ಇಂದಿನ ಜಗತ್ತಿನಲ್ಲಿ ಆನ್ ಲೈನ್ ಪೇಮೆಂಟ್(online payment) ಎಲ್ಲೆಡೆ ಚಾಲ್ತಿಯಲ್ಲಿದೆ. ಈಗ ಎಲ್ಲರೂ ಆನ್ ಲೈನ್ ನಲ್ಲಿಯೇ ವ್ಯವಹರಿಸುತ್ತಾರೆ. ಅದರಲ್ಲಿಯೂ ಡಿಜಿಟಲ್(digital) ಕರೆನ್ಸಿ ಇಂದಿನ ದಿನಗಳಲ್ಲಿ ಟ್ರೆಂಡಿಂಗ್ ನಲ್ಲಿದೆ. ಅದರಲ್ಲಿಯೂ ಇತ್ತೀಚೆಗೆ ಕ್ರಿಪ್ಟೋಕರೆನ್ಸಿ(cryptocurrency) ಬಹಳ ಸುದ್ದಿಯಲ್ಲಿದೆ. ಕ್ರಿಪ್ಟೋಕರೆನ್ಸಿ ಆಧುನಿಕ ಯುಗದ ಮುದ್ರಣ ರೂಪ ಇಲ್ಲದ ಡಿಜಿಟಲ್ ಕರೆನ್ಸಿಯಾಗಿದೆ. ಇದನ್ನು ಎಲೆಕ್ಟ್ರಾನಿಕ್ ರೂಪದಲ್ಲಿ ಮೊಬೈಲ್ ಆ್ಯಪ್, ಕಂಪ್ಯೂಟರ್ ಮೂಲಕ ಸುಲಭವಾಗಿ ಚಲಾವಣೆ ಮಾಡಬಹುದಾಗಿದೆ.
ಕ್ರಿಪ್ಟೋಕರೆನ್ಸಿ ಮೂಲಕ ನಾವು ಸುಲಭದಲ್ಲಿ ಹೇಗೆ ರೂಪಾಯಿ, ಡಾಲರ್ ಗಳಲ್ಲಿ ಖರೀಧಿಸುತ್ತೇವೋ ಅದೇ ರೀತಿ ವ್ಯವಹಾರ ನಡೆಸಬಹುದು. ಇದು ಡಿಜಿಟಲ್ ರೂಪದಲ್ಲಿರುವ ಕಾರಣ ಯಾವುದೇ ದೇಶ, ಭಾಷೆ, ಬ್ಯಾಂಕು ಇದ್ಯಾವುದರ ಹಂಗಿಲ್ಲದೇ ವ್ಯವಹರಿಸಬಹುದಾಗಿದೆ.

ಕ್ರಿಪ್ಟೋ ಕರೆನ್ಸಿ ಎಂದರೇನು?
ಸುಲಭವಾಗಿ ಹೇಳುವುದಾದರೆ ಕ್ರಿಪ್ಟೋಕರೆನ್ಸಿ ಡಿಜಿಟಲ್ ರೂಪದ ಹಣ. ಇದಕ್ಕೆ ಕದಿಯಲು ಸಾಧ್ಯವಾಗದ ರೀತಿಯಲ್ಲಿ ಸುರಕ್ಷತೆ ಒದಗಿಸಲಾಗಿರುತ್ತದೆ. ಇದು ಮುಖ್ಯವಾಗಿ ಬ್ಲಾಕ್ ಚೈನ್ ತಂತ್ರಜ್ಞಾನದಲ್ಲಿ ಕೆಲಸ ನಿರ್ವಹಿಸುತ್ತದೆ. ಬ್ಲಾಕ್ ಚೈನ್ ಒಂದು ವಿಕೇಂದ್ರಿಕೃತ ತಂತ್ರಜ್ಞಾನವಾಗಿದೆ. ಇದು ಹಲವು ಕಂಪ್ಯೂಟರ್ ಗಳಲ್ಲಿ ಹರಡುವ ಮೂಲಕ ವ್ಯವಹಾರ ನಿರ್ವಹಿಸುತ್ತದೆ. ಈ ತಂತ್ರಜ್ಞಾನದಲ್ಲಿ ಸುರಕ್ಷತೆ ಮೊದಲ ಆಧ್ಯತೆಯಾಗಿದೆ.
