Shankar Nag Birthday (ನ:9) : ಆಟೋರಾಜ ಎಂದರೇ ನೆನಪಾಗುವುದೇ ಶಂಕರ್ ನಾಗ್, ಇಂದು ಅವರು ಬದುಕಿದ್ದಾರೆ 67ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದರು. ಆಟೋರಾಜ ಚಿತ್ರದ ಮೂಲಕ ಲಕ್ಷಾಂತರ ಆಟೋ ಚಾಲಕರ ಮನಗೆದ್ದ ಶಂಕರಣ್ಣ, ಆಟೋ ಚಾಲಕರಲ್ಲಿ ಸ್ವಾಭಿಮಾನದ ಭಾವನೆ ಮೂಡಿಸಿದ್ದರು.
ಶಂಕರಣ್ಣನ ಬಾಲ್ಯ:1954 ರಲ್ಲಿ ಕರ್ನಾಟಕದ ಹೊನ್ನಾವರದಲ್ಲಿ ತಾಲೂಕಿನ ಮಲ್ಲಾಪುರ ಎಂಬ ಪುಟ್ಟ ಹಳ್ಳಿಯಲ್ಲಿ ಶಂಕರ್ ನಾಗ್ ಅವರು ಜನಿಸಿದರು.ಶಂಕರ್ ನಾಗ್ ಅವರ ತಂದೆ ನಾಗರಕಟ್ಟೆ ಸದಾನಂದ ಅವರು ಬಾಲ್ಯದಲ್ಲಿ ಶಂಕರನಾಗ್ ಅವರನ್ನು ಎಂದು ಪ್ರೀತಿಯಿಂದ ಕರೆಯುತ್ತಿದ್ದರು. ಶಂಕರ್ ನಾಗ್ ಅವರು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಮುಂಬೈಗೆ ತೆರಳಿದ್ದರು. ಮುಂಬೈನ ಮರಾಠಿ ಚಿತ್ರಮಂದಿರದ ಕಡೆಗೆ ಆಕರ್ಷಿತರಾದ ಶಂಕರನಾಗ್ ಅವರು, ತಮಗರಿವಿಲ್ಲದೆ ಮರಾಠಿ ರಂಗಭೂಮಿಯ ಹವ್ಯಾಸವನ್ನು ಬೆಳೆಸಿಕೊಂಡರು.

ಮರಾಠಿ ರಂಗಭೂಮಿಯಲ್ಲಿ ತೊಡಗಿಕೊಂಡವರು ತಮ್ಮ ಗೆಳೆಯರೊಂದಿಗೆ ಸೇರಿ ಚಿತ್ರಕತೆ ರಚಿಸಿದ ಮರಾಠಿ ಚಿತ್ರಕ್ಕೆ(1897) ಮರಾಠಿ ಚಿತ್ರಕ್ಕೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆಯಿತು.ಶಂಕರ್ ನಾಗ್ ಅವರು ಕೊಳಲು ಹಾರ್ಮೋನಿಯಂ ಹೀಗೆ ಹಲವಾರು ವಾದ್ಯಗಳನ್ನು ನುಡಿಸುವ ಕಲಿತರು, ಮರಾಠಿ ನಾಟಕಗಳ ಮೂಲಕ ತಮ್ಮ ವೃತ್ತಿ ಜೀವನವನ್ನು ಪ್ರಾರಂಭ ಮಾಡಿದರು. ಗಿರೀಶ್ ಕಾರ್ನಾಡ್ ಅವರ
ಒಂದಾನೊಂದು ಕಾಲದಲ್ಲಿ ಚಿತ್ರದ ಮೂಲಕ ಎಂಟ್ರಿ: ‘ಒಂದಾನೊಂದು ಕಾಲದಲ್ಲಿ ‘ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಒಂದಾನೊಂದು ಕಾಲದಲ್ಲಿ ಚಿತ್ರದ ಅಭಿನಯಕ್ಕೆ ಸ್ಪರ್ಧಾತ್ಮಕ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ನಟ ಪ್ರಶಸ್ತಿಗೆ ಭಾಜನರಾದರು. ಸಾಂಗ್ಲಿಯಾನ, ಗೀತಾ, ಮಿಂಚಿನ ಓಟ, ಒಂದು ಮುತ್ತಿನ ಕಥೆ, ನೋಡಿ ಸ್ವಾಮಿ ನಾವಿರೋದೆ ಹೀಗೆ, ಸೇರಿದಂತೆ ಸುಮಾರು 97 ಸಿನಿಮಾಗಳಲ್ಲಿ ಅಭಿನಯಿಸಿ ಪ್ರೇಕ್ಷಕರನ್ನು ರಂಜಿಸಿದರು. ಒಂದು ಮುತ್ತಿನ ಕಥೆ ಯಲ್ಲಿ ಪ್ರಥಮ ಬಾರಿಗೆ ಸಮುದ್ರದಾಳದಲ್ಲಿ ಕ್ಯಾಮೆರಾ ಹಿಡಿದು ಚಿತ್ರೀಕರಸಿದ ಹೆಮ್ಮೆ ಇವರದ್ದು.

