ಬಂಟ್ವಾಳ (ನ.11):Women Empowerment: ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಕೈ ಮೇಲು ಎಂಬಂತೆ ಮಿಂಚುತ್ತಿದ್ದಾರೆ m ಬಸ್ ಓಡಿಸುವುದರಿಂದ ಹಿಡಿದು, ಮೆಟ್ರೋ , ವಿಮಾನಯಾನ ಸೇರಿದಂತೆ ಹಲವೆಡೆ ಮಹಿಳೆಯರು ಸಾಧನೆ ಮಾಡುತ್ತಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಡೇಶ್ವಲ್ಯ ಗ್ರಾಮ ಪಂಚಯತ್ ಸ್ವಚ್ಛ ಸಂಕೀರ್ಣದ ತ್ಯಾಜ್ಯ ಸಂಗ್ರಹಣ ವಾಹನಕ್ಕೆ ಮಹಿಳೆಯರು ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ರಾಜ್ಯದ ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಯೂ ವಾಹನಗಳ ಮೂಲಕ ತ್ಯಾಜ್ಯ ಸಂಗ್ರಹಣೆ ಕಡ್ಡಾಯಗೊಳಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿವಿಧ ಮಹಿಳಾ ಒಕ್ಕೂಟಗಳು ಕೆಲಸ ಮಾಡುತ್ತಿದ್ದರೂ, ಮಹಿಳೆಯರ ಬಾನ ಚಲಾಯಿಸುತ್ತಿರುವುದು ಇದೇ ಮೊದಲು.

ಮಾತೃ ಸಂಜೀವಿನಿ ಒಕ್ಕೂಟ:
ಗ್ರಾಮದ ಮಾತೃ ಸಂಜೀವಿನಿ ಒಕ್ಕೂಟವು ಸ್ವಚ್ಛ ಸಂಕೀರ್ಣ ಘಟಕದ ನಿರ್ವಹಿಸುವ ಬಗ್ಗೆ ಒಪ್ಪಂದ ಮಾಡಿಕೊಂಡಿತ್ತು. ಈ ಬಗ್ಗೆ ಪ್ರಾಯೋಗಿಕ ಕಾರ್ಯಾಚರಣೆ ಆರಂಭಗೊಂಡಿದ್ದು, ಪ್ರಾರಂಭ ಹಂತದಲ್ಲಿ ಒಕ್ಕೂಟಕ್ಕೆ ಗ್ರಾಮ ಪಂಚಾಯಿತಿಯಿಂದ ಪ್ರತಿ ತಿಂಗಳಿಗೆ ಮೂವತ್ತು ಸಾವಿರ ರೂಪಾಯಿಗಳು ನೀಡಲಾಗುತ್ತದೆ.
ಜೊತೆಗೆ ತ್ಯಾಜ್ಯ ಸಂಗ್ರಹದ ಶುಲ್ಕದ ಸಂಗ್ರಹವನ್ನು ಒಕ್ಕೂಟವೇ ಮಾಡಲಿದೆ. ಪ್ರಸುತ್ತ ಗ್ರಾಮದ ಮುಂಗುರೂ ನಿವಾಸಿಯಾದ ಪ್ರಮೀಳಾ ಹಾಗೂ ಪೆರ್ಲಾಪು ನಿವಾಸಿಯಾದ ಲಕ್ಷ್ಮಿ ಅವರು ಪ್ರಸ್ತುತ ತರಬೇತಿ ಪಡೆದು, ಚಾಲನಾ ವೃತ್ತಿ ನಿರ್ವಹಿಸುತ್ತಿದ್ದಾರೆ.
ಸ್ವಚ್ಛ ಸಂಗ್ರಹಣ ವಾಹನಕ್ಕೆ ಮಹಿಳೆಯರೇ ಚಾಲಕರು ಇರುವುದು ವಿಶೇಷವಾಗಿದೆ. ಗ್ರಾಮ ಪಂಚಾಯತ್ ಮಾತು ಸಂಜೀವಿನಿ ಒಕ್ಕೂಟದ ಜೊತೆ ಪ್ರಾರಂಭಿಕ ಹಂತವಾಗಿ ಪ್ರೋತ್ಸಾಹಧನವನ್ನು ನೀಡುತ್ತಾರೆ ಎಂದು ಗ್ರಾಮ ಪಂಚಾಯಿತಿ ಪಿಡಿಓ ಸುನಿಲ್ ಕುಮಾರ್ ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಚಾಲಕಿಯರು, ತ್ಯಾಜ್ಯ ಸಂಗ್ರಹಣೆ ವಾಹನದ ಚಾಲನೆ ತೃಪ್ತಿ ತಂದಿದೆ. ಸ್ವ ಇಚ್ಚೆಯಿಂದ ಈ ಕೆಲಸದಲ್ಲಿ ತೊಡಗಿದ್ದೇವೆ. ಬೆ.9.30 ರಿಂದ ಮ.2 ರ ವರಗೆ ಕೆಲಸ ಮಾಡುತ್ತೇವೆ. ಒಂದು ವಾಹನಕ್ಕೆ ಇಬ್ಬರು ಚಾಲಕಿಯರು ಇದ್ದೇವೆ, ಒಟ್ಟು ನಾಲ್ವರು ಘಟಕದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಚಾಲಕಿಯರಾದ ಪ್ರಮೀಳಾ ಹಾಗೂ ಲಕ್ಷ್ಮಿ ತಿಳಿಸಿದರು.
ಪುರುಷರಂತೆ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ತಮ್ಮ ಸಾಮರ್ಥ್ಯವನ್ನು ತೋರಿಸುತ್ತಿದ್ದಾರೆ ಆರ್ಥಿಕ ಚಟುವಟಿಕೆ ಪ್ರೋತ್ಸಾಹಿಸುವ ದೃಷ್ಟಿಯಿಂದ ಸ್ವಸಹಾಯ ಗುಂಪುಗಳ ಮೇಲೆ ಸ್ವಚ್ಛ ಸಂಖ್ಯೆ ನಗಳನ್ನು ನಿರ್ವಹಣೆಗೆ ನೀಡಲಾಗಿದ್ದು ಚಾಲನ ತರಬೇತಿ ಪಡೆದಿರುವವರಿಗೆ ವಾಹನ ಚಾಲನೆ ಅವಕಾಶವನ್ನು ನೀಡಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ್ ಅವರು ಹೇಳಿದರು.