Tom and Jerry: (ನ.9):ರಾಘವ್ ವಿನಯ್ ಶಿವಗಂಗೆ ನಿರ್ದೇಶನದ (Tom & Jerry)ಟಾಮ್ ಅಂಡ್ ಜೆರಿ ಸಿನಿಮಾದ (Trailer Release) ಟ್ರೈಲರ್ ರಿಲೀಸ್ ಆಗಿದ್ದು, ಭಿನ್ನ ಸಿದ್ಧಾಂತದ ಜೋಡಿಯ ನಡುವಣ ಕಥಾನಕ ಗಮನ ಸೆಳೆಯುತ್ತಿದೆ.
ಚಿತ್ರಕ್ಕೆ U/A ಪ್ರಮಾಣ ಪತ್ರ:
ಫೈಟ್, ಜೋಡಿಗಳ ಡಿಫರೆಂಟ್ (Logic)ಲಾಜಿಕ್ ಮೂಲಕ ಚಿತ್ರದ ಟ್ರೈಲರ್ ಕುತೂಹಲ ಮೂಡಿಸುತ್ತದೆ. ನವೆಂಬರ್ 12ರಂದು ಚಿತ್ರ ರಿಲೀಸ್ ಆಗಲಿದ್ದು, ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ(U/A Certificate) ಯು/ಎ ಪ್ರಮಾಣ ಪತ್ರ ಈಗಾಗಲೇ ಸಿಕ್ಕಿದೆ.
ನಿಶ್ಟಿತ್ ಹಾಗೂ ಚೈತ್ರ ರಾವ್ ಜೋಡಿ:
ಟಾಮ್ ಅಂಡ್ ಜೆರಿ ಚಿತ್ರದಲ್ಲಿ ಗಂಟುಮೂಟೆ ಸಿನಿಮಾ ಖ್ಯಾತಿಯ(Nishith Korodi) ನಿಶ್ಚಿತ್ ಕೊರೊಡಿ, ಮಾಯಾಬಜಾರ್ ಖ್ಯಾತಿಯ ನಾಯಕಿ(Chaitra Rao) ಚೈತ್ರಾ ರಾವ್ ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದಾರೆ.
ಉಳಿದಂತೆ ( Tara, Jai Jagadeesh, Rangayana Raghu, Kaddipudi Chandru, Padmaja Rao, Gunashekhar, Prakash Thumbinaadu)ತಾರಾ, ಜೈ ಜಗದೀಶ್, ರಂಗಾಯಣ ರಘು, ಕಡ್ಡಿಪುಡಿ ಚಂದ್ರು, ಪದ್ಮಜಾ ರಾವ್, ಗುಣಶೇಖರ್, ಪ್ರಕಾಶ್ ತುಂಬಿನಾಡು ಮುಂತಾದವರು ತಾರಾಗಣದಲ್ಲಿ ಇದ್ದಾರೆ.

ಮನಗೆದ್ದ ‘ಹಾಯಾಗಿದೆ ಎದೆಯೊಳಗೆ’ ಸಾಂಗ್:
ರಿದ್ಧಿ ಸಿದ್ಧಿ ಫಿಲಂಸ್ ಬ್ಯಾನರ್ (Riddi Siddi Film Banner)ಅಡಿಯಲ್ಲಿ ಚಿತ್ರ ನಿರ್ಮಾಣ ಮಾಡಲಾಗಿದೆ. ಮ್ಯಾಥ್ಯೂಸ್ ಮನೋಹರ್ ಹಾಡು ಸಂಯೋಜನೆ (Song Composition) ಮಾಡಿದ್ದಾರೆ. ಸಿದ್ ಶ್ರೀರಾಮ್ ಹಿನ್ನೆಲೆ ಗಾಯನ ಮಾಡಿದ್ದಾರೆ. ಈಗಾಗಲೇ “ಹಾಯಾಗಿದೆ ಎದೆಯೊಳಗೆ” (Hayagide Yadeyolage)ಹಾಡು ಇನ್‌ಸ್ಟಾಗ್ರಾಮ್ ರೀಲ್‌ಗಳಲ್ಲಿ (Instgram Reel)ವೈರಲ್ ಆಗಿದ್ದು ಈ ಚಿತ್ರದ ಜನಪ್ರಿಯತೆಯನ್ನು ಹೆಚ್ಚಿಸಿದೆ.
ಚಿತ್ರಕ್ಕೆ ಸಂಕೇತ್ ಛಾಯಾಗ್ರಹಣ:
ಸಿನಿಮಾದ ಇನ್ನೊಂದು ಹಾಡು, (kadal Nee Nannale)ಕಾದಲ್ ನೀ ಅನ್ನಲೆ ಕೂಡಾ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ. ಚಿತ್ರಕ್ಕೆ ಛಾಯಾಗ್ರಹಣವನ್ನು(Sanketh Photography) ಸಂಕೇತ್ ಮಾಡಿದ್ದಾರೆ.
ಟ್ರೈಲರ್ ನೋಡಿದ ಪ್ರೇಕ್ಷಕರಿಂದ ಮೆಚ್ಚುಗೆ ಮಾತುಗಳು ವ್ಯಕ್ತವಾಗುತ್ತಿದ್ದು, (Movie Release )ಚಿತ್ರದ ಬಿಡುಗಡೆಗೆ ಕಾಯುವಂತೆ ಮಾಡಿದೆ.