ಬೆಂಗಳೂರು(ನ.8): Puneeth Rajkumar: ಕಂಠೀರವ ಸ್ಟುಡಿಯೋದಲ್ಲಿ ಇಂದು ಪುನೀತ್ ರಾಜಕುಮಾರ್ ಅವರ ಪುಣ್ಯತಿಥಿ ಅಂಗವಾಗಿ ಅವರ ಸಮಾಧಿಗೆ ಕುಟುಂಬದವರು ಪೂಜೆ ಸಲ್ಲಿಸುವ ಮೂಲಕ ಕಾರ್ಯ ಮಾಡಲಿದ್ದಾರೆ.
12 ಗಂಟೆಯ ನಂತರ ಸಮಾಧಿ ದರ್ಶನಕ್ಕೆ ಅವಕಾಶ:
ಪುನೀತ್ ರಾಜಕುಮಾರ್ ಅವರು ನಮ್ಮನ್ನು ಅಗಲಿ ಇಂದಿಗೆ 11 ದಿನಗಳಾಗಿದೆ. ಇಂದಿಗೂ ಅಭಿಮಾನಿಗಳು ಸಮಾಧಿಗೆ ಬಂದು ನಮನ ಸಲ್ಲಿಸುತ್ತಿದ್ದಾರೆ. ಇಂದು ಪುಣ್ಯತಿಥಿ ಆದರಿಂದ ಮಧ್ಯಾಹ್ನದವರೆಗೂ ಅಪ್ಪು ಸಮಾಧಿಗೆ ಭೇಟಿ ನೀಡಲು ಅಭಿಮಾನಿಗಳಿಗೆ ಅವಕಾಶವಿರುವುದಿಲ್ಲ.

ಸಮಾಧಿ ದರ್ಶನಕ್ಕೆ ಅಭಿಮಾನಿಗಳ ಸಾಲು:
ಪುನೀತ್ ರಾಜಕುಮಾರ್ ಅವರ ಸಮಾಧಿಗೆ ಕುಟುಂಬವರ್ಗದವರು ಹಾಲು ತುಪ್ಪ ಕಾರ್ಯ ನೆರವೇರಿಸಿದ ಬಳಿಕ ಅಪ್ಪು ಅವರ ಸಮಾಧಿ ದರ್ಶನ ಮಾಡಿಕೊಡಲಾಗಿತ್ತು. ಪ್ರತಿನಿತ್ಯ ಸಾವಿರಾರು ಅಭಿಮಾನಿಗಳು ಸಮಾಧಿಗೆ ಬಂದು ನಮನ ಸಲ್ಲಿಸುತ್ತಿದ್ದಾರೆ.
ಸಮಾಧಿಯ ಬಳಿ ಪೂಜೆ:
ಪುನೀತ್ ರಾಜಕುಮಾರ್ ಅವರ ಮನೆಯಲ್ಲಿ ಬೆಳ್ಳಂಬೆಳಗ್ಗೆಯೇ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದ್ದಾರೆ.ಬಳಿಕ ಪುನೀತ್ ರಾಜಕುಮಾರ್ ಅವರಿಗೆ ಇಷ್ಟವಾದ ತಿಂಡಿ ತಿನಿಸುಗಳನ್ನು ಸಮಾಧಿಯ ಮುಂದೆ ಇಟ್ಟು ಪೂಜೆ ಮಾಡಲಾಗುತ್ತದೆ. ಈ ಕಾರ್ಯಕ್ಕೆ ಕುಟುಂಬದವರ ಜೊತೆ ಕೇವಲ ಆಪ್ತರಿಗೆ ಮಾತ್ರ ಪ್ರವೇಶ ನೀಡಲಾಗುತ್ತಿದೆ.
ಅನ್ನ ಸಂತರ್ಪಣೆ ಕಾರ್ಯಕ್ರಮ:
ನಾಳೆ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಪುಣ್ಯತಿಥಿ ಕಾರ್ಯದ ಅಂಗವಾಗಿ ಅನ್ನಸಂತರ್ಪಣೆ ನಡೆಯಲಿದೆ.ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳು ಸೇರಿದಂತೆ ಎಲ್ಲರೂ ಪಾಲ್ಗೊಳ್ಳಲಿದ್ದಾರೆ.