ದೆಹಲಿ (ನ:13)Delhi Air Pollution: ದೆಹಲಿಯಲ್ಲಿ ಕೆಲದಿನಗಳಿಂದ ಹೊಗೆ ತುಂಬಿಕೊಂಡು ವಾತಾವರಣ ಹದಗೆಟ್ಟಿತ್ತು. ಗಾಳಿಯ ಗುಣಮಟ್ಟದ ಕಡಿಮೆಯಾಗಿರುವುದರಿಂದ ಸಿಜೆಐ ರಮಣ ಅವರು ದೆಹಲಿಯಲ್ಲಿ ಯಾವ ಯೋಜನೆಗಳನ್ನು ಹಾಗೂ ಕ್ರಮಗಳನ್ನು ಕೈಗೊಂಡಿದ್ದೀರಿ ಅಥವಾ ಎರಡು ದಿನಗಳ ಕಾಲ ಲಾಕ್ ಡೌನ್ ಮಾಡುತ್ತೀರಾ ಎಂದು ಸುಪ್ರೀಂ ಕೋರ್ಟನ್ನು ಪ್ರಶ್ನಿಸಿದ್ದಾರೆ.
ಉಸಿರಾಡಲು ಸ್ವಚ್ಛ ಗಾಳಿಯೇ ಇಲ್ಲದ ಮೇಲೆ ನಮ್ಮ ಆರೋಗ್ಯದ ಪರಿಸ್ಥಿತಿ ಏನು ಎಂದು ದೆಹಲಿಯಲ್ಲಿ ವಾಸವಾಗಿರುವ ಜನರ ಪ್ರಶ್ನೆಯಾಗಿದೆ.ಹೊರಗಡೆಯಲ್ಲದೆ ಮನೆಯೊಳಗೂ ಸಹ ಮಾಸ್ಕ್ ಧರಿಸಿ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕೂಡಲೇ ಪಂಜಾಬ್ ಹರಿಯಾಣ ರಾಜ್ಯಗಳೊಂದಿಗೆ ತುರ್ತುಸಭೆ ನಡೆಸಿ ಮುಂದಿನ ಎರಡು ಮೂರು ದಿನಗಳಲ್ಲಿ ಪರಿಸ್ಥಿತಿ ಸುಧಾರಿಸಿ ಎಂದು ನಿಮಗೆ ಅನ್ನಿಸುವ ರೀತಿ ಕ್ರಮ ಕೈಗೊಳ್ಳಿ ಎಂದು ರಾಮಣ ಸೂಚಿಸಿದ್ದಾರೆ.
ಕಳೆದ ಶುಕ್ರವಾರ ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಅದೇ ಕೆಡುವುದನ್ನು ನಿರ್ಬಂಧಿಸಲು ಗ್ರೇಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್ ಅನುಷ್ಠಾನ ಸಭೆ ನಡೆಸಲಾಗಿತ್ತು.
ನಂತರದಲ್ಲಿ ಈ ಬಗ್ಗೆ ತೀರ್ಮಾನ ಕೈಗೊಂಡಿದ್ದು ದೆಹಲಿಯಲ್ಲಿ ತೀವ್ರ ವಾಯು ಗುಣಮಟ್ಟ ಸೂಚ್ಯಂಕ ಮಟ್ಟವನ್ನು ಗಮನಿಸಲಾಗಿದೆ. ಪ್ರಸ್ತುತ ಗಮನ ಪರಿಸ್ಥಿತಿಗಳು ಮಾಲಿನ್ಯಕಾರಕ ಪ್ರಸರಣಕ್ಕೆ ಹೆಚ್ಚು ಪ್ರತಿಕೂಲವಾಗಿದ್ದ ಹಾಗೂ ಬೆಳೆಗೆ ಬೆಂಕಿ ಹಚ್ಚುವ ನೆರೆಯ ರಾಜ್ಯ ಕ್ರಮದಿಂದ ಇಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಕಳೆದ ನವಂಬರ್ 8 ರಂದು ನೀಡಿದ ಆದೇಶದಲ್ಲಿ ಸೂಚಿಸಿರುವಂತೆ ವಾಯುಮಾಲಿನ್ಯ ನಿಯಂತ್ರಣ ಕ್ರಮಗಳನ್ನು ಇನ್ನಷ್ಟು ಕಠಿಣ ಗೊಳಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ.

ಕಳಪೆ ಗಾಳಿಯಿಂದ ರಕ್ಷಣೆ ಹೇಗೆ?
ನಗರದಲ್ಲಿ ಕಳಪೆ ಗುಣಮಟ್ಟದ ಗಾಳಿಯಿಂದಾಗಿ ರಕ್ಷಿಸಿಕೊಳ್ಳುವುದಕ್ಕೆ ಶೇಕಡ 30ರಷ್ಟು ವಾಹನಗಳ ಬಳಕೆಯನ್ನು ಕಡಿತಗೊಳಿಸಬೇಕು ಎಂದು ಖಾಸಗಿ ಮತ್ತು ಸರ್ಕಾರಿ ಕಚೇರಿಗಳಿಗೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಸಲಹೆ ನೀಡಿದೆ. ಹಾಗೂ ಮನೆಯಿಂದಲೇ ಕೆಲಸ ಮಾಡುವುದು ಉತ್ತಮ ಎಂದು ಸೂಚಿಸಿದೆ.