ಕ್ರಿಪ್ಟೋಕರೆನ್ಸಿಗಳ ಪೈಕಿ ಮೊದಲನೆಯದು ಬಿಟ್ ಕಾಯಿನ್ (Bitcoin). ಇದು ಇಂದಿಗೂ ಅತ್ಯಂತ ಜನಪ್ರಿಯವಾದ ಕ್ರಿಪ್ಟೋ ಕರೆನ್ಸಿ. ಜೊತೆಯಲ್ಲೇ ಸಾವಿರಾರು ಬಗೆಯ ಕ್ರಿಪ್ಟೋ ಕರೆನ್ಸಿಗಳು ಇದೀಗ ಮಾರುಕಟ್ಟೆಯಲ್ಲಿ ಲಭ್ಯ ಇವೆ.
2009ರಲ್ಲಿ ಸಂತೋಷಿ ನಕಮೋಟೋ ಎಂಬ ಕಾವ್ಯನಾಮದ ಸಂಸ್ಥೆಯೊಂದು ಬಿಟ್ ಕಾಯಿನ್ ವ್ಯವಸ್ಥೆಯನ್ನು ವಿಶ್ವಕ್ಕೆ ಪರಿಚಯಿಸಿತು. ಇದೀಗ ಅಕ್ಟೋಬರ್ 2021ರ ಅಂಕಿ ಅಂಶವನ್ನು ನೋಡಿದರೆ ಇಡೀ ವಿಶ್ವದಲ್ಲಿ ಒಟ್ಟು 20 ದಶಲಕ್ಷ ಬಿಟ್ ಕಾಯಿನ್‌ಗಳು ಬಳಕೆಯಲ್ಲಿವೆ. ಇದರ ಒಟ್ಟು ಮಾರುಕಟ್ಟೆ ಮೌಲ್ಯ 927 ಬಿಲಿಯನ್ ಅಮೆರಿಕನ್ ಡಾಲರ್ಗೂ ಹೆಚ್ಚು.
ಇದನ್ನೂ ಓದಿ: ಮಧ್ಯಪ್ರಿಯರಿಗೆ ಬೆಲೆಏರಿಕೆ ಬಿಸಿ; ದಿನಬಳಕೆ ವಸ್ತುಗಳೊಂದಿಗೆ ಮಧ್ಯವೂ ದುಬಾರಿ
ಬಿಟ್ ಕಾಯಿನ್ ಮಾತ್ರವಲ್ಲ ಇನ್ನೂ ಹಲವು ಕ್ರಿಪ್ಟೋ ಕರೆನ್ಸಿ ವಿತರಣಾ ಕಂಪನಿಗಳು ಈಗೀಗ ಹೆಚ್ಚು ಜನಪ್ರಿಯವಾಗಿವೆ. ಆಲ್ಟ್ ಕಾಯಿನ್, ಲೈಟ್ ಕಾಯಿನ್, ಪೀರ್ ಕಾಯಿನ್, ನೇಮ್ ಕಾಯಿನ್ ಹೀಗೆ ಹಲವು ಕಂಪನಿಗಳಿವೆ. ವಿಶ್ವದಲ್ಲಿ ಒಟ್ಟು 1.5 ಟ್ರಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ಕ್ರಿಪ್ಟೋ ಕರೆನ್ಸಿಗಳು ಇದ್ದು, ಈ ಪೈಕಿ ಶೇ. 60ರಷ್ಟು ಬಿಟ್ ಕಾಯಿನ್‌ಗಳೇ ಆಗಿವೆ.
ಹಲವು ಬಗೆಯ ಕ್ರಿಪ್ಟೋ ಕರೆನ್ಸಿಗಳಿವೆ. ಆದರೆ ಹೆಚ್ಚು ಜನಪ್ರಿಯ ಹಾಗೂ ಗುರುತಿಸಿಕೊಂಡಿರುವ ಕರೆನ್ಸಿ ಬಿಟ್ ಕಾಯಿನ್. ಇತ್ತೀಚಿಗೆ ಪ್ರಮುಖ ಐದು ಕ್ರಿಪ್ಟೋ ಕರೆನ್ಸಿಗಳ ಲಿಸ್ಟ್‌ನಲ್ಲಿ ಡಾಗ್ ಕಾಯಿನ್ ಕಾಣಿಸಿಕೊಂಡಿದೆ. ಈ ಡಾಗ್ ಕಾಯಿನ್ 2013ರಲ್ಲಿ ಪರಿಚಯಿಸಲಾಗಿದೆ.
