ಬರ್ಮಿಂಗ್ಹ್ಯಾಮ್ (ನ.12): Common Wealth Games: ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಮೊದಲ ಬಾರಿಗೆ ಮಹಿಳಾ ಕ್ರಿಕೆಟ್ (Women Cricket)ತಂಡ ಪಾದರ್ಪಣೆ ಮಾಡುತ್ತಿದೆ.
ಮುಂದಿನ ವರ್ಷದಲ್ಲಿ ( Birmingham) ಬರ್ಮಿಂಗ್ಹ್ಯಾಮ್ ನಲ್ಲಿ ನಡೆಯುವ ಕಾಮನ್ವೆಲ್ತ್ ಗೇಮ್ಸ್ ನಲ್ಲಿ(Indian Women Team) ಭಾರತದ ಮಹಿಳಾ ತಂಡ ಆರಂಭಿಕ ಪಂದ್ಯದಲ್ಲಿ( India V/s Australia)ಆಸ್ಟ್ರೇಲಿಯಾ ವಿರುದ್ಧ ಸೆಣಸಲು ಕಾಯುತ್ತಿದೆ.
T20 ಮಾದರಿಯಲ್ಲಿ ಪಂದ್ಯಾವಳಿ:
ಜುಲೈ 29ರಂದು ಈ ಪಂದ್ಯ ನಡೆಯಲಿದ್ದು ಆಗಸ್ಟ್ 7 ರಂದು ಫೈನಲ್ ಹಣಾಹಣಿ ನಿಗದಿಯಾಗಿದೆ ಎಂದು ಟೂರ್ನಿಯ ಆಯೋಜಕರು ತಿಳಿಸಿದ್ದಾರೆ. ಟಿ20 ಮಾದರಿಯಲ್ಲಿ ಮಹಿಳಾ ಕ್ರಿಕೆಟ್ ತಂಡ ಕಾಮನ್ವೆಲ್ತ್ ಗೇಮ್ಸ್ ಪಾದರ್ಪಣೆ ಮಾಡುತ್ತಿದೆ.
1998 ರಲ್ಲಿ ಕ್ವಾಲಂಪುರದಲ್ಲಿ ಪುರುಷರ ಕ್ರಿಕೆಟನ್ನು ಕೊನೆಯ ಬಾರಿ ಆಡಿಸಲಾಗಿತ್ತು.

India Vs Australia:
ವೇಳಾಪಟ್ಟಿಯ ಪ್ರಕಾರ ಜುಲೈ 29ರಂದು ಆಸ್ಟ್ರೇಲಿಯಾ ತಂಡವನ್ನು ಭಾರತ ಎದುರಿಸಲಿದೆ ಹಾಗೂ ಅದೇ ದಿನದಂದು (Pak vs West Indies) ಪಾಕಿಸ್ತಾನವು ವೆಸ್ಟ್ ಇಂಡೀಸ್ ನ ಬಾರ್ಬಡಾಸ್ ವಿರುದ್ಧ ಆಡಲಿದೆ.
ಜುಲೈ 31 ರಂದು ಪಾಕಿಸ್ತಾನ ವಿರುದ್ಧ ಭಾರತ (IndiaVs Pak) ಆಡಲಿದೆ ಹಾಗೂ ಆಗಸ್ಟ್ 31 ರಂದು ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ಪಂದ್ಯ ನಡೆಯಲಿದೆ.
2022ರ ಜುಲೈ 2ರಿಂದ ಎಡ್ಜ್ ಬ್ಯಸ್ಟನ್ ಮಹಿಳಾ T20 ಪಂದ್ಯಗಳು ನಡೆಯಲಿದ್ದು. ಆಗಸ್ಟ್ 17ರಂದು (Bronze and Gold) ಕಂಚು ಮತ್ತು ಚಿನ್ನದ ಪದಕದ ಸುತ್ತಿನ ಪಂದ್ಯಗಳು ನಡೆಯಲಿವೆ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ತಿಳಿಸಿದೆ.