ದೆಹಲಿಯ ಜನರು ಸಾಮಾನ್ಯವಾಗಿ ಹೊರಗೆ ತಿರುಗಾಡುವುದನ್ನು ಕಡಿಮೆಗೊಳಿಸಬೇಕು ಹಾಗೂ ಅಪಾಯಕಾರಿ ಹಂತಕ್ಕೆ ತಲುಪಿರುವ ಗಾಳಿಗೆ ದೊಡ್ಡದಿರಲಿ ಸಾಧ್ಯವಾದಷ್ಟು ಪ್ರಯತ್ನಿಸಿ ಎಂದು ಸೂಚನೆ ನೀಡಲಾಗಿದೆ.
ಎಲ್ಲಾ ಹಾಟ್ ಮಿಕ್ಸ್ ಪ್ಲಾಂಟ್ ಗಳನ್ನು ಮತ್ತು ಸ್ಟೋನ್ ಕ್ರಷರ್ ಗಳನ್ನು ಮುಚ್ಚಲು ಆದೇಶಿಸಲಾಗಿದೆ.
ಜನಸಂದಣಿಯಿಲ್ಲದ ಸಮಯದಲ್ಲಿ ಪ್ರಯಾಣಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ವಿಭಿನ್ನ ದರಗಳನ್ನು ಜಾರಿಗೊಳಿಸುವ ಮೂಲಕ ಸಾರ್ವಜನಿಕ ಸಾರಿಗೆ ಸೇವೆಗಳಿಗೆ ಆದ್ಯತೆ ನೀಡಲಾಗಿದೆ.

ಕಲ್ಲಿದ್ದಲು ಆಧಾರಿತ ಘಟಕಗಳ ಕಾರ್ಯಾಚರಣೆಯನ್ನು ಕಡಿಮೆ ಮಾಡಬೇಕು.
ಅನಿಲ ಆಧಾರಿತ ಸ್ಥಾವರಗಳಿಂದ ಹೆಚ್ಚು ವಿದ್ಯುತ್ ಉತ್ಪಾದನೆ ಮಾಡುವುದಕ್ಕೆ ಸೂಚನೆ ನೀಡಲಾಗಿದೆ.
ರಾಷ್ಟ್ರ ರಾಜಧಾನಿಯನ್ನು ಆವರಿಸುವ ಹೊಗೆ ಮತ್ತು ಮಬ್ಬಿನ ದಟ್ಟವಾದ ಪದರದಿಂದ ಜನರು ಜಾಗೃತರಾಗಬೇಕು. ಸಿಸ್ಟಮ್ ಆಫ್ ಏರ್ ಕ್ವಾಲಿಟಿ ಮತ್ತು ವೆದರ್ ಫೋರೆಕ್ಯಾಸ್ತಿಂಗ್ ಅಂಡ್ ರಿಸರ್ಚ್ ಪ್ರಕಾರ ದೆಹಲಿಯಲ್ಲಿ ಪ್ರಸ್ತುತ ವಾಯು ಗುಣಮಟ್ಟ ಸೂಚ್ಯಂಕ 390 ಆಗಿದೆ ಹಾಗೂ ಸಂಜೆ ನಾಲ್ಕರ ಹೊತ್ತಿಗೆ ದೆಹಲಿಯಲ್ಲಿ 471 ಅಲ್ಲಿತ್ತು ಇದು ಋತುವಿನಲ್ಲಿ ಅತ್ಯಂತ ಕಳಪೆ ಗುಣಮಟ್ಟ ಎಂದು ದಾಖಲಿಸಲಾಗಿದೆ .
ಉಸಿರಾಡುವ ಗಾಳಿಯ ಗುಣಮಟ್ಟ ಹೇಗಿರಬೇಕು:
- 00-50 ಉತ್ತಮ
- 51 – 100 ತೃಪ್ತಿದಾಯಕ101 – 200 ಮಧ್ಯಮ
- 201 300 ಕಳಪೆ
- 301 400 ಅತಿ ಕಳಪೆ
- 401 500 ಅಪಾಯಕಾರಿ
- 500 ನಂತರ ಅತಿ ಅಪಾಯಕಾರಿ
ಸದ್ಯ ದೆಹಲಿಯಲ್ಲಿ ವಾಯುಮಾಲಿನ್ಯ ಪ್ರಮಾಣ ಅತಿ ಅಪಾಯಕಾರಿಯಾಗಿದೆ.
ಕಳೆದ ಎರಡು ಮೂರು ದಿನಕ್ಕೆ ಹೋಲಿಸಿದರೆ ದೆಹಲಿಯಲ್ಲಿ ವಾತಾವರಣ ಹದಗೆಟ್ಟು ಹೋಗಿದ್ದು. ವಾಯುಮಾಲಿನ್ಯದಿಂದ ಉಸಿರಾಟದ ತೊಂದರೆ ಹಾಗೂ ಶ್ವಾಸಕೋಶದ ಸಮಸ್ಯೆ ಹಾಗೂ ಹೃದಯಾಘಾತದ ಆಗುವ ಭೀತಿಯಲ್ಲಿ ಬಳುತ್ತಿದ್ದಾರೆ.