ಕ್ರಿಪ್ಟೋಕರೆನ್ಸಿ ಕಾನೂನು ಬದ್ಧವಾದ ಹಣವಲ್ಲ. ಇದನ್ನು ಕೇಂದ್ರ ಸರ್ಕಾರ ಅಥವಾ ಬ್ಯಾಂಕ್ ಬೆಂಬಲಿಸುವುದಿಲ್ಲ. ಇದು ವಿಕೇಂದ್ರೀಕೃತ ಮತ್ತು ಜಾಗತಿಕವಾದ ವ್ಯವಹಾರ ಒಂದು ಕ್ರಮವಾಗಿದೆ. ಇದರ ರೂಪ ಡಿಜಿಟಲ್ ಬ್ಯಾಂಕ್ ಕ್ರೆಡಿಟ್ ಸಾನ್ಸ್ ಬ್ಯಾಂಕಿನಂತಿದೆ. ಆದರೆ, ಬ್ಯಾಂಕ್ ಅಥವಾ ಸರ್ಕಾರದಿಂದ ಈ ಕರೆನ್ಸಿ ಬೆಂಬಲಿತವಾಗಿಲ್ಲ. ಅಲ್ಗಾರಿದಮ್ ಸರಬರಾಜನ್ನು ನಿಯಂತ್ರಿಸುತ್ತದೆ ಮತ್ತು ನಿಮ್ಮ ತೆರಿಗೆಗಳನ್ನು ಕ್ರಿಪ್ಟೋಕರೆನ್ಸಿ ಮೂಲಕ ಪಾವತಿಸಲು ಸಾಧ್ಯವಿಲ್ಲ. ಬದಲಿಗೆ ನೀವು ಅದರ ಮೇಲೆ ತೆರಿಗೆ ಪಾವತಿಸಬೇಕಾಗುತ್ತದೆ.
ಅನೇಕ ದೇಶಗಳು ಕ್ರಿಪ್ಟೋ ಕರೆನ್ಸಿಯನ್ನು ಬೆಂಬಲಿಸಲು ಪ್ರಾರಂಭಿಸಿವೆ. ಆದರೆ, ಅನೇಕ ಸಂದರ್ಭಗಳಲ್ಲಿ, ಕ್ರಿಪ್ಟೋ ಕರೆನ್ಸಿಗಳ ಸುತ್ತ ಇನ್ನೂ ಸೂಕ್ತ ನಿಯಂತ್ರಣವಿಲ್ಲ. ಭಾರತದಲ್ಲಿ, ಆರಂಭದಲ್ಲಿ ಕ್ರಿಪ್ಟೋ ಕರೆನ್ಸಿ ನಿಷೇಧದ ಕುರಿತು ಮಾತುಕತೆ ನಡೆದಿತ್ತು. RBI ಮತ್ತು SEBI ಎರಡೂ ಸಂಸ್ಥೆಗಳು ಕ್ರಿಪ್ಟೋಕರೆನ್ಸಿಯ ವ್ಯಾಖ್ಯಾನವನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲ. ಅದಕ್ಕಾಗಿ ಎಸ್ಬಿಐ ಮತ್ತು ಸೆಬಿ ಸೇರಿಕೊಂಡು ಕ್ರಿಪ್ಟೋಕರೆನ್ಸಿಗೆ ನಿಯಮಗಳನ್ನು ಸಿದ್ಧಪಡಿಸುತ್ತಿವೆ. ಹೀಗಾಗಿ ಕೇಂದ್ರ ಸರ್ಕಾರ ಕ್ರಿಪ್ಟೋಕರೆನ್ಸಿಯ ಮೇಲಿನ ಜವಾಬ್ದಾರಿಯನ್ನು ಈ ಎರಡು ಸಂಸ್ಥೆಗಳಿಗೆ ನೀಡಲು ಯೋಚನೆ ಮಾಡಿದೆ ಎನ್ನಲಾಗಿದೆ.
ಭಾರತದಲ್ಲಿ ೨೦೧೩ರಲ್ಲಿ ಆರ್ಬಿಐ ಈ ಡಿಜಿಟಲ್ ಕರೆನ್ಸಿಗಳ ಅಪಾಯದ ಬಗ್ಗೆ ಎಚ್ಚರಿಕೆ ನೀಡಿತ್ತು. ಅಲ್ಲದೇ ೨೦೧೮ರಲ್ಲಿ ಆರ್ಬಿಐ ಕ್ರಿಪ್ಟೋ ಸಂಸ್ಥೆಗಳೊಂದಿಗೆ ವ್ಯವಹಾರಕ್ಕೆ ನಿರ್ಭಂಧ ಹೇರಿತ್ತು. ಭಾರತ ಸರ್ಕಾರ ತನ್ನ ಬಜೆಟ್ ಮಂಡನೆಯಲ್ಲಿಯೇ ಇದು ಕಾನೂನು ಬದ್ಧ ವ್ಯವಹಾರ ಅಲ್ಲವೆಂದು ಹೇಳಿತ್ತು.

