ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ದಿನೇದಿನೇ ಏರಿಕೆ ಆಗುತ್ತಿರುವುದರಿಂದ ಸಾಮಾನ್ಯ ಜನರ ಸ್ಥಿತಿ ಅತಂತ್ರವಾಗಿದೆ. ಈಗ ಪಾನ ಪ್ರಿಯರಿಗೆ ದೊಡ್ಡ ಶಾಕಿಂಗ್ ನ್ಯೂಸ್ ಎದುರಾಗಿದೆ.
ಇದನ್ನೂ ಓದಿ: ಟ್ರ್ಯಾಕ್ಟರ್ ರ್ಯಾಲಿ ಬಂಧಿತರಿಗೆ ಪಂಜಾಬ್ ಸರ್ಕಾರದಿಂದ ಆರ್ಥಿಕ ಸಹಾಯ
ಹೌದು ಎಲೆಕ್ಟ್ರಾನಿಕ್ ವಸ್ತುಗಳು ಮದ್ಯ ಜವಳಿ ಉತ್ಪನ್ನಗಳ ದರ ಶೇಕಡಾ 8 ರಿಂದ 10 ರಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ. ಉತ್ಪಾದನಾ ವೆಚ್ಚದಲ್ಲಿ ಏರಿಕೆಯಾಗುವ ಕಾರಣ ಈ ಬದಲಾವಣೆ ಆಗಲಿದೆ. ಇದರ ಪರಿಣಾಮ ಜನಸಾಮಾನ್ಯರಿಗೆ ತಟ್ಟಲಿದೆ. ಈಗಾಗಲೇ ಖಾದ್ಯತೈಲ ದಿನಸಿ ವಸ್ತುಗಳು ಪೆಟ್ರೋಲ್ ಡೀಸೆಲ್ ಪ್ಯಾಕೆಡ್ ಫುಡ್ ಸೇರಿದಂತೆ ಹಲವಾರು ವಸ್ತುಗಳ ಬೆಲೆ ಏರಿಕೆಯಿಂದ ಜನ ತತ್ತರಿಸಿ ಹೋಗಿದ್ದಾರೆ.

ಈಗ ಕಚ್ಚಾ ವಸ್ತುಗಳ ದರ ಏರಿಕೆ ಮತ್ತು ಬೇಡಿಕೆಯ ಪರಿಣಾಮ, ಮಧ್ಯ, ಎಲೆಕ್ಟ್ರಾನಿಕ್ ವಸ್ತುಗಳ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ. ಪ್ಯಾಕ್ ಮಾಡಿದ ಆಹಾರ ಊಟವನ್ನು ಮಾರಾಟ ಮಾಡುವ ಕಂಪನಿಗಳು ಕಿರಾಣಿ ಅಂಗಡಿಯ ವಸ್ತುಗಳು ವೈಯಕ್ತಿಕ ಆರೈಕೆ ಉತ್ಪನ್ನಗಳು ಮುಂತಾದವುಗಳ ಬೆಲೆ ಈಗಾಗಲೇ ಏರಿಕೆಯಾಗಿದ್ದು ಮತ್ತೆ ಹೊಸ ವರ್ಷಕ್ಕೆ ಬೆಲೆ ಹೆಚ್ಚಾಗುವ ಸಾಧ್ಯತೆಗಳಿವೆ.