ಬೆಂಗಳೂರು : ಖಾಸಗಿ ವಾಹಿನಿ ನಿರೂಪಕ ಅರುಣ್ ಬಡಿಗೇರ್‌ಗೆ ಟ್ವಿಟರ್ ನಲ್ಲಿ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದು ಪತ್ರಿಕೋದ್ಯಮದ ಮೌಲ್ಯಗಳು ಮತ್ತು ತತ್ವಗಳನ್ನು ಹೇಳಿಕೊಟ್ಟಿದ್ದಾರೆ. ಹಿರಿಯ ಸಂಪಾದಕ ಹೆಚ್.ಆರ್ ರಂಗನಾಥ್ ಅವರನ್ನು ಸಮರ್ಥಿಸಿಕೊಳ್ಳುವ ಟ್ವೀಟ್ ಮಾಡಿದ್ದ ಅರುಣ್ ಬಡಿಗೇರ್ ಗೆ ನೆಟ್ಟಿಗರು ಹಿಗ್ಗಾಮುಗ್ಗಾ ಜಾಡಿಸಿದ್ದಾರೆ.
ಮೊನ್ನೆ ನವೆಂಬರ್ 8 ನೋಟ್ ಬ್ಯಾನ್ ಆಗಿ ಐದು ವರ್ಷಗಳು ಪೂರ್ಣವಾಗಿವೆ. ಆ ದಿನದಂದು ಐದು ವರ್ಷದ ಹಳೆಯ ನೋಟಿನಲ್ಲಿ ಚಿಪ್ ಇರುವ ಸುದ್ದಿಯೊಂದು ಪಬ್ಲಿಕ್ ಟಿವಿಯಲ್ಲಿ ಪ್ರಸಾರವಾದ ವಿಡಿಯೋ ತುಣುಕು ವೈರಲ್ ಆಗಿತಿತ್ತು. ಈ ವಿಡಿಯೋದ ಸಮರ್ಥನೆ ನೀಡಲು ಮುಂದಾದ ನಿರೂಪಕ ಅರುಣ್ ಬಡಿಗೇರ ಎರಡು ಟ್ವೀಟ್‌ಗಳನ್ನು ತಮ್ಮ ಖಾಸಗಿ ಖಾತೆಯಿಂದ ಮಾಡಿದ್ದರು.
ಇಂದು ಡಿಮಾನಟೈಜ್ ದಿನ ನನ್ನ ಹಿರಿಯ ಸಹೋದ್ಯೋಗಿ ರಂಗಣ್ಣನವರ ಚಿಪ್ ವೀಡಿಯೋ ಬಗ್ಗೆ ವಿವರಣೆ ನೀಡಲು ಬಯಸುತ್ತೇನೆ ವಾಸ್ತವವಾಗಿ ಚಿಪ್ ಹುಟ್ಟುಕೊಂಡಿದ್ದು ಒಂದು ರಾಜಕೀಯ ಪಕ್ಷದ ವಾಟ್ಸಪ್ ಗ್ರೂಪಲ್ಲಿ ಅದರಲ್ಲಿ ಸಂಸದರು ಹಿರಿಯ ಪತ್ರಕರ್ತ ಮಿತ್ರರು ಎಲ್ಲರೂ ಇದ್ರು ರಾಜೀವ್ ಚಂದ್ರಶೇಖರ್ ಮೊದಲು ಇವಿಷಯ ಪ್ರಸ್ತಾಪ ಮಾಡಿದರು ತದನಂತರ ವಿಶ್ವೇಶ್ವರಭಟ್
— Arun C badiger (@badiger_aruna) November 8, 2021
“ಇಂದು ಡಿಮಾನಟೈಜ್ ದಿನ ನನ್ನ ಹಿರಿಯ ಸಹೋದ್ಯೋಗಿ ರಂಗಣ್ಣನವರ ಚಿಪ್ ವೀಡಿಯೋ ಬಗ್ಗೆ ವಿವರಣೆ ನೀಡಲು ಬಯಸುತ್ತೇನೆ ವಾಸ್ತವವಾಗಿ ಚಿಪ್ ಹುಟ್ಟುಕೊಂಡಿದ್ದು ಒಂದು ರಾಜಕೀಯ ಪಕ್ಷದ ವಾಟ್ಸಪ್ ಗ್ರೂಪ್‌ನಲ್ಲಿ, ಅದರಲ್ಲಿ ಸಂಸದರು, ಹಿರಿಯ ಪತ್ರಕರ್ತ ಮಿತ್ರರು ಎಲ್ಲರೂ ಇದ್ದರು. ರಾಜೀವ್ ಚಂದ್ರಶೇಖರ್ ಮೊದಲು ಈ ವಿಷಯ ಪ್ರಸ್ತಾಪ ಮಾಡಿದರು ತದ ನಂತರ ವಿಶ್ವೇಶ್ವರಭಟ್ ಇದನ್ನು ಪುಷ್ಟಿಕರಿಸಿ ನ್ಯಾಷನಲ್ ಮೀಡಿಯಾ ಬಿತ್ತರಿಸಲಾಗಿದೆ ಎಂದರು.
