ಪ್ರಿಯ ಓದುಗರೇ ಇಂದು ನಾವುಗಳು ಈ ಆಧುನಿಕ ಪ್ರಪಂಚದಲ್ಲಿ ನಮ್ಮೆಲ್ಲ ಮರೆಯಲಾಗದ ಕ್ಷಣಗಳನ್ನು ಸೆರೆ ಹಿಡಿದು ಅವುಗಳು ನೆನಪಾದಾಗ ನೋಡಿ ಆನಂದಿಸಲು ಮುಖ್ಯವಾದ ವಸ್ತುವೊಂದನ್ನು ಬಳಸುತ್ತೇವೆ ಅದುವೇ ಕ್ಯಾಮೆರಾ (Camera) ಅಂದರೆ ಕನ್ನಡದಲ್ಲಿ ಛಾಯಾಗ್ರಹಣ ಪೆಟ್ಟಿಗೆ.

ಇವತ್ತು ನಮ್ಮ ಕೈಲಿರುವ ಫೋನ್‌ಗಳಲ್ಲಿ ಈ ಕ್ಯಾಮೆರಾ ಬಂದಿದೆ ಆದರೆ ದಶಕದ ಹಿಂದೆಯಷ್ಟೇ ನಿಮಗೆ ನಿಮ್ಮ ಫೋಟೋ ಬೇಕು ಅಂದರೆ ಹತ್ತಿರದಲ್ಲಿರುವ ಸ್ಟುಡಿಯೋಗೆ (Photo Studio) ಹೋಗಬೇಕಾಗಿತ್ತು. ನೀವು ಇವತ್ತು ಫೋಟೊ ತೆಗೆಸಿಕೊಂಡರೆ ಅದರೆ ಮುದ್ರಿತ ಪ್ರತಿಯನ್ನು (Photo Print) ಒಂದೆರೆಡು ದಿನ ಆದ ಮೇಲೆ ಕೊಡುತ್ತಿದ್ದರು ಎಂದರೆ ಇಂದಿನ ಜನರೇಶನ್ ಮಕ್ಕಳು ಖಂಡಿತ ಆಶ್ಚರ್ಯಚಕಿತರಾಗುತ್ತಾರೆ. ತಂತ್ರಜ್ಞಾನ (Technology) ಮುಂದುವರೆದಂತೆಲ್ಲ ಕ್ಯಾಮೆರಾಗಳ ಗಾತ್ರ, ಗುಣಮಟ್ಟ ಹಾಗೂ ಸಮಯ ಉಳಿಸುವ ಹಲವಾರು ಅಂಶಗಳನ್ನು ನಾವಿಂದು ನೋಡುತ್ತಿದ್ದೇವೆ.

ಒಂದು ಸಮಯದಲ್ಲಿ ಕ್ಯಾಮೆರಾವನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸಲು ದೊಡ್ಡ ವಾಹನಗಳನ್ನು ಬಳಸುತ್ತಿದ್ದರು. ಆದರೆ ಈಗ ಒಂದು ಸಣ್ಣ ಇರುವೆಯ ಗೂಡಿನಲ್ಲು ಸಹ ನಾವು ಕ್ಯಾಮೆರಾ (Micro Camera) ಕಳಿಸಬಹುದು. ಪ್ರತಿಯೊಬ್ಬರ ಬಳಿ ಇರುವ ಫೋನ್‌ನಲ್ಲಿ (Smart Phone) ಇವತ್ತು ಕ್ಯಾಮೆರ ಇರಲೇಬೇಕು ಅನ್ನುವಷ್ಟರ ಮಟ್ಟಿಗೆ ತಂತ್ರಜ್ಞಾನ ಬೆಳದಿದೆ. ಇವತ್ತಿನ ಈ ವಿಶೇಷ ಲೇಖನದಲ್ಲಿ ನಾವಿಂದು ಕ್ಯಾಮೆರ ಬಗ್ಗೆ ಕುತೂಹಲವಿರುವ ಅನೇಕರಿಗೆ ಬಹಳ ಹಳೆಯ ಕಾಲದ ಕ್ಯಾಮೆರಗಳ ಸಂಗ್ರಹಣೆ ಹೊಂದಿರುವ ಒಂದು ಕ್ಯಾಮೆರ ಸಂಗ್ರಹಾಲಯ (Old Camera Museum) ದ ಬಗ್ಗೆ ತಿಳಿಸುತ್ತೇವೆ.

