ರಾಜ್ಯದಲ್ಲಿ ಮುಂಗಾರು ಹಿಂಗಾರಿನ ಅವಧಿ ಮುಗಿದರೂ ಕೂಡ ಅಕಾಲಿಕವಾಗಿ ಸುರಿಯುತ್ತಿರುವ ಮಳೆಯಿಂದ ಅನ್ನದಾತ ಕಂಗಾಲಾಗಿದ್ದಾನೆ. ಫಸಲು ಕೈ ಬರದೆ ಪರಿತಪಿಸುತ್ತಿದ್ದಾನೆ ಸಾಲ ಮಾಡಿ ಬೆಳೆದಿರುವ ಬೇಳೆ ಈ ಮಳೆಯಿಂದ ನಾಶವಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತೆ ಮುಂಗಾರಿನ ಬೆಳೆಗಳಾದ ರಾಗಿ, ಜೋಳ, ಭತ್ತ, ಈರುಳ್ಳಿ, ಕಾಫಿ ಮುಂತಾದ ಬೆಳೆಗಳು ಇನ್ನೇನು ಫಸಲು ಕೊಡುವ ಸಮಯಕ್ಕೆ ನಾಶವಾಗುತ್ತಿದೆ.

ಅಡಿಕೆ ಬೆಳೆಗಾರರು ಬೆಳೆಯನ್ನು ಕೊಯ್ಲು ಮಾಡಿ ಅಡಿಕೆಯನ್ನು ಒಣಗಿಸುವ ಸಮಯದಲ್ಲಿ ಮೋಡಕವಿದ ವಾತಾವರಣ ಮತ್ತು ಜಿಟಿಜಿಟಿ ಮಳೆಯಿಂದ ಅಡಿಕೆ ಒಣಗಿಸಲು ಆಗದೆ ಪರದಾಡುವಂತಾಗಿದೆ. ಅಕಾಲಿಕ ಮಳೆಯಿಂದಾಗಿ ಕಾಫಿ ಕಾಳುಮೆಣಸು ಮುಂತಾದ ಬೆಳೆಗಳ ಫಸಲು ಕೈ ಬರದೆ ರೈತರು ಕಂಗಾಲಾಗಿದ್ದಾರೆ.
ಇದನ್ನೂ ಓದಿ: ಅತಿ ಚಿಕ್ಕ ವಯಸ್ಸಿನಲ್ಲಿ ಹುಟ್ಟಿದ ಮಗು ಗಿನ್ನಿಸ್ ದಾಖಲೆ
ಉದುರುತ್ತಿರುವ ಮಳೆಯಿಂದಾಗಿ ಕಾಫಿ, ಕಾಳುಮೆಣಸು ಗಿಡಗಳು ನೆಲಕಚ್ಚಿವೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಇದೇ ಪರಿಸ್ಥಿತಿ ಮುಂದುವರೆದಿದ್ದು ರಾಜ್ಯದಲ್ಲಿ ಸಾವಿರಾರು ಹೆಕ್ಟೇರ್ ಗಳ ಕೃಷಿ ಭೂಮಿ ಎಲ್ಲಿ ನಷ್ಟ ಉಂಟಾಗುತ್ತಿದೆ. ಕಟಾವಿಗೆ ಬಂದ ಬೆಳೆ ಕುಯಿಲು ಮಾಡಲು ಸಾಧ್ಯವಾಗುತ್ತಿಲ್ಲ ಅಕಾಲಿಕ ಮಳೆಯಿಂದಾಗಿ ದೇಶದ ಬೆನ್ನೆಲುಬಾದ ಅನ್ನದಾತ ಪರದಾಡುವಂತಾಗಿದೆ ಪ್ರಕೃತಿಯ ಮುನಿಸಿನಿಂದ ಇನ್ನೇನು ಕೈಗೆ ಬರಬೇಕಿದ್ದ ಬೆಳೆಗಳು ಹಾನಿಗೀಡಾಗಿವೆ.