ಬೆಂಗಳೂರು( ನ.10): National Education Policy 2020: ಕೌಶಲದ (Skill) ಜೊತೆಗೆ(Humanity Value)ಮಾನವೀಯ ಮೌಲ್ಯಗಳು, ಸಂಸ್ಕೃತಿ ಮತ್ತು ಸಂಸ್ಕಾರಗಳನ್ನು(Culture) ನೀಡುವ (Comprehensive Education)ಸಮಗ್ರ ಶಿಕ್ಷಣ ಅಗತ್ಯವಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾದ (Education Minister B C Nagesh)ಬಿ ಸಿ ನಾಗೇಶ್ ಅವರು ಹೇಳಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ( Department of Public Education) ಮತ್ತು ಸಮಗ್ರ ಶಿಕ್ಷಣ ಕರ್ನಾಟಕ ಸಹಯೋಗದಲ್ಲಿ ಬೆಂಗಳೂರಿನ ಜಯನಗರದ ಆರ್ ವಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಇಂದು ನಡೆದ (State Level Education Conference) ರಾಜ್ಯಮಟ್ಟದ ಶೈಕ್ಷಣಿಕ ಸಮ್ಮೇಳನದಲ್ಲಿ ಮಾತನಾಡಿದರು.
ಶಿಕ್ಷಣ ದೇಶದಲ್ಲಿ ಜಾತಿ ವ್ಯವಸ್ಥೆ ಹೋಗಲಾಡಿಸುತ್ತದೆ:
ದೇಶದ ಪ್ರತಿಯೊಬ್ಬ ಪ್ರಜೆಗೆ (education)ಅಕ್ಷರಜ್ಞಾನ ಶಿಕ್ಷಣ ನೀಡುವ ಸರ್ವ ಪ್ರಯತ್ನಗಳು ನಡೆಯುತ್ತಲೇ ಬಂದಿವೆ. ಎಲ್ಲರಿಗೂ ಶಿಕ್ಷಣ ನೀಡುವುದರಿಂದ ದೇಶದಲ್ಲಿ(Caste System) ಜಾತಿ ವ್ಯವಸ್ಥೆ ತಾರತಮ್ಯ ಹೋಗಲಾಡಿಸಬಹುದು ಹಾಗಾಗಿ ಎಲ್ಲರಿಗೂ ಶಿಕ್ಷಣ ಅತ್ಯಗತ್ಯ. ಸರ್ಕಾರಗಳ ಪ್ರಯತ್ನದ ಫಲವಾಗಿ ದೇಶದಲ್ಲಿ (Literacy) ಸಾಕ್ಷರತಾ ಪ್ರಮಾಣ ಏರಿಕೆಯಾಗಿದೆ.
ಶಿಕ್ಷಣದಲ್ಲಿ ಸಂಸ್ಕೃತಿ- ಸಂಸ್ಕಾರ ಮೌಲ್ಯಗಳು ಇರಬೇಕು:
ಇತ್ತೀಚಿನ ದಿನಗಳಲ್ಲಿ (Science – Technology )ವಿಜ್ಞಾನ-ತಂತ್ರಜ್ಞಾನದ ವೇಗ ಹೆಚ್ಚಾಗುತ್ತಿದೆ. ಯಂತ್ರೋಪಕಾರಣ(Machinery) ಬಳಕೆಯಿಂದ ಜನರು ಐಷಾರಾಮಿ (Luxury) ಬದುಕು ನಡೆಸುತ್ತಿದ್ದಾರೆ. ಇದರಿಂದಾಗಿ ಜನರ ಪರಿಶ್ರಮ ಕಡಿಮೆಯಾಗಿ ವ್ಯಕ್ತಿಗಳ ನಡುವಿನ ಅಂತರ ದೂರ ಮಾಡುತ್ತಿದೆ. ಸಂಸ್ಕಾರ-ಸಂಸ್ಕೃತಿ ಮಾನವೀಯ (Value)ಮೌಲ್ಯಗಳನ್ನು ಮರೆತಿರುವ ಕಾರಣ ನಮ್ಮ ಸಮಾಜದಲ್ಲಿ(Social Problems) ಸಮಸ್ಯೆಗಳು ಸೃಷ್ಟಿಯಾಗುತ್ತವೆ ಇದೆ. ಇದರಿಂದ ಹೊರಬರಬೇಕಾದರೆ ಶಿಕ್ಷಣದಲ್ಲಿ ಸಂಸ್ಕೃತಿ-ಸಂಸ್ಕಾರ ಮೌಲ್ಯಗಳು ಅಳವಡಿಸಿಕೊಳ್ಳಬೇಕು.

ವ್ಯಕ್ತಿಯ ಸರ್ವಾಂಗೀಣ ಅಭಿವೃದ್ಧಿಗೆ ಶಿಕ್ಷಣ ಮುಖ್ಯವಾಗಿದೆ.