ಶಂಕರ್ ನಾಗ್ ಅವರು ನಟರ ಅಲ್ಲದೆ ನಿರ್ದೇಶನದಲ್ಲೂ ಸೈ ಎನಿಸಿಕೊಂಡಿದ್ದರು. ಮಿಂಚಿನ ಓಟ, ದೂರದರ್ಶನಕ್ಕಾಗಿ ಖ್ಯಾತ ಬರಹಗಾರ ಆರ್ ಕೆ ನಾರಾಯಣ್ ರವರು ರಚಿಸಿದ ಮಾಲ್ಗುಡಿ ಡೇಸ್ ಕಾದಂಬರಿಯನ್ನು ನಿರ್ದೇಶಿಸಿ ರಾಷ್ಟ್ರಮಟ್ಟದಲ್ಲಿ ಪ್ರಖ್ಯಾತಿ ಪಡೆದರು.ಕನ್ನಡ ಚಿತ್ರರಂಗವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ಸಾಮರ್ಥ್ಯ ಶಂಕರಣ್ಣರವರಿಗೆ ಮಾತ್ರ ಇತ್ತು. ಬೆಂಗಳೂರು ಮೆಟ್ರೋವನ್ನು ನಿರ್ಮಿಸಲು ಅಂದಿನ ಕಾಲದಲ್ಲೇ ಯೋಚಿಸಿದ್ದರು ಶಂಕರಣ್ಣ.
ಶಂಕರ್ ನಾಗ್ ಅವರ ದಾಂಪತ್ಯದ ಬದುಕು:
ಶಂಕರ್ ನಾಗ್ ಅವರ ಪತ್ನಿ ಅರುಂಧತಿನಾಗ್ ಅವರು ಕೂಡ ಕಲಾವಿದೆಯಾಗಿದ್ದ ರಿಂದ ಅವರನ್ನು ಇಷ್ಟಪಟ್ಟು ಮದುವೆಯಾದರು. ದಂಪತಿಗಳಿಗೆ ಹೆಣ್ಣು ಮಗು ಜನನವಾಯಿತು. ದಂಪತಿಗಳು ಸೇರಿ ಸಂಕೇತ್, ಅಂಜುಮಲ್ಲಿಗೆ, ಬ್ಯಾರಿಸ್ಟರ್, ಸಂಧ್ಯಾ ಛಾಯಾ, ನೋಡಿ ಸ್ವಾಮಿ ನಾವಿರೋದೆ ಹೀಗೆ, ಆಟ ಬೊಂಬಾಟ ನಾಗಮಂಡಲ ನಾಟಕಗಳ ನಿರ್ಮಾಣ ಮಾಡಿದರು.
ಮಡದಿ ಅರುಂಧತಿ ನಾಗ್ ಅವರ ನೆನಪಿನಲ್ಲಿ ಬೆಂಗಳೂರಿನ ಜೆಪಿ ನಗರದಲ್ಲಿ ರಂಗಶಂಕರ ವನ್ನು ಪ್ರಾರಂಭಿಸಿದರು. ರಂಗಭೂಮಿ ಕಲೆ ಮತ್ತು ಸಾಹಿತ್ಯ ಚಟುವಟಿಕೆಗಳಿಗೆ ಮೀಸಲಾಗಿರುವ ರಂಗಶಂಕರ ಹಲವು ದೇಶಗಳಲ್ಲಿ ಮನೆಮಾತಾಯಿತು.