Neevugalu whatsapp University ya lecturers, professorss, head of the department, vice principal, principal and vc anta prove madi oppikondralla dhanyawadagalu
— Yuvaraja kb (@kb_yuvaraja) November 9, 2021
ಮೊದಲು ಇದನ್ನು ಸುವರ್ಣ ನ್ಯೂಸ್ ವಾಹಿನಿಯ ಸುದ್ದಿ ಸಂಪಾದಕ ಅಜಿತ್ ಹನುಮಕ್ಕನವರ್ ಹೇಳಲಿ ಎಂದು ಚರ್ಚೆ ಆಯಿತು ಆದರೆ ಅವರ ಕಾರ್ಯಕ್ರಮ ಎಡಿಟಿಂಗ್ ಮುಗಿದಿತ್ತು ಹಾಗಾಗಿ ರಂಗಣ್ಣನವರ ಹೆಗಲಿಗೆ ಈ ಜವಾಬ್ದಾರಿ ಕೊಡಲಾಯಿತು ಆಡಳಿತ ಪಕ್ಷದ ನಂಬಲಾರ್ಹ ಮೂಲಗಳಿಂದ ಬಂದಿದ್ದರಿಂದ ರಂಗಣ್ಣ ಸುದ್ದಿ ಆಳಕ್ಕೆ ಹೋಗದೆ ಎಡವಟ್ಟು ಮಾಡಿಕೊಂಡರು” ಎಂದು ಟ್ವೀಟ್ ಮಾಡಿದ್ದರು.
ಅಲ್ಲರೀ ಬಡಿಗೇರ್ ಅವರೇ ರಾಜಕೀಯ ಮುಖಂಡರು ಮತ್ತು ಪತ್ರಿಕೋದ್ಯಮದವರು ಒಂದೇ ವಾಟ್ಸಪ್ ಗ್ರೂಪ್ ನಲ್ಲಿ ಇದ್ದೀರಾ ಅಂದ್ರೆ ಹೆಂಗ್ ಸ್ವಾಮಿ 😂 ಈ ವಿಷಯ ಬಹಿರಂಗ ಪಡಿಸಿದ್ದಕ್ಕೆ ನಾನು ನಿಮಗೆ ಧನ್ಯವಾದ ಹೇಳುತ್ತೇನೆ ಮತ್ತು ಸುವರ್ಣ ನ್ಯೂಸ್ ಗೆ ಮತ್ತು ನಿಮಗೆ ಏನ್ ಸಂಬಂಧ ಇದೆ 😂
— H!H 🌾 (@halliyahuduga22) November 8, 2021
ಹೆಚ್.ಆರ್ ರಂಗನಾಥ್ ಅವರ ಸಮರ್ಥನೆಗೆ ನಿಂತಿದ್ದು ಅರುಣ್ ಬಡಿಗೇರ್ ಗೆ ನೆಟ್ಟಿಗರು ಭಿನ್ನವಾಗೇ ತಿರುಗೇಟು ನೀಡಿದ್ದಾರೆ. ಚಿಪ್ ನೋಟಿನ ವಿಷಯ ಕೈ ಬಿಟ್ಟ ನೆಟ್ಟಿಗರು ರಾಜಕೀಯ ಗ್ರೂಪ್ ನಲ್ಲಿ ಬಂದ ಮಾಹಿತಿಯನ್ನು ಪರಿಶೀಲಿಸದೇ ಪ್ರಸಾರ ಮಾಡಿದ್ದಕ್ಕೆ ತರಾಟೆಗೆ ತೆಗೆದುಕೊಂಡಿದ್ದಾರೆ.
ಅಂತೂ ನೀವೆಲ್ರೂ ಒಂದೇ ವಾಟ್ಸ್ಆಪ್ ಯುನಿವರ್ಸಿಟಿ ವಿಧ್ಯಾರ್ಥಿಗಳೆಂದು ಒಪ್ಪಿಕೊಂಡ್ರಿ ಅಲ್ವಾ..
— jAleel crg (@jaleelcrgmdk) November 9, 2021
“ನೀವೂ ಬಿಜೆಪಿ ವ್ಯಾಟ್ಸಪ್ ಗ್ರೂಪ್ ನಿಂದ ಸುದ್ದಿ ತರುತ್ತೀರಾ?, ಬಿಜೆಪಿಯನ್ನು ಹೊಗಳಲು ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡುತ್ತೀರಿ, ತಲೆಯಲ್ಲಿ ಬಿಜೆಪಿ ಐಟಿ ಸೆಲ್‌ನ ಸಗಣಿ ತುಂಬಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.