KSRTC New Rules:( ನ.11)ಪ್ರಯಾಣದ ವೇಳೆ (Music)ಸಂಗೀತವನ್ನು ಕೇಳುವುದು ಸಾಮಾನ್ಯ. ಆದರೆ ಇನ್ನು ಮುಂದೆ ಬಸ್ ಪ್ರಯಾಣದಲ್ಲಿ ಜೋರಾಗಿ ಹಾಡು ಕೇಳುವುದನ್ನು(Banned) ನಿಷೇಧಿಸಲಾಗಿದೆ.
ಒಂದು ಬಸ್ಸಿನಲ್ಲಿ 50ಕ್ಕೂ ಹೆಚ್ಚು ಜನರು ಪ್ರಯಾಣಿಸುತ್ತಾರೆ.(Students)ವಿದ್ಯಾರ್ಥಿಗಳು ಸೇರಿದಂತೆ ಎಲ್ಲ ವರ್ಗದ ಪ್ರಯಾಣಿಕರು ಪ್ರಯಾಣಿಸುವ (Journey) ಸಂದರ್ಭದಲ್ಲಿ ಯಾರೊಬ್ಬರೂ ಮೊಬೈಲ್ನಲ್ಲಿ(Loud Music) ಜೋರಾಗಿ ಹಾಡು ಕೇಳಿಕೊಂಡು ಹೋಗುವುದು ಮತ್ತೊಬ್ಬರಿಗೆ (Disturbance) ಕಿರಿಕಿರಿಯಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರಯಾಣಿಕರ ಹಿತ ಕಾಪಾಡುವುದು (KSRTC)ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಉದ್ದೇಶವಿದೆ.

ಜೋರಾಗಿ ಹಾಡು ಕೇಳುವುದು ನಿಷೇಧ:
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮವು ಹೊಸ (Circular)ಸುತ್ತೋಲೆಯನ್ನು ಹೊರಡಿಸಿದೆ. ಬಸ್ ಪ್ರಯಾಣದ ವೇಳೆ ಜೋರಾಗಿ ಶಬ್ದ ಮಾಡುವುದು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಪ್ರಯಾಣದ ವೇಳೆ (Cinema Songs)ಸಿನಿಮಾ ಹಾಡು ಮುಂತಾದವುಗಳನ್ನು ಜೋರಾಗಿ ಹಾಕುವಂತಿಲ್ಲ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಸುತ್ತೋಲೆಯಲ್ಲಿ ಏನಿದೆ?
ಸಾರ್ವಜನಿಕ ಪ್ರಯಾಣಿಕರಿಗೆ ಉತ್ತಮ(Quality of Service) ಗುಣಮಟ್ಟದ ಸಮರ್ಪಕ ಸುರಕ್ಷಿತ ಸಾರಿಗೆ ಸೌಲಭ್ಯವನ್ನು ಒದಗಿಸುತ್ತದೆ. ಈ ನಿಟ್ಟಿನಲ್ಲಿ ವಿವಿಧ ಮಾದರಿಯ ಸಾರಿಗೆ(Service) ಸೇವೆಗಳು ರಾಜ್ಯದೊಳಗೆ ಹಾಗೂ (Interstate) ನೆರೆಹೊರೆಯ ಅಂತರ್ರಾಜ್ಯ ಪ್ರದೇಶಗಳಲ್ಲಿ ಕಲ್ಪಿಸಲಾಗಿದೆ.
ಮೊಬೈಲ್ ಹಾಗೂ ದೂರವಾಣಿ ಮೇಲೆ ಅವಲಂಬಿತರಾಗಿ(Mobile) ಮೊಬೈಲ್ ,ದೂರವಾಣಿ ಬಳಕೆ ದಿನದಿನ ಹೆಚ್ಚಾಗುತ್ತಿದೆ.ಸಾರ್ವಜನಿಕರು ಮೊಬೈಲ್ನಲ್ಲಿ ಜೋರಾಗಿ(Songs, Poem, News, Cinema) ಹಾಡು, ಪದ್ಯ ,ವಾರ್ತೆ, ಸಿನಿಮಾ ಇತ್ಯಾದಿ ಹಾಕುತ್ತಿದ್ದು ಇದರಿಂದ(Noise Pollution) ಶಬ್ದ ಮಾಲಿನ್ಯ ಹಾಗೂ ಇತರ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ.

ನಿಯಮ ಮೀರಿದರೆ ಏನಾಗುತ್ತದೆ?
ಕರ್ನಾಟಕ ಮೋಟಾರು ವಾಹನಗಳ ನಿಯಮ 1989 94(1)(V) ಉಲ್ಲಂಘಿಸಿ ನಿಗಮದ ಬಸ್ಸುಗಳಲ್ಲಿ ಪ್ರಯಾಣಿಕರು ಮೊಬೈಲ್ ದೂರವಾಣಿ ಮೂಲಕ ಜೋರಾಗಿ ಶಬ್ದ ಕೇಳಿಬಂದರೆ,(Drivers, Conductor) ಕರ್ತವ್ಯನಿರತ ಚಾಲನಾ ಸಿಬ್ಬಂದಿಗಳು ಪ್ರಯಾಣಿಕರಿಗೆ (Inform)ತಿಳುವಳಿಕೆ ನೀಡಬೇಕು.
ನಿಯಮ ಮೀರಿ (rules Violations) ಉಲ್ಲಂಘನೆ ಮಾಡಿದಲ್ಲಿ ಪ್ರಯಾಣಿಕರನ್ನು ನಿಯಮಾನುಸಾರ ಚಾಲಕ ಅಥವಾ-ನಿರ್ವಾಹಕ ಬಸ್ಸಿನಿಂದ (Get-down)ಕೆಳಗೆ ಇಳಿಸುವುದು ಅಥವಾ ಅವರು ಇಳಿಯುವವರೆಗೂ ವಾಹನವನ್ನು ನಿಲ್ಲಿಸಲಾಗಾಗುತ್ತದೆ. ಪ್ರಯಾಣಿಕರಿಗೆ ಪ್ರಯಾಣದರವನ್ನು(Bus Fare) ಹಿಂದಿರುಗಿಸುವುದಿಲ್ಲ ಎಂದು ಸುತ್ತೋಲೆಯಲ್ಲಿ ಉಲ್ಲೇಖಿತವಾಗಿದೆ.
ಪ್ರಯಾಣಿಕರು ಸಾಕಷ್ಟು ನಿಯಮಗಳನ್ನು (Follow Rules) ಪಾಲಿಸಿ ಇತರ ಪ್ರಯಾಣಿಕರಿಗೂ, ತೊಂದರೆಯಾಗದಂತೆ ಎಚ್ಚರವಹಿಸಬೇಕು ಎಂದು ಸಂಸ್ಥೆ ತಿಳಿಸಿದೆ.