ಬೆಂಗಳೂರು (ನ.8) : Puneeth Rajkumar ದಿ. ನಟ ಪುನೀತ್ ರಾಜಕುಮಾರ್ ಅವರ ನಿಧನದಿಂದ ಭಾವುಕರಾಗಿ ಇರುವ ನಟ ರಮೇಶ್ ಅರವಿಂದ್ ಅವರು ಇಂದಿಗೂ ಪುನೀತ್ ಅವರನ್ನು ನೆನೆಯುತ್ತಾರೆ.ಹಿಂದಿನ ದಿನ ಕಣ್ಣಲ್ಲಿ ಕಣ್ಣಿಟ್ಟು ಎರಡು ಗಂಟೆಗಳ ಕಾಲ ಮಾತನಾಡಿದ ವ್ಯಕ್ತಿಯ ಕಣ್ಣು ದಾನ ಮಾಡಿದರು ಎಂದರೆ ಇಂದಿಗೂ ನಂಬುವುದಕ್ಕೆ ಸಾಧ್ಯವಿಲ್ಲ ಎಂದಿದ್ದಾರೆ ರಮೇಶ್ ಅರವಿಂದ್.
ಬುದ್ಧನ ಮಾತು ಇಂದಿಗೂ ಕಾಡುತ್ತಿದೆ
ಅಂದು ಗುರುಕಿರಣ್ ಅವರ ಮನೆಯಲ್ಲಿ ನಡೆದ ಹುಟ್ಟುಹಬ್ಬದ ಪಾರ್ಟಿಯಲ್ಲಿ ನಾನು ಬುದ್ಧನ ಮಾತನ್ನು ಹೇಳಿದ್ದೆ ” ಬುದ್ಧ ಹೇಳುತ್ತಾನೆ ಬದುಕಿನಲ್ಲಿ ನಾವು ಇಷ್ಟ ಪಡುವ ಎಲ್ಲಾ ವಿಷಯಗಳು ಒಂದಲ್ಲ ಒಂದು ದಿನ ಕಳೆದುಕೊಳ್ಳಬೇಕಾಗುತ್ತದೆ”ಚಂದದ ಕೂದಲು ಸುಂದರ ಹಲ್ಲುಗಳು ಎಲ್ಲಾ ಬಿದ್ದುಹೋಗುತ್ತದೆ. ಯವ್ವನ ಅಂತಹ ಸಂಭ್ರಮ ಪಡುತ್ತೇವೆ, ಆಗ ಮುಪ್ಪು ಕಾಲಿಂಗ್ ಬೆಲ್ ಹೊಡೆಯುವುದಕ್ಕೆ ಕಾಯುತ್ತಿರುತ್ತದೆ ಎಂದು ಪುನೀತ್ ಗೆ ಹೇಳಿದ್ದೆ.
ಆಗ ಪುನೀತ್ ಅವರು ಹೌದು ಸರ್, ‘ಬೆಳಕು ಹೋದಮೇಲೆ ರಾತ್ರಿ ಬರಲೇಬೇಕು ಅಲ್ವಾ ಅದೇ ಅಲ್ವಾ ಜೀವನ ಅಂತ ಹೇಳಿದ್ದರು.ಮರುದಿನ ಬೆಳಗ್ಗೆ ‘ಆ ಬೆಳಕು ಹೋಗುತ್ತದೆ, ಪುನೀತ್ ಅವರನ್ನು ಕಳೆದುಕೊಳ್ಳುತ್ತೇವೆ ಅಂದರೆ ಊಹಿಸಲು ಸಾಧ್ಯವಿಲ್ಲ’ ಎಂದೂ ರಮೇಶ್ ಅರವಿಂದ್ ಭಾವುಕರಾದರು.ಅಪ್ಪು ನನಗೆ ಇಷ್ಟವಾಗುವುದಕ್ಕೆ ಹಲವು ಕಾರಣಗಳಿವೆ.