ಜನರ ಅಗತ್ಯಕ್ಕೆ ತಕ್ಕಂತೆ (education)ಶಿಕ್ಷಣವನ್ನು ನೀಡಬೇಕು ಆರೋಗ್ಯಕರ ಸಮಾಜ ನಿರ್ಮಾಣವಾಗುತ್ತದೆ.ಆರೋಗ್ಯಕರ ಸಮಾಜದ ಮೂಲಕ ಸ್ವಾಭಿಮಾನಿ ವ್ಯಕ್ತಿಗಳನ್ನು ಸೃಷ್ಟಿಸುವ ಶಕ್ತಿ ಶಿಕ್ಷಣಕ್ಕಿದೆ. ಎಂದು ಜನಸಂಘದ ನೇತಾರ ಶಿಕ್ಷಣತಜ್ಞ ಡಾ. ಶಾಂತರಾಜ್ ಮುಖರ್ಜಿಯವರು(Dr.Shantharaj Mukharjee) ದಶಕಗಳ ಹಿಂದೆಯೇ ಹೇಳಿದ್ದರು ಎಂದು ಶಿಕ್ಷಣ ಸಚಿವರು ಹೇಳಿದರು.
ಎನ್ ಇ ಪಿ ಅನುಷ್ಠಾನಗೊಳಿಸಲು ಶಿಕ್ಷಣತಜ್ಞರ ಕಾರ್ಯಪಡೆ ರಚನೆ : ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ (President Atal Bihari Vajpayee )ಅವರು ಕೂಡ ಇದನ್ನೇ ಹೇಳಿದ್ದರು. ಸಂಸ್ಕೃತಿ ಮತ್ತು ವಿಜ್ಞಾನ ಸಮನ್ವಯತೆ ಶಿಕ್ಷಣ ನೀಡುವುದು ಅಗತ್ಯವಾಗಿದೆ. ಎನ್ ಇ ಪಿ 2020 ಯೋಜನೆಯಲ್ಲಿ(NEP 2020) ಎಲ್ಲಾ ಗುರಿ ಹಾಗೂ ಉದ್ದೇಶಗಳನ್ನು ಒಳಗೊಂಡಿದೆ. ರಾಜ್ಯದಲ್ಲಿ ಮುಂದಿನ ವರ್ಷದಿಂದ ಎನ್ ಇ ಪಿ ಅನುಷ್ಠಾನಗೊಳಿಸಲು ಶಿಕ್ಷಣತಜ್ಞರ ಕಾರ್ಯಪಡೆ ರಚಿಸಲಾಗಿದೆ. ಈ ಕುರಿತು ಇಲಾಖೆಯಲ್ಲಿ ಸಾಕಷ್ಟು (Activity )ಚಟುವಟಿಕೆಗಳು ನಡೆಯುತ್ತಿದ್ದು ಸಮಗ್ರ ಶಿಕ್ಷಣದ ದೂರದೃಷ್ಟಿಯಲ್ಲಿ ಕಾರ್ಯನಿರ್ವಹಿಸಲಾಗುತ್ತಿದೆ ಎಂದು ಸಚಿವರು ಹೇಳಿದರು.
ಈ ಸಂದರ್ಭದಲ್ಲಿ ರಾಜ್ಯದ ಎಲ್ಲಾ ಕ್ಷೇತ್ರಶಿಕ್ಷಣಾಧಿಕಾರಿಗಳು, ಡಿಡಿಪಿಐ ಗಳು, ಡಯಟ್ ಪ್ರಾಂಶುಪಾಲರು, ಪದವಿಪೂರ್ವ ಇಲಾಖೆಯ ಉಪನಿರ್ದೇಶಕರು, ನಿರ್ದೇಶಕರು ಮತ್ತು ರಾಜ್ಯ ಕಚೇರಿ ಅಧಿಕಾರಿಗಳು ಸೇರಿದಂತೆ ನಾನೂರಕ್ಕೂ ಹೆಚ್ಚು ಅಧಿಕಾರಿಗಳು ಸಮ್ಮೇಳನದಲ್ಲಿ ಭಾಗವಹಿಸಿದ್ದರು.
ಶಿಕ್ಷಣ ತಜ್ಞರಾದ ಎಂಕೆ ಶ್ರೀಧರ್, ಡಾ ಗುರುರಾಜ ಕರಜಗಿ, ಅಜಿಮ್ ಪ್ರೇಮ್ಜಿ ವಿಶ್ವವಿದ್ಯಾನಿಲಯದ ಪ್ರೊ. ಹೃಷಿಕೇಶ್, ಮತ್ತು ಶಿಕ್ಷಣ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಡಾ. ಎಚ್. ಬಿ ಚಂದ್ರಶೇಖರ್ ಅವರು ಸಮ್ಮೇಳನದಲ್ಲಿ ಎಂಇಪಿ ಕುರಿತು ವಿಷಯವನ್ನು ಮಂಡಿಸಿದರು.