ಆತ್ಮೀಯ ಓದುಗರೇ, ಕಳೆದ ಅಕ್ಟೋಬರ್ 29 ನೇ ತಾರೀಖು ಕರುನಾಡಿನ ಪಾಲಿಗೆ ಅತ್ಯಂತ ಕರಾಳ ದಿನವಾಗಿತ್ತು. ಅಸಂಖ್ಯಾತ ಅಭಿಮಾನಿಗಳು ತಮ್ಮ ನೆಚ್ಚಿನ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ (Power Star Puneeth Rajkumar) ಅವರ ಅಕಾಲಿಕ ನಿಧನದಿಂದಾಗಿ ಸಾಕಷ್ಟು ನೋವನ್ನು ಅನುಭವಿಸಿದ್ದರು. ಪುನೀತ್ ರಾಜಕುಮಾರ ಅವರು ಇನ್ನಿಲ್ಲ ಎಂಬ ವಿಷಯವನ್ನು ಅವರ ಕುಟುಂಬದವರು ಮಾತ್ರವಲ್ಲದೇ ದೇಶದಾದ್ಯಂತ ಕೋಟ್ಯಾಂತರ ಅಭಿಮಾನಿಗಳು ಇಂದಿಗೂ ನಂಬಲೂ ಸಾಧ್ಯವಾಗುತ್ತಿಲ್ಲ. ಪುನೀತ್ ಅವರು ನಮ್ಮನ್ನೆಲ್ಲ ಬಿಟ್ಟು ಹೋಗಿ ಇಂದಿಗೆ 11 ದಿನಗಳು ಕಳೆದುಹೋಗಿವೆ. ಇಂದು ಸಹ ಅವರ ಸಮಾಧಿ ಸ್ಥಳಕ್ಕೆ ನಿತ್ಯ ಸಾವಿರಾರು ಲಕ್ಷಾಂತರ ಅಭಿಮಾನಿಗಳು ಭೇಟಿ ನೀಡಿ ತಮ್ಮ ನೆಚ್ಚಿನ ನಟನಿಗೆ ಪ್ರೀತಿಯ ನಮನಗಳನ್ನು ಸಲ್ಲಿಸುತ್ತಿದ್ದಾರೆ.

ಇದರ ಮಧ್ಯೆ ಕಳೆದ ವಾರ ಯು ಟ್ಯೂಬ್ (YouTube) ನಲ್ಲಿ ಹಲವಾರು ವಿದೇಶಿಗರು ತಾವು ಪುನೀತ್ ರಾಜಕುಮಾರ ಅವರ ದಿವ್ಯ ಆತ್ಮದ (Pure Soul) ಜೊತೆಗೆ ಸಂವಹನ ನಡೆಸಿದ್ದೇವೆ ಎಂದು ಹೇಳಿಕೊಂಡು ಅದರ ಬಗ್ಗೆ ವಿಡಿಯೋಗಳನ್ನು ಹರಿಬಿಟ್ಟಿದ್ದಾರೆ. ಹೌದು ವಿಕ್ಷಕರೇ ಇಂದಿನ ಈ ತಾಂತ್ರಿಕ (Technology Era) ಯುಗದಲ್ಲಿ ಈ ತರಹದ ವಿಷಯಗಳನ್ನು ನಂಬುವುದು ಅಸಾಧ್ಯ ಆದರೆ ಪುನೀತ್ ರಾಜಕುಮಾರ ಅವರ ವಿಷಯದಲ್ಲಿ ಇದು ನಿಜವಾದರೆ ಖಂಡಿತ ಕೋಟ್ಯಾಂತರ ಅಭಿಮಾನಿಗಳು ಸಂತಸ ಪಡುತ್ತಾರೆ. ಅಂದ ಹಾಗೆ ಆ ವಿಡಿಯೋಗಳನ್ನು ನೋಡಿ ಅದರ ಆಧಾರದ ಮೇಲೆ ಈ ವರದಿಯನ್ನು ಸಿದ್ದಪಡಿಸಲಾಗಿದ್ದು ಈ ಕುರಿತು ಸತ್ಯಾಸತ್ಯತೆಗಳು ನಿಗೂಡವಾಗಿರಲಿವೆ.
ಅಭಿಮಾನಿಗಳು ಮತ್ತು ಕುಟುಂಬದವರಿಗೆ ‘ಮಿಸ್ ಯು ಲಾಟ್’ ಎಂದು ತಿಳಿಸಿದ ಅಪ್ಪು – ಇತ್ತಿಚೇಗೆ ಆತ್ಮಗಳ ಜೊತೆಗೆ ಸಂವಹನ ನಡೆಸುವ ಬಗ್ಗೆ ತೀವ್ರ ಸಂಶೋಧನೆ ನಡೆಸುತ್ತಿರುವ ಅಮೆರಿಕಾದ ಖ್ಯಾತ ಲೇಖಕ ಜೋಶುವಾ ಲೋಯಿಸ್ (Joshua Louis) ಅವರು ಪುನೀತ್ ರಾಜಕುಮಾರ ಅವರ ಆತ್ಮದ ಜೊತೆಗೆ ಮಾತನಾಡಿದ್ದರೆನ್ನಲಾದ ವೀಡಿಯೊವೊಂದನ್ನು ತಮ್ಮ ಯುಟ್ಯೂಬ್ ಚಾನೆಲ್ ಹೋಪ್ – ಪ್ಯಾರಾನಾರ್ಮಲ್ (HOPE – Paranormal) ನಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಬಳಿ ಇರುವ ವಿಶಿಷ್ಟ ಸ್ಪಿರೀಟ್ ಬಾಕ್ಸ್ (Spirit Box) ಮೂಲಕ ತಾವು ಆತ್ಮದೊಂದಿಗೆ ಸಂವಹನ ನಡೆಸಿದ್ದಾಗಿ ಅವರು ಹೇಳಿಕೊಂಡಿದ್ದಾರೆ. 11.27 ನಿಮಿಷದ ಈ ವಿಡಿಯೋದಲ್ಲಿ ಹಲವಾರು ವಿಷಯಗಳನ್ನು ತೋರಿಸಿದ್ದಾರೆ.

