿಕೆಟ್ ನೀಡಬೇಕು. ಎಂಎಲ್ಸಿ ಬಳಿಕ ಆತನಿಗೆ ಸಂಪುಟ ಸ್ಥಾನ ನೀಡಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಲ್ಲಿ ಮನವಿ(Request) ಮಾಡಿಕೊಂಡಿದ್ದಾರೆ. ಸಿಎಂ ಅವರು ನೋಡೋಣ ಎಂದು ಆಶ್ವಾಸನೆ ನೀಡಿದ್ದಾರೆ.
ಯಾವ ಪಕ್ಷ ನೀಡುತ್ತೆ ಟಿಕೆಟ್?
ಜೆಡಿಎಸ್ ಪಕ್ಷದಲ್ಲಿ(JDS) ಎಚ್.ಡಿ ರೇವಣ್ಣ ಕುಟುಂಬಸ್ಥರಿಗೆ ಟಿಕೆಟ್ ನೀಡುತ್ತಿದೆ ಎಂಬ ವದಂತಿಗಳು ಹರಿದಾಡುತ್ತಿದ್ದು, ಬಿಜೆಪಿ(Twitter) ಟ್ವಿಟ್ಟರ್ ನಲ್ಲಿ ಕುಟುಂಬ ರಾಜಕಾರಣ ಎಂದು ಟ್ವೀಟ್ ಮಾಡಿ ವೈರಲ್ ಆಗಿದೆ. ಸದ್ಯ ಲಖನ್ ಜಾರಕಿಹೊಳಿಗೆ ಬಿಜೆಪಿಯಿಂದ ಟಿಕೆಟ್ ಸಿಗುತ್ತದೋ ಇಲ್ಲವೋ ಎಂದು ಕಾದುನೋಡಬೇಕು.
ಜೆಡಿಎಸ್ ವಿರುದ್ಧ ಬಿಜೆಪಿ ಕಿಡಿ:
ಬಿಜೆಪಿ ಟ್ವೀಟ್ ಮಾಡಿರುವ ಹಿನ್ನೆಲೆಯಲ್ಲಿ, ಭವಾನಿ ರೇವಣ್ಣ ಅವರಿಗೆ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಚುನಾವಣೆಗೆ ಟಿಕೆಟ್ ನೀಡಬೇಕೆಂಬ ವಿಷಯದ ಬಗ್ಗೆ ಪ್ರಸ್ತಾಪವಾಗಿದೆ. ಇದಕ್ಕೆ ಪ್ರತಿಕ್ರಿಯಿಸಿದ (H D Devegowda) ಮಾಜಿ ಪ್ರಧಾನಿ ಹೆಚ್. ಡಿ ದೇವೇಗೌಡ ಅವರು ಕಾರ್ಯಕರ್ತರ (Feelings)ಭಾವನೆಗೆ ಬೆಲೆ ನೀಡಲಾಗುವುದು ಎಂದು ಒಪ್ಪಿಗೆ ಸೂಚಿಸಿದ್ದಾರೆ. ದೇವೇಗೌಡರ ಹೇಳಿಕೆಗೆ ಕುಟುಂಬ ರಾಜಕಾರಣದ ಇನ್ನೊಂದು ಮುಖವೇ ಹೊರ ಬಂದಿದೆ ಎಂದು ಪ್ರಶ್ನೆ ಮಾಡಿದ್ದಾರೆ.
ಜೆಡಿಎಸ್ ಬಗ್ಗೆ ವ್ಯಂಗ್ಯ ಟ್ವೀಟ್:
ಬಿಜೆಪಿ ತನ್ನ ಟ್ವಿಟ್ಟರ್ ನಲ್ಲಿ, ಕುಟುಂಬ ರಾಜಕಾರಣ ಜೆಡಿಎಸ್ ಸಿದ್ದಾಂತ(Theory), ಕುಮಾರಸ್ವಾಮಿ ಅನಿತಾ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಹಾಗೂ ಪ್ರಜ್ವಲ್ ರೇವಣ್ಣ, ಭವಾನಿರೇವಣ್ಣ, ಸೂರಜ್ ರೇವಣ್ಣ, ಎಲ್ಲರೂ ಕುಟುಂಬ ರಾಜಕಾರಣದ ರೆಂಬೆಕೊಂಬೆಗಳು ಎಂದು ವ್ಯಂಗ್ಯ ಮಾಡಿದೆ.