ಶಿವಮೊಗ್ಗ: ಸಕ್ರೆಬೈಲು ಆನೆ ಬಿಡಾರದಲ್ಲಿ ಕೆಲ ತಿಂಗಳ ಹಿಂದಷ್ಟೇ ಹುಟ್ಟಿದ ಆನೆಯ ಮರಿಯೊಂದಕ್ಕೆ ಪುನೀತ್ ಎಂಬ ಹೆಸರನ್ನಿಟ್ಟು ಅರಣ್ಯ ಇಲಾಖೆ ನಟ ಪುನೀತ್ ರಾಜ್ ಕುಮಾರ್ ಗೆ ವಿಶೇಷ ರೀತಿಯಲ್ಲಿ ಗೌರವ ಸಲ್ಲಿಸಿದೆ. ಎರಡು ತಿಂಗಳ ಹಿಂದೆ ಸಕ್ರೆಬೈಲಿಗೆ ಭೇಟಿ ಕೊಟ್ಟಿದ್ದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಈ ಪುಟ್ಟ ಮರಿಯಾನೆಯನ್ನು ಮುದ್ದಿಸಿದ್ದರು. ಅದೇ ಕಾರಣಕ್ಕೆ ಈ ಆನೆಮರಿಗೆ ಪುನೀತ್ ಎಂಬ ಹೆಸರನ್ನಿಟ್ಟು ಅರಣ್ಯ ಇಲಾಖೆ ಗೌರವ ಸೂಚಿಸಿದೆ.

ತಾಯಿ ಆನೆ ನೇತ್ರಾಳಿಂದ ಮರಿಯಾನೆಯನ್ನು ಇಂದು ಬೇರ್ಪಡಿಸುವ ಅಂದರೆ ವೀನಿಂಗ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಇದೇ ಸಂದರ್ಭ ಈ ಮರಿಯಾನೆಗೆ ನಾಮಕರಣವನ್ನು ಮಾಡಲಾಗಿದೆ.
ಇದನ್ನೂ ಓದಿ: ರೈತರೊಂದಿಗೊಂದು ದಿನ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಚಾಲೆಂಜಿಂಗ್ ಸ್ಟಾರ್!
ಮುಂಚೆಯೆಲ್ಲಾ ಆನೆಗಳಿಗೆ ದೇವರ ಹೆಸರುಗಳನ್ನು ಸಾಮಾನ್ಯವಾಗಿ ಇಡಲಾಗುತ್ತಿತ್ತು. ಇದೇ ಮೊದಲ ಬಾರಿಗೆ ಚಿತ್ರನಟನ ಹೆಸರನ್ನು ಗೌರವಾರ್ಥವಾಗಿ ಇಡಲಾಗಿದೆ. ಈ ರೀತಿಯಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗೆ ಅರಣ್ಯ ಇಲಾಖೆ ವಿಶೇಷ ಗೌರವ ಸಲ್ಲಿಸಿದೆ.