2021 ರ ಟಿ20 ವಿಶ್ವಕಪ್ (T20 World Cup 2021) ನಲ್ಲಿ ಸೆಮಿಫೈನಲ್ (Semifinal) ಗೆ ಅರ್ಹತೆ ಪಡೆಯುವ ಟೀಂ ಇಂಡಿಯಾ (Team India) ದ ಕನಸು ಕನಸಾಗಿಯೇ ಉಳಿಯಿತು. ಅಫ್ಘಾನಿಸ್ತಾನ (Afghanistan) ವಿರುದ್ಧ ನ್ಯೂಜಿಲೆಂಡ್ (New Zealand) ಗೆಲುವಿನೊಂದಿಗೆ ಟೀಂ ಇಂಡಿಯಾ ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿದೆ. ಈ ಪಂದ್ಯದಲ್ಲಿ ಕಿವೀಸ್ ತಂಡ ಸೋತಿದ್ದರೆ ಭಾರತ ಟಾಪ್-4ರಲ್ಲಿ ಮುನ್ನಡೆಯಬಹುದಿತ್ತು. ಆದರೆ ಅದು ಆಗಲಿಲ್ಲ. ಈ ಬಾರಿಯ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ (Virat Kohli) ಕೆಲವೊಂದು ಗ್ರಹಿಕೆಗೆ ಮೀರಿದಂತ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಆ ಎಲ್ಲಾ ನಿರ್ಧಾರಗಳ ಬಗ್ಗೆ ಇಂದು ನಾವು ನಿಮಗೆ ತಿಳಿಸುತ್ತೇವೆ.

ಮಹತ್ವದ ಪಂದ್ಯದಲ್ಲಿ ಹಳಿತಪ್ಪಿದ ಬ್ಯಾಂಟಿಂಗ್ ಕ್ರಮಾಂಕ – ಭಾರತ ತಂಡವು ಅತ್ಯಂತ ವಿಫಲ ಯೋಜನೆಯೊಂದಿಗೆ ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದಲ್ಲಿ ಕಣಕ್ಕಿಳಿಯಿತು. ಪಾಕಿಸ್ತಾನ (Pakistan) ವಿರುದ್ಧದ ಮೊದಲ ಪಂದ್ಯದಲ್ಲಿ ರೋಹಿತ್-ರಾಹುಲ್ (Rohit-Rahul) ಓಪನಿಂಗ್ ಮಾಡಿದ್ದರು. ಮುಂದಿನ ಪಂದ್ಯದಲ್ಲಿ ರಾಹುಲ್ ಮತ್ತು ಇಶಾನ್ ಕಿಶನ್ ಓಪನಿಂಗ್ ಗೆ ಬಂದರು. ಈ ಎರಡು ಪ್ರಮುಖ ಪಂದ್ಯಗಳಲ್ಲಿ ಬ್ಯಾಟಿಂಗ್ ಕ್ರಮಾಂಕದ ಈ ಬದಲಾವಣೆ ಯಾರಿಗೂ ಸಹ ಅರ್ಥವಾಗಲಿಲ್ಲ.
ರಾಹುಲ್ ಮತ್ತು ಇಶಾನ್ ಹಿಂದೆಂದೂ ಜೊತೆಯಾಗಿ ಇನ್ನಿಂಗ್ಸ್ ಆರಂಭಿಸಿರಲಿಲ್ಲ. ಟೂರ್ನಿಯಲ್ಲಿ ವಿರಾಟ್ ಆಡುವ ಕ್ರಮಾಂಕದ ಬಗ್ಗೆಯೂ ಗೊಂದಲವಿತ್ತು. ವಿಶ್ವಕಪ್‌ಗೆ ಮುಂಚಿನವರೆಗೂ ವಿರಾಟ್ ಆರಂಭಿಕನಾಗಿ ಕಣಕ್ಕಿಳಿಯಲು ತಯಾರಿ ನಡೆಸಿದ್ದರು. ವಿರಾಟ್ ಈ ಹಿಂಧೆ ನಡೆದ ಐಪಿಎಲ್‌ನಲ್ಲಿ ಆರಂಭಿಕನಾಗಿ ಕ್ರೀಸ್‌ಗೆ ಬಂದಿದ್ದರು. ಆದರೆ ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ 3 ನೇ ಕ್ರಮಾಂಕದಲ್ಲಿ ಬಂದರೆ ನಂತರದ ಪಂದ್ಯದಲ್ಲಿ 4 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದರು.