ಶಂಕರ್ ನಾಗ್ ಅವರ ಕನಸುಗಳು: ನಂದಿ ಬೆಟ್ಟಕ್ಕೆ ರೋಪ್ ವೇ, ಬೆಂಗಳೂರಿಗೆ ಮೆಟ್ರೋ, ರಂಗಮಂದಿರ ಎಲ್ಲದಕ್ಕೂ ನಕ್ಷೆ ತಯಾರಿಸಿ ಅಂದಿನ ಮುಖ್ಯಮಂತ್ರಿಯಾಗಿದ್ದ ಶ್ರೀ ರಾಮಕೃಷ್ಣ ಹೆಗ್ಗಡೆ ಸರ್ಕಾರದ ಮುಂದಿಟ್ಟಿದ್ದರು.
1990ರಲ್ಲಿ ‘ ಜೋಕುಮಾರಸ್ವಾಮಿ’ ಆ ಕಾಲಕ್ಕೆ ಭಾರಿ ಯಶಸ್ಸು ಕಂಡ ನಾಟಕ. ನಾಟಕವನ್ನು ಸಿನಿಮಾ ಮಾಡಬೇಕು ಎಂದು ಶಂಕರ್ ನಾಗ್ ಅವರ ಕನಸಾಗಿತ್ತು. ಆ ಕೆಲಸಕ್ಕಾಗಿಯೇ ಬಾಗಲಕೋಟೆಯ ಮುಧೋಳ ತಾಲೂಕಿನ ಲೋಕ ಪುರಕ್ಕೆ ಹೋಗಬೇಕಿತ್ತು.
ಶಂಕರಣ್ಣ ಕೊನೆಯ ದಿನ: 1990 ರಂದು ಸೆಪ್ಟೆಂಬರ್ 30 ರಂದು ಶಂಕರನಾಗ್ ತಮ್ಮ ಪತ್ನಿ ಅರುಂಧತಿನಾಗ್ ಹಾಗೂ ಮಗಳು ಕಾವ್ಯ ಜೊತೆ ಬೆಂಗಳೂರಿನಿಂದ ಹೊರಟಿದ್ದರು. ದಾವಣಗೆರೆಯ ಅನಗೋಡು ಬಳಿ ಶಂಕರ್ ನಾಗ್ ಅವರಿದ್ದ ಕಾರು ಲಾರಿಗೆ ಡಿಕ್ಕಿ ಹೊಡೆಯಿತು. ಘಟನೆಯಲ್ಲಿ ಶಂಕರ್ ನಾಗ್ ಹಾಗೂ ಅವರ ಕಾರು ಚಾಲಕ ಸ್ಥಳದಲ್ಲೇ ಮೃತಪಟ್ಟರು. ಕನ್ನಡ ನಾಡು ಅಪ್ರತಿಮ ನಟನನ್ನು ಕಳೆದುಕೊಂಡಿತು. ಶಂಕರ್ ನಾಗ್ ಅವರ ನಿಧನದ ಸುದ್ದಿ ಕೇಳಿ ಅಭಿಮಾನಿಗಳಿಗೆ ಸಿಡಿಲು ಬಡಿದಂತಾಯಿತು.
ಕನಸನ್ನು ಕಾರ್ಯರೂಪಕ್ಕೆ ತರುವ ಮುಂಚೆಯೇ ಶಂಕರನಾಗ್ ದುರ್ಮರಣಕ್ಕೀಡಾದರು. ಇಂದಿಗೂ ಲಕ್ಷಾಂತರ ಅಭಿಮಾನಿಗಳ ಮನಸ್ಸಿನಲ್ಲಿ ಮನೆಮಾತಾಗಿರುವ ಶಂಕರ್ ನಾಗ್ ಅಜರಾಮರವಾಗಿದ್ದಾರೆ.