ವಾಯ್ನಾಡು (ಕೇರಳ) : ದಕ್ಷಿಣ ಭಾರತ (South India) ದಲ್ಲಿ ಗಾಡ್ಸ್ ಓನ್ ಕಂಟ್ರಿ (God’s Own Country) ಅಂತಲೇ ಪ್ರಸಿದ್ಧಿಯಾದ ಕೇರಳ (Kerala) ದಲ್ಲಿ ಕೆಲವೊಮ್ಮೆ ತರ್ಕಕ್ಕೆ ನಿಲುಕದ (Mysteries) ಸಂಗತಿಗಳು ನಡೆಯುತ್ತಿರುತ್ತವೆ. ಆಧುನಿಕ ತಂತ್ರಜ್ಞಾನ (Modern Technology), ಆಧುನಿಕ ಮಾನವನು ಸಹ ಕೆಲವೊಮ್ಮೆ ಭೇಧಿಸಲು ಸಾಧ್ಯವಾಗದ ರೀತಿಯಲ್ಲಿ ವಾತಾವರಣದಲ್ಲಿ ಹಲವು ಘಟನೆಗಳು ಸಂಭವಿಸುತ್ತವೆ.

ಇದೇ ರೀತಿಯ ಘಟನೆ ಕೇರಳದಲ್ಲಿ ಜುಲೈ 25. 2001 ರ ಬೆಳಗಿನ ಜಾವ ನಡೆದಿತ್ತು. ಆ ಘಟನೆ ಕುರಿತು ಹಲವರು ಹಲವು ರೀತಿಯ ವಿವರಣೆ ಕೊಟ್ಟರೂ ಯಾರೊಬ್ಬರು ಕೂಡ ವೈಜ್ಞಾನಿಕ (Scientific) ವಾಗಿ ಸಾಭೀತು ಮಾಡಲಾಗದ್ದರಿಂದ ಇದೊಂದು ಬಗೆಹರಿಸಲಾಗದ ಕುತೂಹಲಕಾರಿ ವಿಷಯ (Unsolved Mysteries) ಗಳಲ್ಲಿ ಒಂದಾಗಿ ಉಳಿದು ಬಿಟ್ಟಿದೆ. ಈ ಘಟನೆಯೇ ಕೆಂಪು ಮಳೆ (Red Rain) ಅಥವಾ ರಕ್ತದ ಮಳೆ (Blood Rain) ಎಂದು ಸ್ಥಳಿಯರು ಹೇಳುತ್ತಾರೆ.
ಇತಿಹಾಸ (History) ವನ್ನು ಕೆದಕುತ್ತ ಹೋದರೆ ಪ್ರಪಂಚದಾದ್ಯಂತ (Worldwide) ಹಲವು ಪ್ರದೇಶಗಳಲ್ಲಿ ಇಂತಹ ಕೆಂಪು ಮಳೆ ಬಿದ್ದ ಬಗ್ಗೆ ವರದಿಯಾಗಿದೆ. ಭಾರತದಲ್ಲಿ ಈ ವಿದ್ಯಮಾನ ಕೇರಳದಲ್ಲಿ ಸಂಭವಿಸಿದ್ದು ಆಕಾಶದಿಂದ ಬಿದ್ದ ಕೆಂಪು ಮಳೆ ಒಣಗಲು ಹಾಕಿದ್ದ ಬಟ್ಟೆಗಳ ಮೇಲೆ ಕೆಂಪು ಕಲೆ ಉಂಟು ಮಾಡಿತ್ತು. ಆ ದಿನಗಳಲ್ಲಿ ಮನೆ ಮುಂದೆ ಹರಿಯುವ ಮಳೆನೀರು ಸೇರಿದಂತೆ ನದಿ-ಸರೋವರಗಳು ಕೆಂಪು ಬಣ್ಣಕ್ಕೆ ತಿರುಗಿದ್ದವು.

ಆಕಾಶದಲ್ಲಿ ಸಂಭವಿಸಿದ ಉಲ್ಕೆ ಸ್ಪೋಟದಿಂದಾಗಿ ಈ ರೀತಿ ಆಗಿರಬಹುದು ಎಂದು ಆರಂಭಿಕ ಸಂಶೋಧನೆ ಮಾಡಿದ್ದ ತಜ್ಞರು ಹೇಳಿಕೆ ನೀಡಿದ್ದರು. ಭಾರತ ಸರ್ಕಾರ ಅಂದು ಈ ವಿದ್ಯಮಾನದ ಬಗ್ಗೆ ಅಧ್ಯಯನ ನಡೆಸಲು ಭಾರತೀಯ ಭೂ ವಿಜ್ಞಾನ ಅಧ್ಯಯನ ಕೇಂದ್ರ (Tropical Botanic Garden and Research Institute) ತಂಡವನ್ನು ಮಳೆ ಬಿದ್ದ ಪ್ರದೇಶಕ್ಕೆ ಕಳುಹಿಸಿ ಕೊಟ್ಟಿತ್ತು. 2006 ರಲ್ಲಿ ಲೂಯೀಸ್ ಮತ್ತು ಆತನ ಸ್ನೇಹಿತ ಸಂತೋಷ್ ಕುಮಾರ ಎಂಬುವರು ಪತ್ರಿಕೆಯೊಂದರಲ್ಲಿ ಈ ಕುರಿತು ವರದಿಯನ್ನು ಪ್ರಕಟಿಸಿದ್ದರು. ಅವರ ಪ್ರಕಾರ ಆ ಮಳೆಯ ನೀರನ್ನು ಮೈಕ್ರೋಸ್ಕೋಪ್ (Micro Scope) ನಲ್ಲಿ ಪರೀಕ್ಷಿಸಿದಾಗ ಮಾನವನ ರಕ್ತದಲ್ಲಿರುವ ರಕ್ತಕಣ (Blood Cell) ಗಳ ಮಾದರಿಯಲ್ಲಿಯೇ ಕೆಂಪು ಮತ್ತು ಕಂದು ಬಣ್ಣದ ಜೀವಂತ ಕೋಶಗಳು ಪತ್ತೆಯಾಗಿದ್ದವು.
ಈ ಕೆಂಪು ಮಳೆಯ ಬಗ್ಗೆ ಅಧ್ಯಯನ ಮಾಡಿದ ಪ್ರತಿಯೊಬ್ಬರು ತಮ್ಮ ತಮ್ಮ ನಿಲುವುಗಳನ್ನು ತಿಳಿಸಿದ್ದಾರೆ. ಆದರೆ ಕೊನೆಯಲ್ಲಿ ಯಾವುದಕ್ಕೂ ವೈಜ್ಞಾನಿಕ ಧೃಡೀಕರಣಗಳು ಸಿಗದೇ ಈ ವಿದ್ಯಮಾನ ಇಂದಿಗೂ ಕುತೂಹಲಕಾರಿಯಾಗಿಯೇ ಇದೆ.