ಡೆನ್ವರ್ (ಸಿಓ, ಯುಎಸ್ಎ) : ಹೌದು ವೀಕ್ಷಕರೇ, ಕಾಡಿನರಾಜ ಸಿಂಹವೊಂದು (Lion) ತನ್ನ ಮರಿ (Lion Cub) ಯನ್ನು ಮೊದಲ ಬಾರಿ ನೋಡಿದಾಗ ಅದರ ಪ್ರತಿಕ್ರಿಯೆ ನೋಡುಗರ ಮನ ಸೆಳೆಯುವಂತೆ ಮಾಡಿತ್ತು. ಪುತ್ರ ವಾತ್ಸಲ್ಯ ಕೇವಲ ಮನುಷ್ಯರಲ್ಲಿ ಮಾತ್ರ ಅಲ್ಲ ಪ್ರಾಣಿಗಳಲ್ಲೂ ಇರುತ್ತದೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿಯಾಯಿತು.

ಅಮೇರಿಕಾದ (America) ಕೊಲರಾಡೋ (Colorado) ರಾಜಧಾನಿ ಡೆನ್ವರ್ (Denver) ನಲ್ಲಿರುವ ಮೃಗಾಲಯ (Zoo) ದಲ್ಲಿ ಟೋಬಿಯಾಸ್ (Tobias) ಮತ್ತು ನೆಲಿಯಾ (Neliah) ಎಂಬ ಹೆಸರಿನ ಸಿಂಹಗಳಿಗೆ ಈ ಮರಿ ಜನಿಸಿದೆ. ಅಧಿಕಾರಿಗಳು ಆ ಮರಿ ಹುಟ್ಟಿದಾಗಿನಿಂದ ಅದರ ತಾಯಿ ನೆಲಿಯಾ ಎಂಬ ಹೆಸರಿನ ಸಿಂಹಿಣಿಯ ಬೋನಿನಲ್ಲಿ ಆ ಮರಿಯನ್ನು ಬಿಟ್ಟಿದ್ದು ಅದರ ತಂದೆಯಾದ ಟೋಬಿಯಾಸ್ ಹೆಸರಿನ ಸಿಂಹವೂ ಕೇವಲ ತನ್ನ ಬೋನಿನ ಮೂಲಕವೇ ನೋಡುತ್ತಿತ್ತು.

ಬರೊಬ್ಬರಿ ಆರು ವಾರಗಳ ನಂತರ ಮೃಗಾಲಯದ ಅಧಿಕಾರಿಗಳು ಆ ಸಿಂಹವನ್ನು ತನ್ನ ಮರಿಯ ಬಳಿ ಬಿಟ್ಟರು. ಆ ತಂದೆ ಮತ್ತು ಮಗನ ಭೇಟಿಯ ಅಪರೂಪದ ವಿಡಿಯೋ (ADORABLE VIDEO: Denver Zoo’s New Lion Cub Meets Dad) ವನ್ನು ಮೃಗಾಲಯದ ಅಧಿಕಾರಿಗಳು ತಮ್ಮ ಸಾಮಾಜಿಕ ಜಾಲತಾಣ (Social Media) ಗಳಲ್ಲಿ ಹಂಚಿಕೊಂಡಿದ್ದು ವಿಶ್ವದಾದ್ಯಂತ ಜನರು ಈ ವಿಡಿಯೋವನ್ನು ನೋಡಿ ಖುಷಿಪಟ್ಟಿದ್ದಾರೆ. ಬಿಡುಗಡೆಗೊಂಡ ಕೆಲವೇ ಘಂಟೆಗಳಲ್ಲಿ ಈ ವಿಡಿಯೋ ಸಕತ್ ವೈರಲ್ ಆಗಿತ್ತು.
ಸದ್ಯ ಹನ್ನೇರೆಡು ಪೌಂಡ್ ತೂಕವಿದ್ದ ಈ ಸಿಂಹದ ಮರಿ ವಿಶ್ವದೆಲ್ಲೇಡೆ ಜನರ ಮನಸ್ಸನ್ನು ಗೆದ್ದಿದೆ. ಆ ಮರಿಗೆ ಆರು ವಾರ ವಯಸ್ಸಾದಾಗ ಮೃಗಾಲಯದವರು ಅದಕ್ಕೊಂದು ಹೆಸರಿಡಲು ನಿರ್ಧರಿಸಿ ಸಾರ್ವಜನಿಕರಿಗೆ ಮೂರು ಆಯ್ಕೆಗಳನ್ನು ನೀಡಿದ್ದರು. ಜನ ಹೆಚ್ಚು ವೋಟ್ ಮಾಡುವ ಹೆಸರನ್ನು ಈ ಸಿಂಹದ ಮರಿಗೆ ಇಡಲಾಗುತ್ತೆ.
– ಮೇರು (Meru) (ಟಾಂಜಾನಿಯಾದ ಪರ್ವತ)
– ಮೊರೆಮಿ (Moremi) (ಬೋಟ್ಸ್ವಾನಾದ ಆಟದ ಮೈದಾನದ ಹೆಸರು)
– ಟಾಟು (Tatu) (ಸ್ವಾಹಿಲಿ ಪದದಲ್ಲಿ ಮೂರು ಎಂಬ ಅರ್ಥ)
ಈ ಮೂರು ಆಯ್ಕೆಗಳಲ್ಲಿ ಜನ ಟಾಟು ಅನ್ನುವ ಹೆಸರಿಗೆ ಅತೀ ಹೆಚ್ಚು ವೋಟ್ ಮಾಡಿದ್ದರಿಂದ ಈಗ ಆ ಸಿಂಹದ ಮರಿಗೆ ‘ಟಾಟು’ ಎಂದು ನಾಮಕರಣ ಮಾಡಲಾಗಿದೆ. ಅಂದ ಹಾಗೆ ನಮ್ಮ ಟಾಟುಗೆ ಈಗ ಅಂದಾಜು ಎರಡು ವರ್ಷ ವಯಸ್ಸು.