ನವದೆಹಲಿ: ವಿಮಾನ ಪ್ರಯಾಣಿಕರಿಗೆ ಈ ಸುದ್ದಿ ಸಂತಸ ತರಲಿದೆ. ಹೌದು, ಇನ್ನು ಮುಂದೆ ವಿಮಾನ ಪ್ರಯಾಣ ಮಾಡಲು ನೀವು ಟಿಕೆಟ್ ಖರೀದಿ ಮಾಡಲು ಹೊಸ ಯೋಜನೆಯೊಂದನ್ನು ಪರಿಚಯಿಸುತ್ತಿದೆ ಸ್ಪೈಸ್ ಜೆಟ್. ನೀವು ಟಿಕೆಟ್ ಖರೀದಿ ಮಾಡಲು ಕಂತುಗಳಲ್ಲಿ ಪಾವತಿ ಮಾಡಬಹುದು.
ಸ್ಪೈಸ್ ಜೆಟ್ ವಿಮಾನಯಾನ ಕಂಪನಿಯು ವಿಮಾನ ಟಿಕೆಟ್ ದರವನ್ನು ಮೂರು ಅಥವಾ 12 ತಿಂಗಳ ಕಂತುಗಳಲ್ಲಿ ಪಾವತಿಸುವ ಹೊಸ ಯೋಜನೆಗೆ ಸೋಮವಾರ ಚಾಲನೆ ನೀಡಿದೆ.

ಹೊಸ ಯೋಜನೆಯ ಅಡಿಯಲ್ಲಿ, ಗ್ರಾಹಕರು ಹೆಚ್ಚುವರಿ ಶುಲ್ಕ ಅಥವಾ ಬಡ್ಡಿ ಪಾವತಿಯ ಗೊಡವೆ ಇಲ್ಲದೆಯೇ ಟಿಕೆಟ್ ಮೊತ್ತವನ್ನು ಮೂರು ತಿಂಗಳ ಇಎಂಐ ಮೂಲಕ ಪಾವತಿ ಮಾಡಬಹುದು ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.
ಇಎಂಐ ಯೋಜನೆಯನ್ನು ಪಡೆಯಲು ಗ್ರಾಹಕರು ಪ್ಯಾನ್ ಸಂಖ್ಯೆ, ಆಧಾರ್ ಸಂಖ್ಯೆ ಅಥವಾ ವಿಐಡಿ ನೀಡಬೇಕಾಗುತ್ತದೆ. ಅಲ್ಲದೆ ಒಂದು ಬಾರಿ ಬಳಸಬಹುದಾದ ಪಾಸ್‌ವರ್ಡ್ (ಒಟಿಪಿ) ಮೂಲಕ ದೃಢೀಕರಿಸಬೇಕಾಗುತ್ತದೆ.
ಇದನ್ನೂ ಓದಿ: ರಾಜ್ಯದಲ್ಲಿ ಇನ್ನೆರಡು ದಿನ ಧಾರಾಕಾರ ಮಳೆ ಸಾಧ್ಯತೆ!
ಮೊದಲ ಇಎಂಐ ಕಂತನ್ನು ಗ್ರಾಹಕರು ತಮ್ಮ ಯುಪಿಐ ಐಡಿ ನೀಡಿ ಪಾವತಿಸಬೇಕಾಗುತ್ತದೆ. ಗ್ರಾಹಕರ ಯುಪಿಐ ಐಡಿಯಿಂದ ಇಎಂಐ ಮೊತ್ತವನ್ನು ಕಡಿತ ಮಾಡಲಾಗುತ್ತದೆ. ಇಎಂಐ ಯೋಜನೆಯನ್ನು ಪಡೆಯಲು ಗ್ರಾಹಕರು ತಮ್ಮ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮಾಹಿತಿ ನೀಡುವ ಅಗತ್ಯ ಇಲ್ಲ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.