ನ್ಯೂಯಾರ್ಕ್: ಹುಟ್ಟುವಾಗಲೇ ಮಗುವೊಂದು ವಿಶ್ವದಾಖಲೆ ಬರೆದ ಘಟನೆಯೊಂದು ನ್ಯೂಯಾರ್ಕ್ ನಲ್ಲಿ ನಡೆದಿದೆ. ಸಾಮಾನ್ಯವಾಗಿ ಮಹಿಳೆ ಗರ್ಭ ಧರಿಸಿ ಒಂಬತ್ತು ತಿಂಗಳ ನಂತರ ಮಗು ಜನನವಾಗುತ್ತದೆ. ಆದರೆ ನ್ಯೂಯಾರ್ಕ್ನಲ್ಲಿ 5.5 ತಿಂಗಳಿಗೆ ಜನಿಸಿದ ಮಗು ಈಗ ಆರೋಗ್ಯವಾಗಿದ್ದು ಗಿನ್ನಿಸ್ ದಾಖಲೆ ಬರೆದಿದೆ.

2020 ರ ಜುಲೈನಲ್ಲಿ ಅಮೆರಿಕದ ಅಲಬಾಮಾದಲ್ಲಿ ಈ ಮಗು ಜನಿಸಿದ್ದು ಮಗುವಿನ ಆರೋಗ್ಯ ಸ್ಥಿತಿ ಉತ್ತಮವಾಗಿದೆ. ಸದ್ಯ ಆ ಮಗು ಅವಧಿಗೂ ಮುಂಚೆಯೇ ಜನಿಸಿದ ಮಗು ಎಂದು ಗಿನ್ನಿಸ್ ದಾಖಲೆಯಲ್ಲಿ ತನ್ನ ಹೆಸರನ್ನು ಬರೆದುಕೊಂಡಿದೆ. ಜೂನ್ 4 ರಂದು ಮಿಷನ್ ಬಟ್ಲರ್ ಅವರಿಗೆ ಜನಿಸಿದ ಮಗು ಈಗ ವಿಶ್ವದಾಖಲೆಗೆ ಭಾಜನವಾಗಿದೆ.
ಇದನ್ನೂ ಓದಿ: Tulasi Vivaha: ಪುಣ್ಯ ಪ್ರಾಪ್ತಿಯಾಗುವ ತುಳಸಿ ವಿವಾಹ ಬಗ್ಗೆ ನಿಮಗೆಷ್ಟು ಗೊತ್ತು?
ಆರೋಗ್ಯ ತಪಾಸಣೆ ಗೆದ್ದು ಬಂದಾಗ ಶಸ್ತ್ರಚಿಕಿತ್ಸೆ ಮಾಡಿ ಮಗುವನ್ನು ಹೊರತೆಗೆಯಲಾಗಿದೆ ಜನನದ ವೇಳೆ ಒಂದು ಗಂಡು ಮಗು ಮತ್ತು ಒಂದು ಹೆಣ್ಣು ಮಗು ಜನಿಸಿದ್ದು ಹೆಣ್ಣು ಮಗು ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿತ್ತು. ಆದರೆ ಗಂಡು ಮಗು ಆರೋಗ್ಯವಾಗಿದ್ದು ಹುಟ್ಟುವಾಗ ಸುಮಾರು 450 ಗ್ರಾಂ ತೂಕವಿತ್ತು. ಅಂದರೆ ಕೇವಲ ಒಂದು ಫುಟ್ಬಾಲ್ ಗಾತ್ರ ಕ್ಕಿಂತಲೂ ಕಡಿಮೆ ತೂಕ ಹೊಂದಿದ್ದು, ಸದ್ಯ ಆ ಮಗು ಸಾಮಾನ್ಯ ಮಕ್ಕಳಂತೆ ಆರೋಗ್ಯವಾಗಿದೆ.