ಮಹಾರಾಷ್ಟ್ರ (Maharashtra) ದ ಪುಣೆ (Pune) ಯಲ್ಲಿ ಇಂತಹ ಒಂದು ಛಾಯಾಗ್ರಹಣ ಪೆಟ್ಟಿಗೆಯ ಸಂಗ್ರಹಾಲಯವಿದೆ. ಇದನ್ನು ಸ್ಥಾಪಿಸಿದವರು ಫರೀದ್ ಶೇಕ್ (Farid Shaikh) ಎಂಬುವವರು. ತಮ್ಮ ತಂದೆಯವರು ವೃತ್ತಿಯಲ್ಲಿ ಮೂಲತಃ ಛಾಯಾಗ್ರಾಹಕರಾಗಿದ್ದು ಬಹುಶಃ ಇದುವೇ ಇವರ ಈ ಪ್ರೇರಣೆಗೆ ದಾರಿಯಾಯಿತು ಎನ್ನಬಹುದು. ತಮ್ಮ ಹನ್ನೆರಡೆನೇ ವಯಸ್ಸಿನಲ್ಲಿ ಇವರ ತಂಧೆ ಶೇಕ್ ಅವರಿಗೆ ಕ್ಯಾಮೆರವೊಂದನ್ನು ಉಡುಗೊರೆಯಾಗಿ ಕೊಟ್ಟಿದ್ದರಂತೆ. ಅದರಿಂದ ಕೆಲವು ಅದ್ಭುತ ಫೊಟೊಗಳನ್ನು ತೆಗೆದ ಫರೀದ್ ಶೇಕ್ ಅವರಿಗೆ ನಿಧಾನವಾಗಿ ಕ್ಯಾಮೆರಾಗಳ ಬಗ್ಗೆ ಆಸಕ್ತಿ ಬೆಳೆಯಿತು.

ಫರೀದ್ ಶೇಕ್ ಕ್ಯಾಮೆರಾ ಮ್ಯೂಸಿಯಂ ಎಂತಲೇ ಪ್ರಸಿದ್ದಿ ಪಡೆದ ಇವರ ಸಂಗ್ರಹಾಲಯದಲ್ಲಿ ಹಳೆಯ ಕಾಲದಿಂದ ಹಿಡಿದು ಇಂದಿನ ಈ ಆಧುನಿಕ ಕ್ಯಾಮೆರ ಸೇರಿದಂತೆ 3000 ಕ್ಕೂ ಅಧಿಕ ಸಂಗ್ರಹಣೆ ಮಾಡಿದ್ದಾರೆ. ಫೋಟೊಗ್ರಫಿ (Photography) ಇಷ್ಟಪಡುವ ಹಾಗೂ ಕ್ಯಾಮೆರ ಬಗೆಗೆ ಆಸಕ್ತಿಯುಳ್ಳ ಪ್ರತಿಯೊಬ್ಬರು ಈ ಕ್ಯಾಮೆರ ಮ್ಯೂಸಿಯಂ ಗೆ ಭೇಟಿ ಕೊಟ್ಟೆ ಕೋಡುತ್ತಾರೆ. ಸುಮಾರು 200 ವರ್ಷದ ಹಿಂದಿನ ಕ್ಯಾಮೆರ ಕೂಡ ಇವರ ಬಳೀ ಇರುವುದು ವಿಶೇಷ. ಪ್ರಪಂಚದಾದ್ಯಂತ ಸುತ್ತಿ ಬಗೆಬಗೆಯ ಕ್ಯಾಮೆರಾಗಳನ್ನು ಇವರು ಸಂಗ್ರಹಿಸಿದ್ದಾರೆ. ಇವರ ಈ ಕ್ಯಾಮೆರ ಸಂಗ್ರಹಾಲಯ ಏಷ್ಯಾ (Asia) ದಲ್ಲೇ ಅತೀ ದೊಡ್ಡ ಕ್ಯಾಮೆರಾಗಳ ಕಲೇಕ್ಷನ್ (Largest Camera Collection) ಎನ್ನುವ ಖ್ಯಾತಿಯನ್ನು ಸಹ ಪಡೆದಿದೆ.