2019 ರಲ್ಲಿ ವರ್ಚುಯಲ್ – ಕರೆನ್ಸಿಗಳ ಹಣಕಾಸು ಸಚಿವಾಲಯ ಸಮಿತಿಯು ಕ್ರಿಪ್ಟೋಕರೆನ್ಸಿ ನಿಷೇಧಕ್ಕೆ ಶಿಫಾರಸು ಮಾಡಿತ್ತು. ಅಷ್ಟೇ ಅಲ್ಲ ಭಾರತವೇ ಇಂತಹದ್ದೊಂದು ಡಿಜಿಟಲ್ ರೂಪದ ಹಣ ಬಿಡುಗಡೆಗೂ ಯೋಜಿಸಿದ್ದು, ಅದಕ್ಕಾಗಿ ಒಂದು ಸಮಿತಿಯನ್ನೂ ರಚಿಸಲಾಗಿದೆ.
ಭಾರತದಲ್ಲಿ ಕ್ರಿಪ್ಟೋಕರೆನ್ಸಿ ವ್ಯವಹಾರವು ಅಪರಾಧವಾಗಿದೆ. ಈ ವ್ಯವಹಾರ ಮಾಡಿದ್ದಲ್ಲಿ ೨೫ ಕೋಟಿಗಳವರೆಗೆ ದಂಡ ಅಥವಾ ಒಂದರಿಂದ ಹತ್ತು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುವುದು.
ಭಾರತದಲ್ಲಿ ಬಿಟ್‌ಕಾಯಿನ್ ಮೇಲೆ ಹೂಡಿಕೆ ಮಾಡುವುದು ನಿಷೇಧಿತವಲ್ಲ. ಇದನ್ನು ಯಾವುದೇ ಕೇಂದ್ರ ಪ್ರಾಧಿಕಾರ ನಿಯಂತ್ರಿಸುವುದಿಲ್ಲ. ಭಾರತದ ಸುಪ್ರೀಂಕೋರ್ಟ್ 2019ರ ಫೆಬ್ರವರಿ 25ರ ತನ್ನ ತೀರ್ಪಿನಲ್ಲಿ, ಶೀಘ್ರದಲ್ಲೇ ‘ಕ್ರಿಪ್ಟೋಕರೆನ್ಸಿ ನಿಯಂತ್ರಣ ನೀತಿ’ಗಳನ್ನು ಜಾರಿಗೆ ತರುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಆದರೆ ಅಂದಿನಿಂದ ಇಂದಿನ ತನಕ ಯಾವುದೇ ಪ್ರಗತಿ ಕಂಡುಬಂದಿಲ್ಲ.
ವಾಜಿರ್ ಎಕ್ಸ್, ಕಾಯಿನ್ ಸ್ವಿಚ್, ಜೆಬ್‌ಪೇ, ಕಾಯಿನ್ ಡಿಎಕ್ಸ್ (Wazir X, CoinSwitch, ZebPay, CoinDcx) ಪ್ಲಾಟ್ಫಾರ್ಮ್ನಂತಹ ವಿನಿಮಯ ಕೇಂದ್ರಗಳಲ್ಲಿ ಬಿಟ್‌ಕಾಯಿನ್ ಖರೀದಿಸಬಹುದು ಮತ್ತು ಮಾರಾಟ ಮಾಡಬಹುದು. ಈ ವಿನಿಮಯ ಕೇಂದ್ರಗಳಲ್ಲಿ ಟ್ರೇಡಿಂಗ್ ಖಾತೆ ತೆರೆಯಬೇಕು. ಬ್ಯಾಂಕ್ ಖಾತೆಯಿಂದ ಟ್ರೇಡಿಂಗ್ ಖಾತೆಗೆ ಹಣ ವರ್ಗಾಯಿಸಬಹುದು ಮತ್ತು ಬಿಟ್‌ಕಾಯಿನ್‌ನಂತಹ ಕ್ರಿಪ್ಟೋಕರೆನ್ಸಿ ಖರೀದಿ ಮತ್ತು ಮಾರಾಟ ಮಾಡಬಹುದು.