ಟೂರ್ನಿಯಲ್ಲಿ ಈವರೆಗೂ ಲೆಗ್ ಸ್ಪಿನ್ನರ್‌ಗಳ ಅದ್ಭುತ ಪ್ರದರ್ಶನ – 2021 ರ ಟಿ20 ವಿಶ್ವಕಪ್‌ನಲ್ಲಿ ಸೆಮಿಫೈನಲ್ ತಲುಪಿದ ನಾಲ್ಕು ತಂಡಗಳು ಅದ್ಭುತ ಲೆಗ್ ಸ್ಪಿನ್ನರ್‌ಗಳನ್ನು ಹೊಂದಿವೆ. ಭಾರತ ವಿರುದ್ಧದ ಮೊದಲ ಪಂದ್ಯದಲ್ಲಿ ಪಾಕಿಸ್ತಾನದ ಶಾದಾಬ್ ಖಾನ್ 4 ಓವರ್‌ಗಳಲ್ಲಿ ಕೇವಲ 22 ರನ್ ನೀಡಿ ಒಂದು ವಿಕೆಟ್ ಕೂಡ ಪಡೆದರು. ಇದೇ ವೇಳೆ ಎರಡನೇ ಪಂದ್ಯದಲ್ಲಿ ನ್ಯೂಜಿಲೆಂಡ್ ನ ಇಶ್ ಸೋಧಿ ಭಾರತದ ಬ್ಯಾಟ್ಸ್ ಮನ್ ಗಳ ನಿದ್ದೆಗೆಡಿಸಿದ್ದರು. ಸೋಧಿ 4 ಓವರ್ ಗಳಲ್ಲಿ ಕೇವಲ 17 ರನ್ ನೀಡಿ 2 ವಿಕೆಟ್ ಪಡೆದು ಪಂದ್ಯಶ್ರೇಷ್ಠರೂ ಆದರು.
ಇವರಲ್ಲದೆ ಆಸ್ಟ್ರೇಲಿಯಾದ ಆಡಮ್ ಝಂಪಾ ಮತ್ತು ಇಂಗ್ಲೆಂಡ್‌ನ ಆದಿಲ್ ರಶೀದ್ ಕೂಡ ಇದುವರೆಗೆ ಟೂರ್ನಿಯಲ್ಲಿ ಅದ್ಭುತವಾಗಿ ಬೌಲಿಂಗ್ ಮಾಡಿದ್ದಾರೆ, ಆದರೆ ಟೀಂ ಇಂಡಿಯಾ ಒಂದೇ ಪಂದ್ಯದಲ್ಲಿ ತಮ್ಮ ಲೆಗ್ ಸ್ಪಿನ್ನರ್‌ಗೆ ಅವಕಾಶ ನೀಡಲಿಲ್ಲ. ಪಂದ್ಯಾವಳಿಯುದ್ದಕ್ಕೂ ರಾಹುಲ್ ಚಹಾರ್ ಮಾತ್ರ ವೀಕ್ಷಕರಾಗಿ ಉಳಿದರು. ಅದೇ ಸಮಯದಲ್ಲಿ, ಕಳೆದ ನಾಲ್ಕು ವರ್ಷಗಳಿಂದ ಟಿ20ಯಲ್ಲಿ ಟೀಮ್ ಇಂಡಿಯಾದ ಯಶಸ್ವಿ ಬೌಲರ್‌ಗಳಲ್ಲಿ ಒಬ್ಬರಾಗಿದ್ದ ಯುಜ್ವೇಂದ್ರ ಚಹಾಲ್ ಅವರು ಟಿ20 ವಿಶ್ವಕಪ್‌ಗೆ ಆಯ್ಕೆಯಾಗಿರಲಿಲ್ಲ.
ಟೀಂ ಇಂಡಿಯಾ ಒಂದು ತಂಡವಾಗಿ ಎಲ್ಲೂ ಕಾಣಿಸಲಿಲ್ಲ – ಭಾರತೀಯ ಆಟಗಾರರು ಐಪಿಎಲ್‌ನಲ್ಲಿ ವಿವಿಧ ತಂಡಗಳ ಭಾಗವಾಗಿದ್ದರು. ಅವರು ವಿಶ್ವಕಪ್‌ನಲ್ಲಿ ಒಂದು ತಂಡವಾಗಿ ಆಡಲು ಸಾಧ್ಯವಾಗಲಿಲ್ಲ. ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ತೋರುತ್ತಿರುವ ರೀತಿಯ ಸಮನ್ವಯವನ್ನು ಮತ್ತು ಪರಸ್ಪರ ಹೊಂದಾಣಿಕೆಯನ್ನು ಈ ಪ್ರಮುಖ ಪಂದ್ಯಾವಳಿಯಲ್ಲಿ ತೋರಿಸಲು ಸಾಧ್ಯವಾಗಲಿಲ್ಲ.