ಇವರು ಕೇಳುವ ಪ್ರಶ್ನೆಗಳಿಗೆ ಅತ್ತ ಕಡೆಯಿಂದ ಅಜ್ಞಾತ ಧ್ವನಿಯೊಂದು ಪ್ರತಿಕ್ರಿಯೆ ಕೊಡುತ್ತಿರುತ್ತದೆ. ಇನ್ನೂ ಈ ಸೇಷನ್ನಲ್ಲಿ ಜೋಶುವಾ ಲೋಯಿಸ್ ಅಭಿಮಾನಿಗಳು ಮತ್ತು ಕುಟುಂಬಸ್ಥರ ಬಗ್ಗೆ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಆ ಧ್ವನಿ ‘ಮಿಸ್ ಯು ಲಾಟ್’ (Miss you Lot) ಎಂದು ಹೇಳುತ್ತದೆ. ಕೊನೆಯಲ್ಲಿ ನೀವು ದೇವರನ್ನು ನೋಡಿದಿರಾ ಎಂದು ಕೇಳಿದಾಗ ಅತ್ತ ಕಡೆಯಿಂದ “ಗಾಡ್ ಇಸ್ ಲವ್ – ‘ಶಿವ’ (God is Love – Shiva) ಎನ್ನುವ ಉತ್ತರ ಬರುತ್ತದೆ.

ಈ ಕುರಿತು ಲೇಖಕ ಜೋಶುವಾ ಲೋಯಿಸ್ “ಭಾರತೀಯ ನಟ “ಅಪ್ಪು” ಅಂದರೆ ಪುನೀತ್ ರಾಜ್‌ಕುಮಾರ್ ಅವರ ದಿವ್ಯ ಆತ್ಮದ ಜೊತೆ ಮಾತನಾಡುವಾಗ ನಾನು ಅತ್ಯಂತ ಪ್ರಬಲ ಪ್ರತಿಕ್ರಿಯೆಗಳನ್ನು ಸೆರೆಹಿಡಿದಿದ್ದೆನೆ. ಎಂದಿದ್ದಾರೆ.
ಇದನ್ನು ನಂಬುವುದು ಬಿಡುವುದು ಅವರವರ ನಂಬಿಕೆಗಳಿಗೆ ಸೀಮಿತವಾಗುತ್ತದೆ. ಕೆಲವರು ಇದು ಸುಳ್ಳು ಅಂತ ವಾದಿಸಿದರೆ ಮತ್ತೆ ಕೆಲವರು ಇದು ನಿಜ ಅಂತ ವಾದಿಸುತ್ತಾರೆ ಆದರೆ ಸೃಷ್ಟಿಯ ಅಂತ್ಯದವರೆಗೂ ವಾದ ಪ್ರತಿವಾದಗಳು ಇದ್ದೇ ಇರುತ್ತದೆ ಎಂಬುದು ಸತ್ಯ ಏಕೆಂದರೆ ಇದು ಸಾಧ್ಯವಿಲ್ಲ ಎನ್ನುವವರ ಬಳಿಯು ನಿಖರವಾದ ವೈಜ್ಞಾನಿಕ ಪುರಾವೇಗಳಿಲ್ಲ ಹಾಗೇಯೆ ಇದು ಸಾಧ್ಯ ಎನ್ನುವವರ ಬಳಿಯು ಯಾವುದೇ ವೈಜ್ಞಾನಿಕ ಧೃಡಿಕರಣಗಳಿಲ್ಲ. ಒಟ್ಟಿನಲ್ಲಿ ಇದೊಂದು ಭೇಧಿಸಲಾಗದ ಅಂಶವೆನ್ನುವುದು ಮಾತ್ರ ನಿಜ. ಈ ವಿಷಯದಲ್ಲಿ ನಿಮ್ಮ ಅಭಿಪ್ರಾಯಗಳೇನು ಅನ್ನುವುದನ್ನು ತಪ್ಪದೇ ಕಾಮೆಂಟ್ ಮಾಡಿ ತಿಳಿಸಿ.