ಮಂಡ್ಯ: ಸುಮಾರು ಎರಡು ವರ್ಷಗಳಿಂದ ಕೊರೋನಾ ಸಾಂಕ್ರಮಿಕದ ಪ್ರಭಾವ ಎಲ್ಲದರ ಮೇಲೆ ಪರಿಣಮಿಸಿದೆ. ಈಗ ಕೊರೋನಾದ ಪ್ರಭಾವ ಹೈನುಗಾರಿಕೆ ಮೇಲೂ ಪರಿಣಾಮ ಬೀರಿದ್ದು ಉತ್ಪಾದಕರಿಗೆ ಹಾಲಿನ ಬೆಲೆ ಪ್ರತಿ ಲೀಟರ್ ಗೆ 2 ರೂ ಇಳಿಸಲಾಗಿದೆ ಎಂದು manmul dairy ವ್ಯವಸ್ಥಾಪಕ ನಿರ್ದೇಶಕ ಸುತ್ತೋಲೆ ಹೊರಡಿಸಿದ್ದಾರೆ.

ಹೌದು, ಹಾಲು ಉತ್ಪಾದಕರಿಗೆ ಬಿಗ್ ಶಾಕ್ ನೀಡಿದ manmul dairy ವ್ಯವಸ್ಥಾಪಕ ನಿರ್ದೇಶಕರು ಪ್ರತಿ ಲೀಟರ್ ಗೆ 2 ರೂಪಾಯಿ ಇಳಿಸುವ ಬಗ್ಗೆ ಸುತ್ತೋಲೆ ಹೊರಡಿಸಿದ್ದಾರೆ. ದಿನಾಂಕ 9/೧೧/202೧ ರಂದು ನಡೆದ ಒಕ್ಕೂಟ ಸಭೆಯಲ್ಲಿ ಆರ್ಥಿಕ ಪರಿಸ್ಥಿತಿಯನ್ನು ಕೂಲಂಕಷವಾಗಿ ಅಧ್ಯಯನ ಮಾಡಿ ಪ್ರತಿ ಲೀಟರ್ ಹಾಲಿನ ಬೆಲೆಯನ್ನು ಎರಡು ರೂಪಾಯಿ ಇಳಿಸಲಾಗಿದೆ ಎಂದಿದ್ದಾರೆ.
ಇದನ್ನೂ ಓದಿ: chennai:ಭಾರಿ ಮಳೆಯಿಂದ ನಲುಗಿದ ಚೆನ್ನೈ!
422 ನೇ ಆಡಳಿತ ಮಂಡಳಿಯಲ್ಲಿ ಈ ಕುರಿತು ಸುದೀರ್ಘವಾಗಿ ಚರ್ಚಿಸಿ ಸ್ಥಿತಿಯನ್ನು ಸುಧಾರಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ.
ಸದ್ಯ ಒಕ್ಕೂಟವು ತೀವ್ರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವುದರಿಂದ ದಯವಿಟ್ಟು ರೈತರು ಇದಕ್ಕೆ ಸಹಕರಿಸಬೇಕಾಗಿ ಕೇಳಿಕೊಳ್ಳುತ್ತೇವೆ ಎಂದು ನಿರ್ವಹಣಾಧಿಕಾರಿಗಳು ಮನವಿ ಮಾಡಿದ್ದಾರೆ.