ನವದೆಹಲಿ( ನ.11)Medicine Price Hike: ಭಾರತ ದೇಶದಲ್ಲಿ(House hold) ಗೃಹಬಳಕೆ ವಸ್ತುಗಳು ಸೇರಿದಂತೆ ಇನ್ನಿತರ ಎಲ್ಲ ವಸ್ತುಗಳ ಬೆಲೆ ಗಗನಕ್ಕೇರಿರುವ ಹಿನ್ನೆಲೆಯಲ್ಲಿ ಔಷಧಿಗಳ(Medicine Price Hiking) ಬೆಲೆಯನ್ನು ಶೇ.20 ರಷ್ಟು ಹೆಚ್ಚಳ ಮಾಡಬೇಕು ಎಂದು ಸರ್ಕಾರವನ್ನು ಔಷಧ ತಯಾರಿಕರ ಗುಂಪು ಕೇಳಿಕೊಂಡಿದೆ.
ಕೊರೋನಾ ನಂತರ ಇಂಧನ ಬೆಲೆಗಳ(Fuel Price) ದರ ಏರಿಕೆಯಾಗಿ ಜನಸಾಮಾನ್ಯರು ಸಂಕಷ್ಟಕ್ಕೆ ಒಳಗಾಗಿದ್ದರು. ಲಾಕ್ಡೌನ್ (Lockdown)ಬಳಿಕ ಚೇತರಿಸಿಕೊಂಡಿರುವ ಜನಸಾಮಾನ್ಯರರಿಗೆ ಔಷಧಿಗಳ ಬೆಲೆ ಏರಿಕೆಯಾದರೆ ಮತ್ತಷ್ಟು ಆತಂಕಕ್ಕೆ ಒಳಗಾಗುವ ಸಾಧ್ಯತೆಗಳಿವೆ.
ಏರುತ್ತಿರುವ ಔಷಧ ಉತ್ಪಾದನಾ ವೆಚ್ಚ:
ದೇಶದ ಔಷಧ ಕ್ಷೇತ್ರದಲ್ಲಿ ಔಷಧ ಉತ್ಪಾದನಾ ವೆಚ್ಚ ಏರಿಕೆಯಾಗುತ್ತಿದೆ. ಇದರಿಂದ ತತ್ತರಿಸಿ ಹೋಗಿರುವ(Pharmaceutical Company) ಔಷಧ ಉತ್ಪಾದಕ ಕಂಪನಿಗಳು ಈಗ (Non Schedule)ನಾನ್ ಷೆಡ್ಯೂಲ್ಡ್ ಮತ್ತು ಷೆಡ್ಯೂಲ್ಡ್ ಔಷಧಗಳ ಬೆಲೆಯನ್ನು ಏರಿಕೆ ಮಾಡಲು ಅನುಮತಿ ನೀಡಬೇಕೆಂದು ಕೇಂದ್ರ ಸರ್ಕಾರವನ್ನು ಕೋರಿವೆ.
ಭಾರತದಲ್ಲಿ ಔಷಧ ಉದ್ಯಮ(Medical Business) ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇನ್ಪುಟ್ ವೆಚ್ಚಗಳಿಂದ ತತ್ತರಿಸಿದೆ. ಇದರಿಂದ ನಾನು ಶೆಡ್ಯೂಲ್ ಔಷಧಿಗಳ ಬೆಲೆಯನ್ನು (Annual)ವಾರ್ಷಿಕವಾಗಿ ಶೇ 20ರಷ್ಟು ಹೆಚ್ಚಿಸಲು ಕೇಂದ್ರ ಸರ್ಕಾರ ಅನುಮತಿ (Permission) ನೀಡಬೇಕೆಂದು (Manufacturing Company)ಔಷಧ ತಯಾರಕರು ಮನವಿ ಸಲ್ಲಿಸಿದ್ದಾರೆ.

ಪ್ಯಾಕೇಜಿಂಗ್ ವಸ್ತುಗಳ ಬೆಲೆಯೇರಿಕೆ:
ಆರಂಭಿಕ ಸಾಮಗ್ರಿಗಳು,(Packaging, Transportation) ಪ್ಯಾಕೇಜಿಂಗ್ ವಸ್ತುಗಳು ಮತ್ತು ಸಾರಿಗೆ ವೆಚ್ಚಗಳು ಸೇರಿದಂತೆ ಎಲ್ಲಾ ವೆಚ್ಚಗಳು ಏರಿಕೆಯಾಗಿರುವುದು ಇನ್ ಫುಟ್ ವೆಚ್ಚದ ಮೇಲೆ ಪರಿಣಾಮ ಬೀರಿದೆ ಎಂದು ಇಂಡಿಯನ್ ಡ್ರಗ್ಸ್ ಮಾನ್ಯುಫ್ಯಾಕ್ಚರಿಂಗ್ ಅಸೋಸಿಯೇಷನ್( IDMA) ತಿಳಿಸಿದೆ.
ಮ್ಯಾನುಫ್ಯಾಕ್ಚರಿಂಗ್ ಕಂಪನಿಗಳು ಹೇಳುವುದೇನು?
ಔಷಧ ಬೆಲೆ ನಿಯಂತ್ರಣ ಆದೇಶದ (DPCO) ಪ್ಯಾರಾ 19 ರ ಅಡಿಯಲ್ಲಿ ವಿಶೇಷ ಅಧಿಕಾರವನ್ನು ಬಳಸಿ “ಒಂದು ಬಾರಿ ಬೆಲೆ ಏರಿಕೆಗೆ” ಅವಕಾಶ ಕೊಡಬೇಕೆಂದು(Drugs) ಡ್ರಗ್ಸ್ ಮ್ಯಾನ್ಯುಫ್ಯಾಕ್ಚರಿಂಗ್ ಕಂಪನಿಗಳು ಕೋರಿವೆ.
ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ, ನೀತಿ ಆಯೋಗ, ಔಷಧೀಯ ಇಲಾಖೆ ಕಾರ್ಯದರ್ಶಿ ಮತ್ತು ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರದ(NPPA) (ಎನ್‌ಪಿಪಿಎ) ಅಧ್ಯಕ್ಷರಿಗೆ ನೀಡಿದ ಮನವಿ ಪತ್ರದಲ್ಲಿ ಔಷಧಗಳ ಬೆಲೆಯನ್ನು ಶೇ. 20ರಷ್ಟು ಹೆಚ್ಚಳಕ್ಕೆ ಮನವಿ ಮಾಡಲಾಗಿದೆ.

ಶೇ 10 ರಷ್ಟು ಏರಿಕೆಗೆ ಮನವಿ:
ಅಸಾಧಾರಣ ಸಂದರ್ಭದ ಕಾರಣಕ್ಕಾಗಿ ಕಂಪನಿಗಳು(Non Schedule) “ನಾನ್ ಷೆಡ್ಯೂಲ್ಡ್ ಔಷಧಗಳಿಗೆ ನೀಡಲಾಗಿರುವ ಶೇ.10ರ ಬೆಲೆ ಹೆಚ್ಚಳದ ಮೇಲೆ ಮತ್ತೆ ಶೇ.10ರಷ್ಟು ಬೆಲೆ (Price hike)ಹೆಚ್ಚಳಕ್ಕೆ ಅನುಮತಿ ನೀಡಬೇಕೆಂದು” ಒತ್ತಾಯಿಸಿವೆ.
ಷೆಡ್ಯೂಲ್ ಔಷಧಗಳ ಉತ್ಪಾದಕರು(Manufacture) ಬೆಲೆ ಕುಸಿತ ಹಾಗೂ ಉತ್ಪಾದನಾ ವೆಚ್ಚ ಹೆಚ್ಚಳದಿಂದ ತೊಂದರೆಗೊಳಗಾಗಿದ್ದಾರೆ ಎಂದು ಔಷಧ ತಯಾರಕರು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ ಮನವಿ(Requesting Letter) ಪತ್ರದಲ್ಲಿ ತಿಳಿಸಿದ್ದಾರೆ.
ಔಷಧಕ್ಕೆ ತಯಾರಾಗುವ ಸಾಮಗ್ರಿಗಳ ಬೆಲೆ:
IDMA ಪ್ರಕಾರ ಕೆಲವು ಪ್ರಮುಖ ಔಷಧ ಕಚ್ಚಾವಸ್ತುಗಳ ಬೆಲೆಗಳು ಶೇ. 15ರಿಂದ ಶೇ. 130ರಷ್ಟು ಹೆಚ್ಚಾಗಿವೆ. (Paracetamol) ಪ್ಯಾರಸಿಟಮಾಲ್ ಕಚ್ಚಾವಸ್ತುವಿನ ಬೆಲೆ ಶೇ. 130ರಷ್ಟು ಏರಿಕೆಯಾಗಿದೆ. ಔಷಧಗಳ ತಯಾರಿಸುವ ಸಹಾಯಕ ಪದಾರ್ಥಗಳ ಬೆಲೆಗಳು ಶೇ. 18ರಿಂದ ಶೇ.262ರಷ್ಟು ಏರಿಕೆಯಾಗಿದೆ.
(Glycerin) ಗ್ಲಿಸರಿನ್ ಮತ್ತು(Propylene glycol, Syrup ,oral Drop, Sterile) ಪ್ರೊಪಿಲೀನ್ ಗ್ಲೈಕಾಲ್, ಸಿರಪ್‌ಗಳು, ಓರಲ್ ಡ್ರಾಪ್ ಮತ್ತು ಸ್ಟೆರೈಲ್ ಸಿದ್ಧತೆಗಳು ಸೇರಿದಂತೆ ಪ್ರತಿಯೊಂದು ದ್ರವ ತಯಾರಿಕೆಯಲ್ಲಿ ಬಳಸುವ ದ್ರಾವಕಗಳ ಬೆಲೆಗಳು ಕ್ರಮವಾಗಿ ಶೇ. 263 ಮತ್ತು 83ರಷ್ಟು ಏರಿಕೆಯಾಗಿದೆ.
ಈ ಬಗ್ಗೆ ಸರ್ಕಾರ ಮಧ್ಯಪ್ರವೇಶ ಮಾಡಿ ಬೆಲೆ ಏರಿಕೆಗೆ ಅನುಮತಿ ನೀಡುವಂತೆ ಕೋರಿದೆ. ವ್ಯಾಪಾರದಲ್ಲಿ ಲಾಭಾಂಶ ಕುಸಿತದಿಂದ (Storage)ದಾಸ್ತಾನು ಖಾಲಿಯಾಗಿ,(Business) ವ್ಯಾಪಾರ, ಆಸ್ಪತ್ರೆ, ಸರ್ಕಾರಿ ಸಂಸ್ಥೆಗಳಿಗೆ ಪೂರೈಸುವ ಔಷಧಿಗಳ ಕೊರೆತೆಗೆ ಕಾರಣವಾಗಬಹುದು ಎಂದು(Medicine Manufacturing) ಔಷಧ ತಯಾರಕರಿಗೆ ಆತಂಕ ಎದುರಾಗಿದೆ.