ಬೆಳಗಾವಿ(ನ.10): Food Warehouse: ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ (The Department of Food, Civil Supplies & Consumer Affairs ) ಸೇರಿದ (Food Storage)ಆಹಾರ ಸಂಗ್ರಹಣಾ ಉಗ್ರಾಣದಲ್ಲಿ ಅಧಿಕಾರಿಗಳ ನಿರ್ಲಕ್ಷದಿಂದ ಆಹಾರಗಳು ಪ್ರಾಣಿಗಳ ಪಾಲಾಗುತ್ತಿದೆ.
ಹಂದಿಗಳ ಪಾಲಾಗುತ್ತಿವೆ ಪಡಿತರ:
ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿರುವ (Belagavi, Athani) ರಾಜ್ಯ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಲ್ಲಿ (Ration)ಪಡಿತರ ಅಕ್ಕಿಯನ್ನು(Pigs) ಹಂದಿಗಳು ಬಂದು ತಿನ್ನುತ್ತದೆ.
ಹಾಡಹಗಲೇ ಉಗ್ರಾಣದ ಪ್ರವೇಶದ್ವಾರಕ್ಕೆ ನುಗ್ಗಿ ಪ್ರವೇಶ ದ್ವಾರದ ಬಳಿಯಿರುವ (Rice)ಅಕ್ಕಿ ಮೂಟೆಗಳನ್ನು ತನ್ನ ದವಡೆಯಿಂದ ಮೂಟೆಗಳನ್ನು ಬಿಚ್ಚಿ, ಹಂದಿಗಳು ಅಕ್ಕಿಯನ್ನು ತಿಂದು ಹೋಗುತ್ತೇವೆ.

ಉಗ್ರಣವನ್ನು ನೋಡಿಕೊಳ್ಳುವವರಿಲ್ಲ?
ಹಂದಿಗಳನ್ನು ಓಡಿಸಲು ಉಗ್ರಾಣದಲ್ಲಿ(No Security) ಯಾರು ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಹಗಲಿನಲ್ಲೇ ಹಂದಿಗಳು ಬರುತ್ತವೆ ಎಂದರೆ ರಾತ್ರಿ ಹೊತ್ತು(Theft) ಕಳ್ಳರು ಬಂದು ಹೊತ್ತು ಹೋದರೂ,ತಡೆಯುವವರು ಇಲ್ಲ ಎಂದೇ ಹೇಳಬಹುದು.
ಅಧಿಕಾರಿಗಳ ಬೇಜವಾಬ್ದಾರಿ ಉತ್ತರ:
ಜನರು ಕಟ್ಟಿದ ತೆರಿಗೆ (Tax) ಹಣದಿಂದ ಸಂಬಳ ಪಡೆಯುತ್ತಿರುವ ಅಧಿಕಾರಿಗಳು(Officers) ಇದರ ಬಗ್ಗೆ ಗಮನ ಹರಿಸುತ್ತಿಲ್ಲ. ಉಗ್ರಾಣಗಳ ತುಂಬಾ ಹಂದಿಗಳ ಸಂಸಾರ ಬೀಡುಬಿಟ್ಟಿದ್ದು, ಹಂದಿಗಳು ತಿಂದುಬಿಟ್ಟ ಅಕ್ಕಿಯನ್ನು ಜನರಿಗೆ ಹೇಗೆ ನೀಡುತ್ತಿದ್ದಾರೆ ಎನ್ನುವುದು ಪ್ರಶ್ನೆಯಾಗಿದೆ.
ಅಕ್ಕಿಯನ್ನು ತಿಂದು ಮಲಮೂತ್ರ ವಿಸರ್ಜನೆ ಮಾಡುವುದರ ಜೊತೆಗೆ ಉಗ್ರಾಣ ಪುಂಡ ಪೋಕರಿಗಳಿಂದ ಗಬ್ಬುನಾರುತ್ತಿದೆ. ಇದನ್ನೆಲ್ಲಾ ಅಧಿಕಾರಿಗಳ ಹತ್ತಿರ(Question) ಪ್ರಶ್ನೆ ಮಾಡಿದರೆ, ನಾನೇನು ಹಂದಿ ಕಾಯಲು ಬಂದಿಲ್ಲ ಎಂದು ಬೇಜವಾಬ್ದಾರಿ ಉತ್ತರ ನೀಡುತ್ತಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ರಾಜ್ಯ ರೈತ ಸಂಘದ ಅಥಣಿ ತಾಲೂಕು ಅಧ್ಯಕ್ಷ(Madivala Mahadeva) ಮಹದೇವ ಮಡಿವಾಳ ಅವರು, ಇಂತಹ( Negligence) ನಿರ್ಲಕ್ಷ ತೋರುತ್ತಿರುವ ಬಗ್ಗೆ ಅಧಿಕಾರಿಗಳ ವಿರುದ್ಧ ಸೂಕ್ತ(Law) ಕಾನೂನು ಕ್ರಮ ಕೈಗೊಳ್ಳುವಂತೆ ಮೇಲಾಧಿಕಾರಿಗಳಿಗೆ(Media) ಮಾಧ್ಯಮಗಳ ಮೂಲಕ ಮನವಿ ಮಾಡಿದ್ದಾರೆ.
ಅಥಣಿಯ ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷ(Bahu Saheb Kamble) ಬಾಹು ಸಾಹೇಬ ಕಾಂಬಳೆ ಮಾತನಾಡಿ, ಸುವ್ಯವಸ್ಥೆ ಕಾಪಾಡದೇ ಅಧಿಕಾರಿಗಳ ವಿರುದ್ಧ ಅಥಣಿ ತಾಲೂಕು ದಂಡಾಧಿಕಾರಿಗಳು ಹಾಗೂ ಅಧಿಕಾರಿಗಳ(action) ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಅವರನ್ನು(Suspend) ಅಮಾನತು ಮಾಡಬೇಕೆಂದು ಆಗ್ರಹಿಸಿದ್ದಾರೆ.