ಮಹಾರಾಷ್ಟ್ರ: ಕೋವಿಡ್ ಲಸಿಕೆ ಹಾಕಿಸಿಕೊಂಡರೆ ಎಲ್‌ಇಡಿ ಟಿವಿ, ಫ್ರಿಡ್ಜ್, ವಾಷಿಂಗ್ ಮಷಿನ್ ಪಡೆಯುವ ಭಾಗ್ಯ ದೊರಕಲಿದೆ.
ಹೀಗೆಂದು ಆಫರ್ ನೀಡಿರುವುದು ಮಹಾರಾಷ್ಟ್ರದ ಚಂದ್ರಾಪುರ ನಗರಸಭೆ.
ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಜನರು ಇಂದಿಗೂ ಹಿಂದೇಟು ಹಾಕುತ್ತಿರುವ ಹಿನ್ನೆಲೆಯಲ್ಲಿ, ಜನರನ್ನು ಹೆಚ್ಚು ಹೆಚ್ಚು ಉತ್ತೇಜಿಸುವ ಸಲುವಾಗಿ ಲಸಿಕೆ ಹಾಕಿಸಿಕೊಳ್ಳುವಂತೆ ನಗರಸಭೆ ಹೀಗೊಂದು ಆಫರ್ ನೀಡಿದೆ.

ಏನಿದು ಆಫರ್?
ನಗರಸಭೆ ವತಿಯಿಂದ ಲಕ್ಕಿಡ್ರಾ ಶುರುಮಾಡಲಾಗಿದೆ. ಲಸಿಕೆ ಹಾಕಿಸಿಕೊಳ್ಳಲು ಬರುವವರಿಗೆ ಟಿಕೆಟ್ ನೀಡಲಾಗುವುದು. ನ.12 ರಿಂದ 24ರವರೆಗೆ ಈ ಲಕ್ಕಿಡ್ರಾ ಯೋಜನೆ ಚಾಲ್ತಿಯಲ್ಲಿ ಇರಲಿದೆ. ನಂತರ ಅದನ್ನು ಡ್ರಾ ಮಾಡಲಾಗುವುದು. ಮೊದಲ ಬಹುಮಾನವಾಗಿ ರೆಫ್ರಿಜರೇಟರ್, ಎರಡನೇ ಬಹುಮಾನವಾಗಿ ವಾಷಿಂಗ್ ಮಷಿನ್ ಮತ್ತು ಮೂರನೇ ಬಹುಮಾನವಾಗಿ ಎಲ್‌ಇಡಿ ಟಿವಿ ಇಡಲಾಗಿದೆ. ಮಾತ್ರವಲ್ಲದೇ ಸಮಾಧಾನಕರ ಬಹುಮಾನವಾಗಿ 10 ಜನರಿಗೆ ಮಿಕ್ಸರ್-ಗ್ರೈಂಡರ್ ನೀಡಲಾಗುವುದು.
ಇದನ್ನೂ ಓದಿ: KSRTC: ಬಸ್ ನಲ್ಲಿ ಪ್ರಯಾಣಿಸುವಾಗ ಜೋರು ಸಂಗೀತ ಹಾಕಿದ್ರೋ ಜೋಕೆ!
ಚಂದ್ರಾಪುರದಲ್ಲಿ 1.93 ಲಕ್ಷ ಜನರು ಕೋವಿಡ್ ಮೊದಲ ಡೋಸ್ ಹಾಗೂ 99 ಸಾವಿರ ಜನ ಎರಡೂ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ. ಇನ್ನೂ ಅನೇಕ ಮಂದಿ ಲಸಿಕೆ ಹಾಕಿಸಿಕೊಳ್ಳಬೇಕಿರುವ ಹಿನ್ನೆಲೆಯಲ್ಲಿ ಈ ಆಫರ್ ನೀಡಲಾಗಿದೆ.