ಪುನೀತ್ ಅವರ ಕನಸಿನ ಕೂಸು
ಪುನೀತ್ ರಾಜಕುಮಾರ್ ಅವರ ಸಾಮಾಜಿಕ ಕೆಲಸಗಳ ಜೊತೆ ಅವರ ಒಂದು ಕನಸಿನ ಯೋಜನೆ ಬಂದು ಬಾಕಿ ಉಳಿದಿತ್ತು ಅದೇ ‘ಗಂಧದಗುಡಿ’ಕೋವಿಡ್ ಸಮಯದಲ್ಲಿ ಮನೆಯಲ್ಲೇ ಸುಮ್ಮನಿರಲು ಆಗುವುದಿಲ್ಲ ಎಂದು ಒಂದು ನೂತನ ಯೋಜನೆ ಹಾಕಿಕೊಂಡಿದ್ದರು. ಕೋವಿಡ್ ಸಮಯದ ನಂತರ ಪುನೀತ್ ಹಾಗೂ ಅವರ ಸ್ನೇಹಿತರು ಒಂದು ತಂಡವನ್ನು ಕಟ್ಟಿಕೊಂಡು ಕರ್ನಾಟಕದಲ್ಲಿರುವ ಅರಣ್ಯ ಪ್ರದೇಶಗಳು, ಜಲಪಾತಗಳ ಕುರಿತು ವಿಡಿಯೋ ಮಾಡಿದ್ದರು.
ವಿಡಿಯೋ ಚಿತ್ರೀಕರಣಗಳು ಮುಗಿದು ಎಡಿಟಿಂಗ್ ಹಂತಕ್ಕೆ ಬಂದಿತ್ತು. ಡಿಸ್ಕವರಿ ಚಾನೆಲ್ ನಲ್ಲಿ ಬರುವ ಮ್ಯಾನ್ ವರ್ಸಸ್ ವೈಲ್ಡ್ ಕಾರ್ಯಕ್ರಮಕ್ಕಿಂತಲೂ ವಿಭಿನ್ನ ವಾಗಿತ್ತು. ಪುನೀತ್ ರವರು ಹೇಳುವಂತೆ ‘Man with Wild‘ ತರಹದ ಯೋಜನೆಯಾಗಿದೆ ಎಂದು ಹೇಳಿದ್ದರು. ಕಾಡಿನಲ್ಲಿರುವ ಬುಡಕಟ್ಟು ಜನಾಂಗದವರ ಜೊತೆ ಪುನೀತ್ ರಾಜಕುಮಾರ್ ಅವರು ಸಂವಾದ ನಡೆಸಿದ್ದರು.
‘ಗಂಧದಗುಡಿ ಡಾಕ್ಯುಮೆಂಟರಿ ‘ ಪುನೀತ್ ರವರ ಪತ್ನಿ ಅಶ್ವಿನಿ ಅವರು ಶುರು ಮಾಡಿದಂತಹ PRK ಪ್ರೊಡಕ್ಷನ್ ಹೌಸ್ ನಲ್ಲಿ ‘ಗಂಧದಗುಡಿ ಡಾಕ್ಯುಮೆಂಟರಿ ‘ ಎಂಬ ಹೆಸರಿನಲ್ಲಿ ಮೂಡಿ ಬರುವಂತಹ ಕನಸು ಹೊಂದಿದ್ದರು. ಡಾ. ರಾಜಕುಮಾರ್ ಹಾಗೂ ಡಾ. ವಿಷ್ಣುವರ್ಧನ್ ಅವರು ಅಭಿನಯಿಸಿದ್ದ ಗಂಧದಗುಡಿ ಎಂಬ ಹೆಸರನ್ನೇ ತಮ್ಮ ಯೋಜನೆಗೂ ಹಾಕಿಕೊಂಡಿದ್ದರು. ಬಹಳಷ್ಟು ಕನಸುಗಳನ್ನು ಬೆಳೆಸಿಕೊಂ ಡಿದ್ದ ಪುನೀತ್ ರಾಜಕುಮಾರ್ ಅವರ ಯೋಜನೆಯು ಕನಸಾಗಿ ಉಳಿಯಿತು.
ಪುನೀತ್ ರಾಜಕುಮಾರ್ ಅವರು ನಮ್ಮೊಂದಿಗೆ ಇಂದು ಇಲ್ಲವಾದರೂ ಅವರು ನಮಗೆ ಒಳ್ಳೆಯ ನೆನಪುಗಳನ್ನು ಬಿಟ್ಟು ಹೋಗಿದ್ದಾರೆ. ನೆನಪುಗಳೊಂದಿಗೆ ಸಂಭ್ರಮಿಸಬೇಕು ಅಷ್ಟೇ, ಬೇರೆ ದಾರಿಯಿಲ್ಲ ಎಂದು ಹೇಳಿದರು.