Tulasi Vivaha (ನ.13): ಹಿಂದೂ ಧರ್ಮದಲ್ಲಿ ತುಳಸಿ ವಿವಾಹಕ್ಕೆ ವಿಶೇಷ ಪ್ರಾಮುಖ್ಯತೆ ಇದೆ.(Tulasi Vivaha) ತುಳಸಿ ವಿವಾಹ ಮಾಡಿದರೆ ಪುಣ್ಯ ಪ್ರಾಪ್ತಿ ಆಗುತ್ತದೆ ಎಂಬುದು ಧಾರ್ಮಿಕ ನಂಬಿಕೆ.
ತುಳಸಿ ವಿವಾಹವನ್ನು ಏಕಾದಶಿಯ ದಿನದಂದು ಅಂದರೆ ನ.15 ರಂದು 5:48ಕ್ಕೆ ಪ್ರಾರಂಭವಾಗಿ ಅದೇ ದಿನದಂದು ಸಂಜೆ 6:39ಕ್ಕೆ ಕೊನೆಗೊಳ್ಳುತ್ತದೆ.

ವೈವಾಹಿಕ ಜೀವನದಲ್ಲಿ ನೆಮ್ಮದಿ:
ಹಿಂದೂ ಧರ್ಮದ ಪ್ರಕಾರ ಆ ದಿನದಿಂದಲೇ ಮಂಗಳಕರ ಕಾರ್ಯಕ್ರಮಗಳು ಪ್ರಾರಂಭವಾಗುತ್ತದೆ.ತುಳಸಿ ವಿವಾಹವನ್ನು ಶಿಸ್ತುಬದ್ಧವಾಗಿ ಮಾಡಿದರೆ ವೈವಾಹಿಕ ಜೀವನದಲ್ಲಿ (Married Life)ಸುಖ ಸಂತೋಷ ಶಾಂತಿ ನೆಲೆಯಾಗುತ್ತದೆ. ತುಳಸಿ ವಿವಾಹ ಮಾಡಿದರೆ ಕನ್ಯಾದಾನ ಮಾಡಿದ ಪುಣ್ಯವೇ ಪ್ರಾಪ್ತಿಯಾಗುತ್ತದೆ ಎಂಬುದು ನಂಬಿಕೆ.
ಏಕದಶಿ ಮತ್ತು ತುಳಸಿ ವಿವಾಹದ ತೀರ್ಥ ಕಾರ್ತಿಕ ಮಾಸದ ಶುಕ್ಲಪಕ್ಷದಲ್ಲಿ ಬರುತ್ತದೆ. ಏಕಾದಶಿಯಂದು ವ್ರತವನ್ನು ಆಚರಿಸುವ ಮಹಿಳೆಯರು ನವಂಬರ್ 15ರಂದು ಮ. 1:10ರಿಂದ ಮಧ್ಯಾಹ್ನ 3.19ರವರೆಗೆ ಉಪವಾಸವನ್ನು ಬಿಡಬಹುದು.
ತುಳಸಿ ವಿವಾಹದ ಪೂಜಾ ವಿಧಾನ :
ತುಳಸಿ ಶಾಲಿಗ್ರಾಮನನ್ನು ಮದುವೆಯಾಗುತ್ತಾಳೆ (Marriage) ಮಹಿಳೆಯರು ಲಕ್ಷ್ಮಿ ದೇವಿಯ ಹೆಸರಿನಲ್ಲಿ ಉಪವಾಸವನ್ನು ಮಾಡುತ್ತಾರೆ. ವಿಷ್ಣುವಿಗೆ(Lord Vishnu) ತುಳಸಿ ಅತ್ಯಂತ ಪ್ರಿಯವಾದದ್ದು. ಬಟ್ಟೆ ಧರಿಸಿ ಉಪವಾಸ ವ್ರತವನ್ನು ಕೈಗೊಳ್ಳಬೇಕು. ವಿಷ್ಣುವನ್ನು ಪೂಜಿಸಿದರೆ ಮುಂದೆ ದೀಪವನ್ನು ಹಚ್ಚಿ ಹಣ್ಣು ಮತ್ತು ಹೂಗಳಿಂದ (Decorate)ಅರ್ಪಿಸಬೇಕು.
ಏಕಾದಶಿಯ ದಿನದಂದು ತುಳಸಿಯನ್ನು ವಿಷ್ಣುವಿಗೆ ಅರ್ಪಿಸಿ ಸಂಜೆ(Vishnu Sahastranam) ವಿಷ್ಣು ಸಹಸ್ರನಾಮ ಪಠಿಸಬೇಕು.ಏಕಾದಶಿ ದಿನದಂದು ಉಪವಾಸ ಆಚರಿಸುವ ವ್ಯಕ್ತಿಯು ಸಾತ್ವಿಕ ಆಹಾರವನ್ನು ಮಾತ್ರ ತೆಗೆದುಕೊಳ್ಳಬೇಕು. ಈ ದಿನ ಆಹಾರವನ್ನು ಸೇವಿಸುವುದಿಲ್ಲ.ವಿಷ್ಣುವಿನ ಜೊತೆಗೆ ತುಳಸಿ ಮತ್ತು ಲಕ್ಷ್ಮೀ ದೇವಿಯನ್ನು (Lord Vishnu and Lakshmi) ಪೂಜಿಸಲಾಗುತ್ತದೆ ರಾತ್ರಿ ತುಳಸಿ ಮತ್ತು ಸಾಲಿಗ್ರಾಮವನ್ನು ನೆರವೇರಿಸಬೇಕು.